ಉಡುಪಿ: ಮುತ್ತೂಟ್ ಫೈನಾನ್ಸ್ ಪ್ರೈ. ಲಿ.ನ ಮ್ಯಾನೇಜರ್ ಮತ್ತು ಕಸ್ಟೋಡಿಯನ್ ಆಗಿದ್ದ ಆರೋಪಿ ಉಡುಪಿ ಕುಂಜಿಬೆಟ್ಟು ರಜಥಪೀಠದ ಮೋಹನ್ ಎಂಬಾತ ಇತರರ ಹೆಸರಿನಲ್ಲಿ ಚಿನ್ನವನ್ನು ಅಡವಿರಿಸದೇ ಚಿನ್ನವನ್ನು ಅಡಮಾನ ಇರಿಸಿ ಸಾಲ ತೆಗೆದಂತೆ ದಾಖಲಾತಿಗಳಲ್ಲಿ ನಮೂದಿಸಿ ತನ್ನ ಸ್ವಂತಕ್ಕೆ ರೂ. 3,77,800 ನ್ನು ಬಳಸಿಕೊಂಡು ನಂಬಿಕೆ ದ್ರೋಹ ಮೋಸ ಮಾಡಿದ್ದಾಗಿ ಫೈನಾನ್ಸ್ ಅಧಿಕಾರಿಯು ದೂರನ್ನು ನೀಡಿದ್ದರು. ಈ ಪ್ರಕರಣದ ತನಿಖೆಯನ್ನು ಆಗಿನ ಸಬ್ ಇನ್ಸ್ಪೆಕ್ಟರ್ ಕೆ.ಎನ್ ಗಜೇಂದ್ರಪ್ಪ ತನಿಖೆ ನಡೆಸಿ ದೊಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಪ್ರಕರಣವು ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ದ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್ ರವರು ಆರೋಪಿಗೆ ಭಾ.ದಂ.ಸಂ ಕಲಂ 409, 420, 477(ಎ), ರಡಿ 1 ವರ್ಷ 6 ತಿಂಗಳು ಸಾದಾ ಸಜೆ ಮತ್ತು 3,000 ರೂ. ದಂಡ ಶಿಕ್ಷೆ ವಿಧಿಸಿ ಡಿ. 13 ರಂದು ತೀರ್ಪು ನೀಡಿರುತ್ತಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.
Comments are closed.