ಕರಾವಳಿ

ನಕಲಿ ಹೆಸರಿನಲ್ಲಿ ರೈಲ್ವೆ ಟಿಕೇಟ್ ಖರೀದಿ; ಓರ್ವನ ವಿರುದ್ಧ ಪ್ರಕರಣ ದಾಖಲು

Pinterest LinkedIn Tumblr

ಉಡುಪಿ: ಬೇರೆ ಬೇರೆ ಹೆಸರಿನಲ್ಲಿ ಐಡಿ ಸೃಷ್ಠಿಸಿ, ಕಮಿಷನ್ ಆಧಾರದಲ್ಲಿ ರೈಲ್ವೆ ಇ-ಟಿಕೇಟ್ಗಳನ್ನು ಮಾರಾಟ ಮಾಡುತ್ತಿದ್ದ, ಸುರತ್ಕಲ್ ಬಸ್ ನಿಲ್ದಾಣದ ಸಮೀಪದಲ್ಲಿರುವ ಸ್ಯಾನ್ಸಿಟಿ ಟೂರ್ ಟ್ರಾವೆಲ್ಸ್ ಆಂಡ್ ಪಬ್ಲಿಸಿಟಿ ಶಾಪ್ ರಾಮಕೃಷ್ಣ ಪೂಜಾರಿ ಎಂಬುವವರ ವಿರುದ್ದ ಆರ್.ಪಿ.ಎಫ್ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ.

ಪರಿಶೀಲನೆಯ ಸಮಯದಲ್ಲಿ ಈತನ ಬಳಿ, 16,178 ರೂ ಮೌಲ್ಯದ 14 ಮುಂಗಡ ಪ್ರಯಾಣದ ರೈಲು ಟಿಕೆಟ್ ಮತ್ತು 19,904 ರೂ. ಮೌಲ್ಯದ ಈಗಾಗಲೇ ಬಳಕೆಯಾದ 21 ರೈಲು ಟಿಕೆಟ್ಗಳು ಪತ್ತೆಯಾಗಿವೆ. ಆತನ ವಿರುದ್ಧ ರೈಲ್ವೆ ಕಾಯ್ದೆಯ ಕ್ರೈಂ ನಂ. 145/2019 ಯು/ಎಸ್ 143 ಪ್ರಕಾರ ವಿಚಾರಣೆಯನ್ನು ಕೈಗೆತ್ತಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಕಾರ್ಯಚರಣೆಯಲ್ಲಿ ಆರ್.ಪಿ.ಎಫ್ ಇನ್ಸ್ಪೆಕ್ಟರ್ ಸಂತೋಷ್ ಗಾಂವ್ಕರ್, ಸಿಬ್ಬಂದಿಗಳಾದ ಮಕ್ವಾನ, ಶಿಶುಪಾಲ, ಎಸ್.ಎ.ಕುಟೆ, ಮೊಹಮ್ಮದ್, ಕರುಣಾಕರ್ ಹಾಗೂ ಮಹಿಳಾ ಕಾನ್ಸ್ಟೇಬಲ್ ರೂಪಾ ನಾಯಕ್ ಭಾಗವಹಿಸಿದ್ದರು ಎಂದು ಆರ್.ಪಿ.ಎಫ್ ಪ್ರಕಟಣೆ ತಿಳಿಸಿದೆ.

Comments are closed.