ಕರಾವಳಿ

ದುಬೈಯ ಖ್ಯಾತ ಉದ್ಯಮಿ, ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಅವರ ಆಕ್ಕ್ಮೆ ಸಂಸ್ಥೆಗೆ ಯಶಸ್ವಿ ಇಪ್ಪತ್ತರ ಸಂಭ್ರಮ

Pinterest LinkedIn Tumblr

ಮಂಗಳೂರು : ದುಬೈಯ ಖ್ಯಾತ ಉದ್ಯಮಿ, ಕೊಡುಗೈ ದಾನಿ, ಪ್ರಸಿದ್ಧ ಗಾಯಕ ಹಾಗೂ ಚಿತ್ರ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಅವರ ಹೆಸರು ಕರಾವಳಿಯ ಜನರಿಗಷ್ಟೇ ಅಲ್ಲ, ಈಗೀಗ ಪೂರ್ಣ ಕನ್ನಡ ನಾಡಿಗೆ ಆವರಿಸಿಕೊಂಡಿಡು ಚಿರಪರಿಚಿತವಾಗಿದೆ.

ಸರಿಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ಮಂಗಳೂರಿನಿಂದ ಉದ್ಯೋಗ ಅರಸಿಕೊಂಡು ದೂರದ ದುಬೈ ಸೇರಿಕೊಂಡ ಹರೀಶ್ ಶೇರಿಗಾರ್ ಈಗ ದುಬೈನಲ್ಲಿ ಆಧುನಿಕ ವಿನ್ಯಾಸಗಳನ್ನು ಅಳವಡಿಸಿಕೊಂಡು ನಿರ್ಮಾಣವಾಗುವ ಕಟ್ಟಡಗಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಬೃಹತ್ ಉದ್ಯಮವನ್ನು ಕಟ್ಟಿ ನಿಲ್ಲಿಸಿದ್ದಾರೆ. ಅದರ ಹೆಸರೇ “ಆಕ್ಮೆ”.ಈಗ ಆ ಸಂಸ್ಥೆಗೆ ಯಶಸ್ವಿ ಇಪ್ಪತ್ತರ ಹರೆಯ. ಅದೂ ಹರೀಶರಷ್ಟೆ ಸುಂದರ,ಮೋಹಕ ಮತ್ತು ಪಾರದರ್ಶಕವಾಗಿದೆ. ಕುಶಲ ಕಾರ್ಮಿಕವರ್ಗ ಮತ್ತು ವಿಶಾಲ ಗ್ರಾಹಕವರ್ಗ ಹೊಂದಿರುವುದು “ಆಕ್ಮೆ” ಯ ಹೆಗ್ಗಳಿಕೆ ಎಂದೇ ಹೇಳಬೇಕು. ಸಾರ್ವಜನಿಕ ವಲಯದಲ್ಲಿ ಈ ಮಟ್ಟಿಗೆ ಸಮನ್ವಯ ಸಾಧಿಸಿ ಯಶಸ್ಸು ಕಾಣುವುದು ಸುಲಭದ ಮಾತಲ್ಲ.ಅದೂ ಬೇರೊಂದು ದೇಶದಲ್ಲಿ.

ಈ ಎಲ್ಲಾ ಯಶಸ್ಸಿನ ಹಿಂದಿನ ರೂವಾರಿ,ಶ್ರಮಿಕ ಮತ್ತಾರೂ ಅಲ್ಲ ಅವರೇ ಶ್ರೀ ಹರೀಶ್ ಶೇರಿಗಾರ್. ಕನ್ನಡದ ಬಗ್ಗೆ ಅಪಾರ ಗೌರವ, ಅಭಿಮಾನ ಅವರಿಗೆ. ಕನ್ನಡ ಎಂದರೆ ಕುಣಿಕುಣಿದು ಹಾಡುತ್ತಾರೆ.ಕನ್ನಡ ಭಾಷೆ, ನಾಡು-ನುಡಿ, ಸಂಸ್ಕೃತಿ ಮತ್ತು ಇಲ್ಲಿನ ಜನರ ಬಗ್ಗೆ ಎಲ್ಲಿಲ್ಲದ ಅಕ್ಕರೆ ತೋರುವ ಹರೀಶ್ ಅವರು ಬರಿ ವ್ಯವಹಾರಾಸಕ್ತಿಯನ್ನಷ್ಟೇ ಹೊಂದಿಲ್ಲ. ಲಲಿತ ಕಲೆಗಳಲ್ಲಿಯೂ ಅವರಿಗೆ ಸಮಾನ ಅಭಿರುಚಿ ಉಂಟು. ಸಂಗೀತದಲ್ಲಿ ವಿಶೇಷ ಒಲವು ಹೊಂದಿರುವ ಹರೀಶ್ ಶೇರಿಗಾರ್ ಸ್ವತಃ ಶುಶ್ರಾವ್ಯ ಹಾಡುಗಾರರೂ ಹೌದು. ಸಿನಿಮಾ ಕ್ಷೇತ್ರದಲ್ಲಿ ನಿರ್ಮಾಪಕರಾಗಿ ಸದಭಿರುಚಿ ಚಿತ್ರಗಳನ್ನು ತಯಾರಿಸಿ ಅಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. “ಮಾರ್ಚ್22, “ಯಾನ”, “ಗೇಣು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ”ಕನ್ನಡ ಚಿತ್ರಗಳನ್ನು ತೆರೆಗರ್ಪಿಸಿ ಈಗ ತಮ್ಮ ಮನೆ ಭಾಷೆ ತುಳು ವಿನಲ್ಲಿ”ಇಂಗ್ಲಿಷ್” ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಒಬ್ಬ ಮನುಷ್ಯ ಒಂದು ವಲಯದಲ್ಲಿ ಅನುಭವ ಪಡೆದು ಸುಮ್ಮನಾಗುತ್ತಾನೆ. ಹರೀಶ ಅವರ ಜಾಯಮಾನ ಅಂಥದ್ದಲ್ಲ. ಸಣ್ಣ ಸಮಯವಿರುವ ಬದುಕಿನಲ್ಲಿ ದೊಡ್ಡ ಸಾಧನೆ ಮಾಡಬೇಕು. ಕನಿಷ್ಠ ಆ ಪ್ರಯತ್ನದ ಹಾದಿಯಲ್ಲಾದರೂ ಇರಬೇಕು ಅನ್ನುವ ಹಂಬಲ ಅವರದು. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತರಾಗಿರುವ ಹರೀಶ್ ಅವರದ್ದು ಎಂದೂ ಬತ್ತದ ಉತ್ಸಾಹ,

ಅವರ ಮುಖದಲ್ಲಿ ಮಂದಹಾಸ ಸ್ವಂತ ಮನೆಮಾಡಿಕೊಂಡಿದೆ.ದಣಿವಿಗೆ ಅಲ್ಲಿ ಜಾಗವಿಲ್ಲ. ಇಷ್ಟಕ್ಕೆಲ್ಲ ಕಾರಣ ಬೇರಾರೂ ಅಲ್ಲ ಅವರೇ ಒನ್ ಅಂಡ್ ಓನ್ಲಿ goddess ಶ್ರೀಮತಿ ಶರ್ಮಿಳಾ ಶೇರಿಗಾರ್. ಹರೀಶ್ ಅವರ ಧರ್ಮಪತ್ನಿ. ಮಿಸ್ಟರ್ ಶೇರಿಗಾರ್ ಅವರ ಹೆಜ್ಜೆ ಹೆಜ್ಜೆಯಲ್ಲೂ ಮಿಸ್ಸೆಸ್ ಶೇರಿಗಾರ್ ಕಾಣಸಿಗುತ್ತಾರೆ.

ಶೇರಿಗಾರ್ ಕುಟುಂಬಕ್ಕೆ ಇನ್ನು ಮುಂದೆಯೂ ದೇವರ ಅನುಗ್ರಹ ಲಭಿಸಲಿ. ಇವರಿಂದ ಜನರಿಗೆ ಒಳ್ಳೆಯದಾಗಲಿ “ಅಕ್ಮೆ” ನಿರಂತರ ನಿರ್ಭಯಯವಾಗಿರಲಿ. ಶ್ರೀರಸ್ತು ಶುಭಮಸ್ತು. ಇಪ್ಪತ್ತರ ಹರೆಯದ ಆಕ್ಕ್ಮೆ ಸಂಸ್ಥೆ ೭೦ಕ್ಕೇರಲಿ… ನೂರರ ಸಂಭ್ರಮ ಆಚರಿಸುವಂತಾಗಲಿ ಎಂದು ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ನ ಎಲ್ಲಾ ವರದಿಗಾರರ ಅಶಯ, ಹಾರೈಕೆ.

ಕೃಪೆ: Acme Int. Movies Whatsapp Group: +91 88847 22599

Comments are closed.