ಕರಾವಳಿ

ಕ್ರೈಂ ಪೊಲೀಸ್ ಎಂದು ಬೆದರಿಸಿ ಕಾರ್ಕಳದಲ್ಲಿ ಯುವತಿಯ ಹಣ ಎಗರಿಸಿದ ಖದೀಮ!

Pinterest LinkedIn Tumblr

ಉಡುಪಿ: ಮಂಗಳೂರಿನಿಂದ ಕಾರ್ಕಳದ ಆನೆಕೆರೆಯ ಬಸದಿ ವೀಕ್ಷಣೆಗಾಗಿ ಬಂದಿದ್ದ ಒಂದೇ ಸಂಸ್ಥೆಯಲ್ಲಿ ಕೆಲಸ ಮಡುವ ಯುವಕ-ಯುವತಿಗೆ ತಾನು ಪೊಲೀಸ್ ಎಂದು ನಂಬಿಸಿ ಹಣ ವಂಚಿಸಿದ ಬಗ್ಗೆ ಯುವತಿ ಕಾರ್ಕಳ ಪೊಲೀಸರಿಗೆ ದೂರು ನೀಡಿದ್ದಾರೆ.

ಒಂದೇ ಸಂಸ್ಥೆಯಲ್ಲಿ ಮಂಗಳೂರು ಸಿಟಿ ಸೆಂಟರ್‌‌ನಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ತನ್ನ ಸ್ನೇಹಿತನೊಂದಿಗೆ ಬುಧವಾರ ಕಾರ್ಕಳಕ್ಕೆ ಬಂದಿದ್ದರು. ಆನೆಕೆರೆ ಬಳಿಯಿದ್ದ ಸಂದರ್ಭ ಸುಮಾರು 45 ವರ್ಷ ವಯಸ್ಸಿನ ದಡೂತಿ ವ್ಯಕ್ತಿಯೊಬ್ಬ ಅವರ ಬಳಿಗೆ ಬಂದು ತಾನು ಕ್ರೈಮ್ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದನು. ಇಬ್ಬರ ವಿಳಾಸವನ್ನು ಕೇಳಿ ನಿಮ್ಮಿಬ್ಬರ ವಿಚಾರವನ್ನು ಇಲ್ಲಿಗೆ ಮುಗಿಸುತ್ತೇನೆ ಎಂದು ಹೇಳಿದವನೇ ಯುವತಿಯ ಕೈಯಲ್ಲಿದ್ದ ಚಿನ್ನದ ರಿಂಗ್‌ ಕೇಳಿದ್ದು ಆಕೆ ಕೊಡಲು ಒಪ್ಪದಿದ್ದಾಗ ಯುವತಿ ಬಳಿಯಲ್ಲಿದ್ದ 700 ರೂಪಾಯಿ ಆತನಿಗೆ ನೀಡಿದ್ದು ಈ ಹಣವನ್ನು ಸರ್‌ ರವರಿಗೆ ನಿಡುತ್ತೇನೆ ತನಗೆ ಏನಾದರೂ ಕೂಡಲೇ ಬೇಕು ಎಂದು ದುಂಬಾಲು ಬಿದ್ದಿದ್ದಾನೆ. ಅಷ್ಟೇ ಅಲ್ಲದೇ ಆಕೆಗೆ ಒಟ್ಟಡ ಹಾಕಿ ತಾನು ತಂದಿದ್ದ ಬೈಕಿನಲ್ಲಿ ಯುವತಿಯನ್ನು ಕುಳ್ಳಿರಿಸಿಕೊಂಡು ಕಾರ್ಕಳದಲ್ಲಿದ್ದ ಎ.ಟಿ.ಎಂ ಗೆ ಕರೆದುಕೊಂಡು ಹೋಗಿ ಆಕೆ ಎ.ಟಿ.ಎಂ ಕಾರ್ಡ್‌ನಿಂದ 1000 ರೂಪಾಯಿ ಹಣವನ್ನು ಎ.ಟಿ.ಎಂ ನಿಂದ ಡ್ರಾ ಮಾಡಿಸಿ ತೆಗೆದುಕೊಂಡು ಪರಾರಿಯಾಗಿದ್ದಾನೆ.

ವ್ಯಕ್ತಿ ಕನ್ನಡದಲ್ಲಿ ಉತ್ತರ ಕರ್ನಾಟಕ ಭಾಷೆಯಲ್ಲಿ ಮಾತನಾಡುತ್ತಿದ್ದು ಆತನ ನಡವಳಿಕೆಯಿಂದ ನಕಲಿ ಪೊಲೀಸ್ ಎಂಬ ಸಂಶಯದಿಂದ ಯುವತಿಯು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.

Comments are closed.