ಕರಾವಳಿ

ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಬಿಜೆಪಿ ಸೇರಲು ಬೆಂಗಳೂರಿಗೆ ದೌಡಾಯಿಸಿದ ಅನರ್ಹ ಶಾಸಕರು

Pinterest LinkedIn Tumblr

ನವದೆಹಲಿ, ನವೆಂಬರ್.13: ಅನರ್ಹಗೊಂಡಿರುವ ಎಲ್ಲಾ ಶಾಸಕರೂ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ ಬೆನ್ನಲ್ಲೇ 17 ಅನರ್ಹ ಶಾಸಕರು ನಾಳೆ ಬೆಳಗ್ಗೆ 10ಕ್ಕೆ ಬಿಜೆಪಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅನರ್ಹ ಶಾಸಕರ ಬಗ್ಗೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ರಾಜ್ಯ ರಾಜಕೀಯದ ಲೆಕ್ಕಾಚಾರವನ್ನು ಬದಲಾವಣೆ ಮಾಡಿದೆ. ಅನರ್ಹ ಶಾಸಕರು ಬಿಜೆಪಿ ಸೇರಲು ಮುಹೂರ್ತ ನಿಗದಿಯಾಗಿದೆ. ಬುಧವಾರ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರು ದೆಹಲಿಯಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಭೇಟಿ ಮಾಡಿದರು. ಸಿ. ಪಿ. ಯೋಗೇಶ್ವರ ಜೊತೆ ಸಂತೋಷ್ ಭೇಟಿ ಮಾಡಿದ ಶಾಸಕರು ಪಕ್ಷ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇಂದು ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ರಮೇಶ್‌ ಕುಮಾರ್‌ ನಾಳೆ ನಾವೆಲ್ಲ 17 ಮಂದಿ ಶಾಸಕರು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದೇವೆ ಅಂತ ಹೇಳಿದ್ದಾರೆ ಎನ್ನಲಾಗಿದೆ.

ರಾಷ್ಟ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಡಳಿತವನ್ನು ಇಷ್ಟಪಟ್ಟು ನಾವು ಬಿಜೆಪಿಯನ್ನು ಸೇರುತ್ತಿದ್ದೇವೆ ಅಂತ ಇದೇ ವೇಳೆ ಅನರ್ಹ ಶಾಸಕ ನಾರಾಯಣ ಗೌಡ ಕೂಡ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

ಅನರ್ಹ ಶಾಸಕ ಬಿಸಿ ಪಾಟೀಲ್‌ ಅವರು ಕೂಡ ಮಾತನಾಡಿ ನಾಳೆ ಬೆಳಗ್ಗೆ ಬಿಜೆಪಿಗೆ ಸೇರಿಕೊಳ್ಳಲಿದ್ದೇವೆ, ನಾಳೆ ಪಕ್ಷಕ್ಕೆ ಸೇರಿದ ಬಳಿಕ ಉಪಚುನಾವಣೆಯ ಟಿಕೆಟ್‌ ಬಗ್ಗೆ ತಿಳಿಯಲಿದೆ ಅಂತ ಹೇಳಿದ್ದಾರೆ ಎಂದು ತಿಳಿದು ಬಂದಿದೆ. .

Comments are closed.