ಕರಾವಳಿ

ಅಕ್ಟೋಬರ್ 11ರಂದು ಮಂಗಳೂರಿನಲ್ಲಿ ಸರ್ವೋತ್ತಮ ಶೆಟ್ಟಿಯವರಿಗೆ ರಂಗಚಾವಡಿ ಪ್ರಶಸ್ತಿ – ಬಯ್ಯಮಲ್ಲಿಗೆ ನಾಟಕ ಪ್ರದರ್ಶನ

Pinterest LinkedIn Tumblr

ಮಂಗಳೂರು, ಆಕ್ಟೋಬರ್.06 : ರಂಗಚಾವಡಿ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯ ಆಶ್ರಯದಲ್ಲಿ ರಂಗಚಾವಡಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಬಯ್ಯ ಮಲ್ಲಿಗೆ ನಾಟಕ ಪ್ರದರ್ಶನ ಅಕ್ಟೋಬರ್ 11ರಂದು ಶುಕ್ರವಾರ ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿದೆ.

2019ರ ಸಾಲಿನ ರಂಗ ಚಾವಡಿ ಪ್ರಶಸ್ತಿ ಯು‌ಎ‌ಇ ಕನ್ನಡ ಮತ್ತು ತುಳು ಭಾಷಾ ಸಾಂಸ್ಕೃತಿಕ ರಾಯಭಾರಿ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಅಬುಧಾಬಿ ಪಡೆಯಲಿದ್ದಾರೆ. ರಂಗ ಚಾವಡಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ ವಿವೇಕ್ ರೈ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಚಲನ ಚಿತ್ರದ ನಿರ್ಮಾಪಕ ಡಾ| ಸಂಜೀವ ದಂಡೆಕೇರಿ ವಹಿಸಲಿದ್ದಾರೆ ಎಂದು ರಂಗಚಾವಡಿ ಸಾಹಿತ್ಯಿಕ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ತಿಳಿಸಿದರು.

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಬುಧಾಬಿ ಯುನೈಟೆಡ್ ಯು‌ಎ‌ಇ ಎಕ್ಸ್‌ಚೇಂಜ್‌ನ ನಿಕಟಪೂರ್ವ ಅಧ್ಯಕ್ಷ ಸಿ‌.ಎ ಸುಧೀರ್ ಕುಮಾರ್ ಶೆಟ್ಟಿ, ಉದ್ಯಮಿ ಯಾದವ ಕೋಟ್ಯಾನ್ ಪೆರ್ಮುದೆ, ಚಲನ ಚಿತ್ರ ನಿರ್ಮಾಪಕ ಹರೀಶ್ ಬಂಗೇರ ದುಬಾಯಿ, ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ಕಿಶೋರ್ ಡಿ ಶೆಟ್ಟಿ, ದುಬಾಯಿ ಬಿಲ್ಲವಾಸ್ ಸಂಘಟನೆಯ ಮಾಜೀ ಅಧ್ಯಕ್ಷ ಸತೀಶ್ ಪೂಜಾರಿ ದುಬಾಯಿ, ಫರಂಗಿಪೇಟೆ ರೋಟರಿ ಕ್ಲಬ್‌ನ ಅಧ್ಯಕ್ಷ ಜಯರಾಮ ಶೇಖ, ಚಲನ ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಥಾಣೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ವೇಣು ಗೋಪಾಲ ಶೆಟ್ಟಿ ಉದ್ಯಮಿ ರಮಾನಾಥ ಶೆಟ್ಟಿ ಬೈಕಂಪಾಡಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ, ಹೆಜಮಾಡಿ ಸ್ಕಂದ ಡೆವಲಪರ್‍ಸ್‌ನ ಮಾಲಕ ದಯಾನಂದ ಹೆಜಮಾಡಿ ಮೊದಲಾದವರು ಭಾಗವಹಿಸಲಿದ್ದಾರೆ.

ಬಳಿಕ ದುಬಾಯಿಯ ಗಮ್ಮತ್ ಕಲಾವಿದರಿಂದ ಡಾ.ಸಂಜೀವ ದಂಡೆಕೇರಿಯವರ ಬಯ್ಯಮಲ್ಲಿಗೆ ನಾಟಕ ವಿಶ್ವನಾಥ ಶೆಟ್ಟಿ ದುಬಾಯಿ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.

ದುಬಾಯಿಯ ಗಮ್ಮತ್ ಕಲಾವಿದರಿಂದ ಮಂಗಳೂರಿನಲ್ಲಿ ಬಯ್ಯಮಲ್ಲಿಗೆ ಪ್ರದರ್ಶನ

ಇಲ್ಲಿನ ಕಲಾ ತಂಡಗಳು ಸಾಗರದಾಟಿ ಕೊಲ್ಲಿ ಸಹಿತ ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿದೆ. ಆದರೆ ಇದೇ ಮೊದಲ ಬಾರಿಗೆ ಕೊಲ್ಲಿ ರಾಷ್ಟ್ರವಾಗಿರುವ ದುಬಾಯಿಯ ಕಲಾ ತಂಡವೊಂದು ಮಂಗಳೂರಿಗೆ ಬಂದು ನಾಟಕ ಪ್ರದರ್ಶನ ನೀಡಲಿದೆ. ಅಕ್ಟೋಬರ್ 11ರಂದು ಶುಕ್ರವಾರ ಮಂಗಳೂರಿನ ಪುರಭವನ ಇದಕ್ಕೆ ಸಾಕ್ಷಿಯಾಗಲಿದ್ದು, ಕಿಶೋರ್ ಡಿ ಶೆಟ್ಟಿಯವರ ಲಕುಮಿ ನಾಟಕ ತಂಡದ ಸಹಕಾರದಲ್ಲಿ ಮಂಗಳೂರಿನ ರಂಗಚಾವಡಿ ಸಾಂಸ್ಕೃತಿಕ ಸಂಘಟನೆಯ ವಾರ್ಷಿ ಕೋತ್ಸ ವದಲ್ಲಿ ಸುಮಾರು 55 ವರ್ಷ ಹಿಂದಿನ ಡಾ| ಸಂಜೀವ ದಂಡೇಕೇರಿ ಯವರ ಬಯ್ಯಮಲ್ಲಿಗೆ ನಾಟಕವನ್ನು ದುಬಾಯಿಯ ಗಮ್ಮತ್ ಕಲಾವಿದರು ಅಭಿನಯಿಸಿ ತೋರಿಸಲಿದ್ದಾರೆ.

ಉದ್ಯೋಗ ಅರಸಿ ದುಬಾಯಿಗೆ ಹೋಗಿ ಅಲ್ಲಿ ವಿವಿಧ ಉನ್ನತ ಉದ್ಯೋಗದಲ್ಲಿರುವ ಕಲಾಸಕ್ತರೇ ಅಲ್ಲಿ ಗಮ್ಮತ್ ಕಲಾವಿದರು ಹೆಸರಲ್ಲಿ ಕಲಾ ತಂಡವೊಂದನ್ನು ಕಟ್ಟಿದ್ದು, ಅವರು ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಬಂದು ನಾಟಕ ಪ್ರದರ್ಶನ ನೀಡಲಿದ್ದಾರೆ.

ವಿಶ್ವನಾಥ ಶೆಟ್ಟಿ ದುಬಾಯಿ ಅವರ ನಿರ್ದೇಶನ ದಲ್ಲಿ ಡಾ| ಸಂಜೀವ ದಂಡಕೇರಿ ಅವರ ಅಪಾರ ಖ್ಯಾತಿ ಗಳಿಸಿರುವ ಬಯ್ಯಮಲ್ಲಿಗೆ ನಾಟಕವು ಅಂದು ಪ್ರದರ್ಶನವಾಗಲಿದ್ದು, ಶುಭಕರ್ ಬೆಳಪು ಅವರು ಸಂಗೀತದಲ್ಲಿ ಸಹಕರಿ ಸಲಿದ್ದಾರೆ. ಗಮ್ಮತ್ ಕಲಾವಿದರು ತಮ್ಮ ಕರ್ಮಕ್ಷೇತ್ರದಲ್ಲಿ ಕಲಾಭಿರುಚಿ ಯನ್ನು ಬೆಳೆಸಿಕೊಂಡು ಪೋಷಿಸು ತ್ತಿರುವುದು ಶ್ಲಾಘನೀಯವೆಂದೇ ಹೇಳಬೇಕಾಗಿದೆ. ಕೆಲಸದ ಒತ್ತಡದ ನಡುವೆಯೂ ಅವರು ರಂಗ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ.

ಗಮ್ಮತ್ ಕಲಾವಿದರು ಈ ನಾಟಕಕ್ಕಾಗಿ ಭರ್ಜರಿ ಹೋಂವರ್ಕ್ ಮಾಡಿದ್ದಾರೆ. ರಂಗಚಾವಡಿಯ ಕಳೆದ ವರ್ಷದ ವಾರ್ಷಿಕೋತ್ಸವದಲ್ಲೂ ಬಯ್ಯಮಲ್ಲಿಗೆ ನಾಟಕವನ್ನು ಸುರೇಶ್ ಶೆಟ್ಟಿ ಜೋಡುಕಲ್ಲು ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಾಗಿತ್ತು. ಆ ನಾಟಕವು ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರ ಸೀಡಿಯನ್ನು ತರಿಸಿಕೊಂಡು ಗಮ್ಮತ್ ಕಲಾವಿದರು ಕಳೆದ ಫೆಬ್ರವರಿಯಲ್ಲಿ ದುಬಾಯಿಯಲ್ಲಿ ಪ್ರದರ್ಶನ ನೀಡಿದ್ದರು. ಇದೀಗ ಅಕ್ಟೋಬರ್ 11ರಂದು ತಾಯ್ನಾಡಿ ನಲ್ಲಿ ಪ್ರದರ್ಶನ ನೀಡಲು ತಯಾರಿ ನಡೆಸುತ್ತಿದ್ದಾರೆ.

ಸುಮಾರು 55 ವರ್ಷ ಹಿಂದಿನ ನಾಟಕವನ್ನು ಈಗ ಪ್ರದರ್ಶಿಸುವುದು ಸಣ್ಣ ಸಂಗತಿಯೇನಲ್ಲ. ಅದೂ ಕೂಡ ಒಂದು ಹವ್ಯಾಸಿ ತಂಡವು ಇಂಥ ನಾಟಕವನ್ನು ಪ್ರದರ್ಶಿಸುವುದಕ್ಕೆ ಭಾರೀ ಸಿದ್ಧತೆ ಬೇಕಾಗಿದೆ. ಅವೆಲ್ಲ ವನ್ನೂ ದುಬಾಯಿಯ ಗಮ್ಮತ್ ಕಲಾವಿದರು ಮಾಡುತ್ತಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಕರಾವಳಿಯ ಸಾಂಸ್ಕೃತಿಕ ರಾಯಭಾರಿ ಎಂದೇ ಕರೆಸಿಕೊಳ್ಳುತ್ತಿ ರುವ ಸರ್ವೋತ್ತಮ ಶೆಟ್ಟಿ ಅಬುದಾಬಿ ಅವರಿಗೆ ರಂಗಚಾವಡಿ ವಾರ್ಷಿಕ ಪ್ರಶಸ್ತಿಯನ್ನೂ ಪ್ರದಾನಿಸಲಾಗುವುದು ಎಂದು ಜಗನ್ನಾಥ್ ಶೆಟ್ಟಿ ವಿವರಿಸಿದರು.

ಚಲನ ಚಿತ್ರದ ನಿರ್ಮಾಪಕ ಡಾ| ಸಂಜೀವ ದಂಡೆಕೇರಿ ಅವರು ಮಾತನಾಡಿ, ಬಯ್ಯಮಲ್ಲಿಗೆ ನಾಟಕಕ್ಕೆ ಈಗಲೂ ಬೇಡಿಕೆ ಇರುವುದು ಅದರಲ್ಲಿರುವ ಕಥೆಯ ಗಟ್ಟಿತನ ಮತ್ತು ಕೌಟುಂಬಿಕ ಭಾವನೆಗೆ ಸಾಕ್ಷಿ. ಆಗಿನ ಯಾವ ನಾಟಕವೂ ಈಗ ನೆನಪಿಗೇ ಬರದಂತಿರುವಾಗ, ಬಯ್ಯಮಲ್ಲಿಗೆ ಮಾತ್ರ ಈಗಲೂ ಪ್ರದರ್ಶನ ಕಾಣುತ್ತಿದೆ ಎಂಬುದು ಹೆಮ್ಮೆಯ ಸಂಗತಿ. ಅಲ್ಲದೆ ರಂಗಚಾವಡಿಯು ಸತತ ಎರಡನೇ ವರ್ಷವೂ ಇದೇ ನಾಟಕ ವನ್ನು ಪ್ರದರ್ಶಿಸುತ್ತಿರುವುದು ಅದರ ಮೇಲೆ ಇರುವ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿ. ಈ ನಾಟಕಕ್ಕೆ ಈಗಲೂ ಸಭಾಂಗಣವನ್ನು ಪ್ರೇಕ್ಷಕರನ್ನು ತುಂಬಿ ತುಳುಕಿಸುವ ಶಕ್ತಿ ಇದೆ ಎಂಬುದನ್ನು ಈ ಹಿಂದಿನ ಎಲ್ಲ ಪ್ರದರ್ಶನವೂ ಸಾಬೀತು ಮಾಡಿಸುತ್ತಿದೆ.

ಕಲಾವಿದರು: ವಾಸು ಶೆಟ್ಟಿ ಪೇಜಾವರ, ಚಿದಾನಂದ ಪೂಜಾರಿ ವಾಮಂಜೂರು, ಡೊನಾಲ್ಡ್, ಕೊರೆಯಾ ಪೆರ್ನಾಲ್, ಕಿರಣ್ ಶೆಟ್ಟಿ ದುಬಾಯಿ, ರೂಪೇಶ್ ಶೆಟ್ಟಿ ಕಲ್ಲಡ್ಕ, ದೀಪಕ್ ಎಸ್. ಪಿ ಕರ್ಮಾರ್, ಜೆಸ್ ಬಾಯಾರ್, ರಮೇಶ್ ಸುವರ್ಣ ಸಸಿಹಿತ್ಲು, ಸಂದೀಪ್ ದೇವಾಡಿಗ ಬರ್ಕೆ, ಪ್ರಶಾಂತ್ ನಾಯರ್ ಜೆಪ್ಪಿನ ಮೊಗರು, ಸುವರ್ಣ ಸತೀಶ್ ಪೂಜಾರಿ ಬೆಳಪು, ದೀಪ್ತಿ ದಿನರಾಜ್ ಪಡುಬಿದ್ರೆ, ಶಶಿ ಶೆಟ್ಟಿ ಹಿರಿಯಡ್ಕ, ಸತೀಶ್ ಉಳ್ಳಾಲ್, ಅಶೋಕ್ ಬೈಲೂರ್, ಸಂಗೀತ ಶುಭಕರ ಬೆಳಪು, ನಿರ್ದೇಶನ ವಿಶ್ವನಾಥ ಶೆಟ್ಟಿ ಪದವಿನಂಗಡಿ. ಒಟ್ಟಿನಲ್ಲಿ ವಿದೇಶದ ತಂಡ ವೊಂದು ಇದೇ ಮೊದಲ ಬಾರಿ ಮಂಗಳೂರಿಗೆ ಆಗಮಿಸುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಿರಿಯ ರಂಗನಟ, ನಿರ್ದೇಶಕ ವಿ.ಜಿ.ಪಾಲ್ ಅವರು ಕಾರ್ಯಕ್ರಮದ ಪೂರಕ ಮಾಹಿತಿ ನೀಡಿದರು.

Comments are closed.