ಕರಾವಳಿ

ಮಂಗಳೂರಿಗೆ ಬಂದಿದೆ ವಿವಿಧ ರಾಜ್ಯಗಳ ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕಾಟನ್ ಸಿಲ್ಕ್ ಸೀರೆಗಳ “ಬೃಹತ್ ಪ್ರದರ್ಶನ ಮೇಳ”

Pinterest LinkedIn Tumblr

ಮಂಗಳೂರು, ಅಕ್ಟೋಬರ್.10 : ರಾಜಸ್ಥಾನ ಆರ್ಟ್ ಮತ್ತು ಕ್ರಾಫ್ಟ್ ರವರ ಸಂಯೋಜನೆಯಲ್ಲಿ ಉತ್ತರ ಪ್ರದೇಶ, ಓರಿಸ್ಸಾ, ಗುಜರಾತ್, ತಮಿಳುನಾಡು, ಬಿಹಾರ್, ತೆಲಂಗಾಣ್ ಸೇರಿದಂತೆ ಹಲವಾರು ರಾಜ್ಯಗಳ ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕಾಟನ್ ಸಿಲ್ಕ್ ಸೀರೆಗಳ “ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ “ಕಾಟನ್ ಸಿಲ್ಕ್ ಎಂಡ್ ಕ್ರಾಪ್ಟ್ ಎಕ್ಸ್‌ಪೋ – 2019, ಅನ್ನು ನಗರದ ಬಂಟ್ಸ್ ಹಾಸ್ಟೇಲ್ ರಸ್ತೆಯ ಹೋಟೇಲ್ ವುಡ್ ಲ್ಯಾಂಡ್ಸ್ ನಲ್ಲಿ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ (ರಿ) ಇದರ ಸಂಸ್ಥಾಪರು ಹಾಗೂ ಶ್ರೀ ಕಟೀಲು ಮೇಳದ ಖ್ಯಾತ ( ದೇಶ ವಿದೇಶದಲ್ಲಿ ಖ್ಯಾತಿ ಪಡೆದ) ಭಾಗವತರಾದ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರು ಕ್ರಾಫ್ಟ್, ಕರಕುಶಲ ವಸ್ತುಗಳ ಮತ್ತು ಕಾಟನ್ ಸಿಲ್ಕ್ ಸೀರೆಗಳ “ಬೃಹತ್ ಪ್ರದರ್ಶನ ಹಾಗೂ ಮಾರಾಟ ಮೇಳ “ಕಾಟನ್ ಸಿಲ್ಕ್ ಎಂಡ್ ಕ್ರಾಪ್ಟ್ ಎಕ್ಸ್‌ಪೋ – 2019, ಅನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಹೊರ ರಾಜ್ಯಗಳ ಗ್ರಾಮೀಣ ಪ್ರತಿಭೆಗಳು ತಯಾರಿಸಿದಂತಹ ಕಲಾತ್ಮಕವಾದ ವಿವಿಧ ಶೈಲಿಯ ಕರಕುಶಲ ವಸ್ತುಗಳು ಇಂದು “ಕಾಟನ್ ಸಿಲ್ಕ್ ಎಂಡ್ ಕ್ರಾಪ್ಟ್ ಎಕ್ಸ್‌ಪೋ ಮೇಳ”ದ ಮೂಲಕ ನಮ್ಮ ಬಳಿಗೆ ಬಂದಿದೆ. ಈ ವಸ್ತುಗಳಿಗೆ ಉತ್ತೇಜನ ನೀಡುವ ಮೂಲಕ ನಾವು ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು.

ಇಲ್ಲಿ ಉತ್ತರ ಪ್ರದೇಶ, ಓರಿಸ್ಸಾ, ಗುಜರಾತ್, ತಮಿಳುನಾಡು, ಬಿಹಾರ್, ತೆಲಂಗಾಣ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ತಯಾರಾದ ಕ್ರಾಫ್ಟ್ ವಿವಿಧ ಕರಕುಶಲ ವಸ್ತುಗಳ ಹಾಗೂ ಕೈಮಗ್ಗ ಸೀರೆಗಳ ಬೃಹತ್ ಸಂಗ್ರಹವಿದ್ದು, ಹೊರ ರಾಜ್ಯಗಳಿಗೆ ಹೋಗದೇ ಇಲ್ಲಿಯೇ ನಮ್ಮ ಜನತೆ ಇದರ ಪ್ರಯೋಜನ ಪಡೆಯಬಹುದು. ಮಂಗಳೂರಿನ ಜನತೆಯ ಆಶೀರ್ವಾದದಿಂದ ಈ ಮೇಳವು ಅತ್ಯಂತ ಯಶಸ್ಸು ಕಾಣಲಿ ಎಂದು ಶುಭಾಹಾರೈಸಿದರು.

ಮಂಗಳೂರಿನ ಹೊಟೇಲ್ ವುಡ್‍ಲ್ಯಾಂಡ್ಸ್ ಮಾಲ್ಹಕ ಎರ್ಮಳ್ ರಮೇಶ್ ಭಟ್ ಮುಖ್ಯ ಅಥಿತಿಗಳಾಗಿದ್ದರು. “ಕಾಟನ್ ಸಿಲ್ಕ್ ಎಂಡ್ ಕ್ರಾಪ್ಟ್ ಎಕ್ಸ್‌ಪೋ ಮೇಳ”ದ ಸಂಯೋಜಕ ಮಹಾವೀರ್ ಹಾಗೂ ಅವಿಲ್ ಶರ್ಮಾ ಮೇಳದ ಕುರಿತು ಮಾಹಿತಿ ನೀಡಿದರು.

ಮಾರಾಟ ಮತ್ತು ಪ್ರದರ್ಶನ ; ಈ ಗ್ರಾಮೀಣ ಮೇಳದಲ್ಲಿ ಉತ್ತರ ಪ್ರದೇಶ, ಓರಿಸ್ಸಾ, ಗುಜರಾತ್, ತಮಿಳುನಾಡು, ಬಿಹಾರ್, ತೆಲಂಗಾಣ್ ಸೇರಿದಂತೆ ಹಲವಾರು ರಾಜ್ಯಗಳ ಕೈಮಗ್ಗದ ಸೀರೆ ಹಾಗೂ ಸಿಲ್ಕ್ ಸೀರೆಗಳು ಮತ್ತು ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದ್ದು, ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ.

ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಬಿಹಾರ್, ತೆಲಂಗಾಣ್ ರಾಜ್ಯಗಳ ಸಿಲ್ಕ್ ಸಾರಿ, ಮೈಸೂರ್ ಸಿಲ್ಕ್ ಸಾರಿ, ಓರಿಸ್ಸಾ ಸಿಲ್ಕ್ ಸೀರೆಗಳು, ಕಾಂತ ವರ್ಕ್ ಸಿಲ್ಕ್ ಸೀರೆಗಳು, ಕೋಸಿಯಾ ಕೈ ಮಗ್ಗದ ಸೀರೆಗಳು, ಬಾಗಲ್ಪುರ್ ಸಿಲ್ಕ್ ಸೀರೆಗಳು, ಬನರಸ್ ಸಿಲ್ಕ್ ಸಾರಿ, ವೆಜ್ ಡೈ ಬ್ಲಾಕ್ ಪ್ರಿಂಟೆಡ್ ಸೀರೆಗಳು, ಮಧುರೈ ಸುಗುಡಿ ಕಾಟನ್ ಸೀರೆಗಳು, ಸಾಂಬ್ಲಪುರಿ ಇಕ್ತಾ ಸೀರೆಗಳು, ಕೈಮಗ್ಗದ ಕಾಟನ್ ಸೀರೆಗಳು, ಚಾಂದಾರ್ ಕಾಟನ್ ಸೀರೆಗಳು, ಪೌಂಚಪಲ್ಲಿ ಕೈಮಗ್ಗದ ಸೀರೆಗಳು, ಫೋಲ್ಕರಿ ವಿನ್ಯಾಸದ ಪಾಟಿಯಾಲ, ಫೋಲ್ಕರಿ ಬೆಡ್ಶೀಟ್, ಹಾಗೂ ಸೋಫಾ ಸೆಟ್ ಕವರ್, ಸಿಲ್ಕ್ ಕುಶನ್ ಕವರ್, ರಾಜಸ್ಥಾನ್ ಬೆಡ್‌ಶೀಟ್‌ಗಳು  ಹಾಗೂ ಇನ್ನಿತರ ಕೈಮಗ್ಗದ ಸೀರೆಗಳು ಇಲ್ಲಿ ಲಭ್ಯವಿರುವುದು.

ಮಾತ್ರವಲ್ಲದೇ ಜೋಧ್ಪುರ್ ಕರಕುಶಲ ಮರದ ಪಿಠೋಪರಣಗಳು, ಸಾರಂಗ್ಪುರ್ ಮರದ ಪಿಠೋಪರಣಗಳು, ಹೈದಾರ್ಬಾದ್ ಕಪ್ಪು ಮೇಟಲ್ನ ವಿಗ್ರಹಗಳು, ಹಿತ್ತಳೆಯ ಕಲಾಕೃತಿಗಳು, ವಿಶೇಷ ಬೆಡ್ ಚಾಪೆಗಳು, ವಿದ್ಯುತ್ ಅಲಂಕಾರಿಕ ಸಾಮಾಗ್ರಿಗಳು, ವಿಶೇಷ ಶೈಲಿಯ ಜೈಪುರ್ ಆಭರಣಗಳು, ವಿಶೇಷ ವಿನ್ಯಾಸದ ವೈವಿಧ್ಯಮಯ ಮಣ್ಣಿನ ವಿಗ್ರಹಗಳು ಕ್ರಾಕಾರಿ ಐಟಮ್ ಗಳ ಬೃಹತ್ ಸಂಗ್ರಹ ಇಲ್ಲಿವೆ.

Comments are closed.