ಕರಾವಳಿ

ಹತ್ತು ದಿನಗಳ ಹಿಂದಿ ಪುನಶ್ಚೇತನ ಕಾರ್ಯಾಗಾರ ಸಮಾಪನ

Pinterest LinkedIn Tumblr

ಮಂಗಳೂರು ಸೆಪ್ಟೆಂಬರ್ 27 : ಮಂಗಳೂರಿನ ಶಿಕ್ಷಕ ತರಬೇತಿ ಸಂಸ್ಥೆ ಡಯಟ್ ನಲ್ಲಿ ಮೈಸೂರಿನ ಕೇಂದ್ರೀಯ ಹಿಂದಿ ಸಂಸ್ಥಾನ (ಆಗ್ರಾ) ದವರು ಹತ್ತು ದಿನಗಳ ಹಿಂದಿ ಭಾಷಾ ಪುನಶ್ಚೇತನ ಶಿಬಿರವನ್ನು ಬೆಂಗಳೂರಿನ ಡಿ.ಎಸ್.ಆರ್.ಸಿ.ಟಿ., ಮಂಗಳೂರಿನ ಡಿ.ಡಿ.ಪಿ.ಐ. ಕಚೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹಿಂದಿ ಸಂಘದ ಸಹಯೋಗದೊಂದಿಗೆ ನಡೆಸಿದರು.

ಹತ್ತು ದಿನಗಳ ಕಾಲ ನಡೆದ ಪುನಶ್ಚೇತನ ಶಿಬಿರವನ್ನು ಆಂಧ್ರದ ಡಾ ಗಂಗಾಧರ ವಾನಡೆ, ಗುಜರಾತ್‍ನ ಡಾ ಯೋಗೇಂದ್ರನಾಥ ಮಿಶ್ರ, ಹಾಗೂ ವಾರಣಾಸಿಯ ಡಾ ರಾಮಕಿಶೋರ್ ಪಾಂಡೆಯವರುಗಳು ನಡೆಸಿಕೊಟ್ಟರು.

ಸಪ್ಟೆಂಬರ್ 16 ರಂದು ದಕ್ಷಿಣ ಕನ್ನಡ ಜಿಲ್ಲಾ ಹಿಂದಿ ಸಂಘದವರು ಹಿಂದಿ ದಿನಾಚರಣೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಹತ್ತು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟ ಇವರೆಲ್ಲರನ್ನೂ ಕಾರ್ಯಗಾರದ ಸಮಾಪನದಲ್ಲಿ ಸಪ್ಟೆಂಬರ್ 26 ರಂದು ದಕ್ಷಿಣ ಕನ್ನಡ ಜಿಲ್ಲಾ ಹಿಂದಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶಿಬಿರದಲ್ಲಿ ಉತ್ತಮ ರೀತಿಯಲ್ಲಿ ಉತ್ತರಿಸಿದ ಶಿವಕುಮಾರ್ ಮುಸಂಡಿ, ವಿನ್ನಿ ನಿರ್ಮಲ ಡಿ’ಸೋಜ, ಸಂಧ್ಯಾ ರಾವ್ ಇವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹಿಂದಿ ಸಂಘದ ಅಧ್ಯಕ್ಷ ರಾಯೀ ರಾಜ ಕುಮಾರ್ ಉಪಸ್ಥತರಿದ್ದರು. ವೀಣಾ ಬೇಳಿಂಜೆ ಪ್ರಾರ್ಥಿಸಿದರು. ಕೃಪಾ, ವಿನಾಯಕ್, ಪ್ರಸಾದ್, ಗಂಗಾಧರ್, ಶ್ರೀನಿವಾಸ್ ನಾಯಕ್, ಸಂಧ್ಯಾ ರಾವ್, ಜ್ಯೋತಿ ಡಿ’ಸೋಜ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಹರೀಶ್ ಶೆಟ್ಟಿ, ವೆಂಕಟರಮಣ ಭಟ್, ಅನಿಲ್ ವಡಗೇರಿ, ಕವಿತಾ, ಭಾರತಿ ಭಾಗವಹಿಸಿದರು.

ಶಿವಕುಮಾರ್ ಮುಸಂಡಿ ಕಾರ್ಯಕ್ರಮ ನಿರ್ವಹಿಸಿದರು, ನಾಗರಾಜ್ ವಂದಿಸಿದರು. ಸಂಸ್ಥಾನದ ರಾಘವೇಂದ್ರ ಕಾರ್ಯಕ್ರಮ ಸಂಯೋಜಿಸಿದರು.

Comments are closed.