ಕರಾವಳಿ

ಕಂಡ್ಲೂರಿನಲ್ಲಿ ಬಿಸ್ಕಿಟ್, ರಸ್ಕ್ ಬಾಕ್ಸ್ ಇದ್ದ ಲಾರಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

Pinterest LinkedIn Tumblr

ಉಡುಪಿ: ಬಿಸ್ಕಿಟ್ ಹಾಗೂ ರಸ್ಕ್ ತುಂಬಿದ ಗೂಡ್ಸ್ ಲಾರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಸರಂಜಾಮುಗಳು ಹಾನಿಯಾದ ಘಟನೆ ಗುರುವಾರ ನಡೆದಿದೆ. ತಾಲೂಕಿನ ಕಂಡ್ಲೂರಿನಲಿರುವ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ.

ಕುಂದಾಪುರ ಕಡೆಯಿಂದ ಸಿದ್ದಾಪುರದತ್ತ‌ ಸಾಗುತ್ತಿದ್ದ ಈ ಲಾರಿಯಲ್ಲಿ ಬಿಸ್ಕತ್ ಹಾಗೂ ರಸ್ಕ್ ಪೊಟ್ಟಣಗಳಿತ್ತು. ಲಾರಿಯ ಹಿಂಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದೇ ಬೆಂಕಿ ಅನಾಹುತಕ್ಕೆ ಕಾರಣ ಎನ್ನಲಾಗಿದೆ. ಬೆಂಕಿ ಲಾರಿಯಲ್ಲಿದ್ದ ಸುಮಾರು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಬಿಸ್ಕತ್, ರಸ್ಕ್ ಇದ್ದ ಬಾಕ್ಸ್ ಸಂಪೂರ್ಣ ಸುಟ್ಟು ಹೋಗಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ಹತೋಟಿಗೆ ತಂದಿದ್ದಾರೆ.

Comments are closed.