ಕರಾವಳಿ

ಇಂದಿನಿಂದ ಹಜ್ ವಿಮಾನ ಮಂಗಳೂರಿಗೆ ನಿರ್ಗಮನ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು,ಆಗಸ್ಟ್.೩೧ : ಸರಕಾರದ ಹಜ್ ಸಮಿತಿಯಿಂದ ಮಂಗಳೂರು ಹಜ್ ಕ್ಯಾಂಪ್ ಮೂಲಕ ಜುಲೈ 17 ರಿಂದ 19ರ ತನಕ 5 ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನಗಳಲ್ಲಿ ಹಜ್’ಗೆ ತೆರಳಿದ್ದ 757 ಮಂದಿಯ ತಂಡವು ಆಗಸ್ಟ್ 31 ರಿಂದ ಸೆಪ್ಟಂಬರ್ 02 ರ ತನಕ ಜಿದ್ದಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಮರಳಲಿದ್ದಾರೆ.

ಆಗಸ್ಟ್ 31 ರಂದು ಶನಿವಾರ ಮೊದಲ ಏಐ 5196 ವಿಮಾನವು ಸೌದಿ ಸಮಯ ಬೆಳಿಗ್ಗೆ 6.45 ಕ್ಕೆ ಜಿದ್ದಾದಿಂದ ಹೊರಟು ಭಾರತೀಯ ಕಾಲಮಾನ 02.35 ಕ್ಕೆ ಹಾಗೂ ಏಐ 5198 ವಿಮಾನವು ಬೆಳಿಗ್ಗೆ 10.45 ಕ್ಕೆ ಹೊರಟು ಸಂಜೆ 06.35 ಕ್ಕೆ ಮಂಗಳೂರು ತಲುಪಲಿದೆ.

ಸೆಪ್ಟಂಬರ್ 1 ಭಾನುವಾರ ಮಧ್ಯಾಹ್ನ ಏಐ 5200 ವಿಮಾನವು ಮಧ್ಯಾಹ್ನ 12.30 ಕ್ಕೆ, ಏಐ 5202 ಮಧ್ಯಾಹ್ನ 01.30 ಕ್ಕೆ ಹಾಗೂ ಸೆಪ್ಟಂಬರ್ 02 ರಂದು ಸೋಮವಾರ ಏಐ 5204 ವಿಮಾನವು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.

ಕೊನೆಯ ಕ್ಷಣದಲ್ಲಿ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗುವ ಸಾಧ್ಯತೆಯೂ ಇದೆ ಎಂದು ಹಜ್ ನಿರ್ವಹಣಾ ಸಮಿತಿ ಮಂಗಳೂರು ಇದರ ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ ತಿಳಿಸಿದ್ದಾರೆ.

Comments are closed.