ಕರಾವಳಿ

ಮಂಗಳೂರಿನಲ್ಲಿ 73ನೇ ಸ್ವಾತಂತ್ರ್ಯೋತ್ಸವ : ಸಾಧಕ ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ – ಅಭಿನಂದನೆ

Pinterest LinkedIn Tumblr

ಮಂಗಳೂರು, ಆಗಸ್ಟ್.15:ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬುಧವಾರ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 73ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕ ವಿಧ್ಯಾರ್ಥಿಗಳನ್ನು ಲ್ಯಾಪ್‌ಟಾಪ್ ನೀಡಿ ಅಭಿನಂದಿಸಲಾಯಿತು. ಆರಂಭದಲ್ಲಿ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಧಾರಾಕಾರವಾಗಿ ಸುರಿವ ಮಳೆಯ ನಡುವೆ ಧ್ವಜಾರೋಹಣಗೈದು ಸ್ವಾತಂತ್ರ್ಯ ಸಂದೇಶ ನೀಡಿದರು.

ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಜಿಲ್ಲಾ ಮಟ್ಟದಲ್ಲಿ ಎಸೆಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಪುತ್ತೂರು ಸರಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಎನ್ (616 ಅಂಕಗಳು), ಸುಳ್ಯ ಎಣ್ಮೂರಿನ ಸರಕಾರಿ ಪ್ರೌಢಶಾಲೆಯ ಮಹಮ್ಮದ್ ಮಜೀದ್ (613), ಗುರುವಾಯನೆಕೆರೆ ಸರಕಾರಿ ಪ್ರೌಢಶಾಲೆಯ ತೇಜಸ್ವಿ ಕೆ. ಅವರಿಗೆ ಲ್ಯಾಪ್‌ಟಾಪ್ ನೀಡಿ ಅಭಿನಂದಿಸಲಾಯಿತು.

ಮಂಗಳೂರು ಉತ್ತರ ಕ್ಷೇತ್ರದಲ್ಲಿ ಅತ್ಯಧಿಕ ಅಂಕ ಗಳಿಸಿದ ಮುಲ್ಕಿ ಸ.ಪ.ಪೂ. ಕಾಲೇಜಿನ ಸಂತೋಷ್, ಕಾವೂರು ಸ.ಪ.ಪೂ. ಕಾಲೇಜಿನ ಪುಷ್ಪ ಪುಣ್ಯ, ಬಲ್ಮಠ ಸ.ಮಹಿಳಾ ಪ.ಪೂ. ಕಾಲೇಜಿನ ಬಸವ್ವ ರುದ್ರಪ್ಪ ಚಲವಾಯಿ, ಮಂಗಳೂರು ದಕ್ಷಿಣದಲ್ಲಿ ಅತ್ಯಧಿಕ ಅಂಕ ಗಳಿಸಿದ ಮುಚ್ಚೂರು ಸರಕಾರಿ ಪ್ರೌಢಶಾಲೆಯ ರಕ್ಷಿತಾ, ಕುಂಪಲ ಆರ್‌ಎಂಎಸ್‌ಎ ಸರಕಾರಿ ಪ್ರೌಢಶಾಲೆಯ ಲಿಖಿತ್ ಕುಮಾರ್, ಹರೇಕಳ ನ್ಯೂಪಡ್ಪು ಸರಕಾರಿ ಸಂಯುಕ್ತ ಪ್ರೌಢಶಾಲೆಯ ರಹೀನ್ ತೌಶಿಯಾ ಅವರಿಗೂ ಲ್ಯಾಪ್‌ಟಾಪ್ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್‍ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಯು.ಟಿ.ಖಾದರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪ್ರದೀಪ್ ಕಲ್ಕೂರ ಹಾಗೂ ಮತ್ತಿತ್ತರ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.