ಕರಾವಳಿ

ತುಳುನಾಡಿನ ಸಂಸ್ಕೃತಿಗೆ ವ್ಯವಸ್ಥಿತ ಧಾರ್ಮಿಕ ಚೌಕಟ್ಟು ಇದೆ : ಎ.ಕೆ.ಜಯರಾಮ ಶೇಖ

Pinterest LinkedIn Tumblr

ಮಂಗಳೂರು: ‘ತುಳುನಾಡಿನ ಪ್ರತಿಯೊಂ ದು ಸಾಂಸ್ಕೃತಿಕ ಜನಪದ ವೈವಿಧ್ಯತೆಗಳಿಗೆ ಧಾರ್ಮಿಕ ಚೌಕಟ್ಟಿನ ಅಡಿಪಾಯ ಇದೆ. ಆದುದರಿಂದಲೇ ಅಮೇರಿಕದಂತಹ ದೇಶಗಳಲ್ಲಿ ನಮ್ಮ ಯಕ್ಷಗಾನವನ್ನು ಪ್ರದರ್ಶಿದಾಗ ಸಭಾಂಗಣ ತುಂಬಿ ತುಳುಕಿ ಜನರು ಆಸಕ್ತಿಯಿಂದ ವೀಕ್ಷಿಸುತ್ತಿದ್ದಾರೆ. ಹಾಗೆಯೇ ಪ್ರತಿಯೊಬ್ಬರೂ ಇಲ್ಲಿನ ಜಾನಪದ ಸಾಹಿತ್ಯ ಮತ್ತು ಸಾಂಸ್ಕೃತಿಕತೆಯನ್ನು ಅರಿತು ಅಳವಡಿಸಿಕೊಳ್ಳುವುದು ಒಳಿತು’ ಎಂದು ಇತ್ತೀಚೆಗೆ ಅಮೇರಿಕಾ ಪ್ರವಾಸ ಮಾಡಿ ಬಂದ ಹಿರಿಯ ಸಮಾಜಸೇವಕರು ಹಾಗೂ ಸಾರಿಗೆ ಉದ್ಯಮಿಗಳಾದ ಎ.ಕೆ.ಜಯರಾಮ ಶೇಖ ಹೇಳಿದರು.

ತುಳು ವರ್ಲ್ಡ್ ಮತ್ತು ತುಳುವೆರೆ ಕೂಟ ಶಕ್ತಿನಗರ ಇವುಗಳ ಜಂಟಿ ಆಶ್ರಯದಲ್ಲಿ ಜರಗಿದ ‘ಏಳದೆ ಮಂದಾರ ರಾಮಾಯಣ ಸುಗಿಪು-ದುನಿಪು ‘ ಕಾರ್ಯಕ್ರಮದ ಆರನೇ ದಿನದ ಪ್ರವಚನಕ್ಕೆ ದೀಪ ಬೆಳಗಿ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾರಂಭದಲ್ಲಿ ಮುತ್ತಪ್ಪ ಸೇವಾ ಸಮಿತಿಯ ಶಂಕರ್ ನಾಯರ್ ದಂಪತಿಗಳನ್ನು ಗೌರವಿಸಲಾಯಿತು. ಪದವು ಕ್ಲಬ್ಬಿನ ಅಧ್ಯಕ್ಷ ಕುಶಾಲ್ ಕುಮಾರ್, ತುಳುವೆರೆ ಕೂಟದ ಭಾರತಿ ಜಿ. ಅಮೀನ್, ಸುಧಾಕರ್ ಜೋಗಿ, ವಿಶ್ವನಾಥ್, ಹರ್ಷ ರೈ ಪುತ್ರಕಲ, ಭೂಷಣ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

ಮಂದಾರ ರಾಮಾಯಣ ಸಪ್ತಾಹದ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ತುಳುವರ್ಲ್ಡ್ ಅಧ್ಯಕ್ಷ ಡಾ.ರಾಜೇಶ್ ಆಳ್ವ ಬದಿಯಡ್ಕ ವಂದಿಸಿದರು, ಶೃತಿ ಹರ್ಷ ಕಾರ್ಯಕ್ರಮ ನಿರ್ವಹಿಸಿದರು.

 ‌

ತೆಲಿಪುನಡೆ ಬುಲಿಪು  :

‌ಮಂದಾರ ರಾಮಾಯಣದ ಆರನೇ ಅಧ್ಯಾಯ ‘ತೆಲಿಪುನಡೆ ಬುಲಿಪು’ ಕಾವ್ಯಭಾಗದ ವಾಚನವನ್ನು ಹರಿದಾಸ ಮಹಾಬಲ ಶೆಟ್ಟಿ ಕೂಡ್ಲು ಮತ್ತು ಆಕಾಶವಾಣಿ ಕಲಾವಿದೆ ಸಿದ್ದಕಟ್ಟೆ ಮಲ್ಲಿಕಾ ಅಜಿತ್ ಶೆಟ್ಟಿ ಹಾಗೂ ಪ್ರವಚನವನ್ನು ಜಾನಪದ ತಜ್ಞ ದಯಾನಂದ ಕತ್ತಲ್ ಸಾರ್ ನಡೆಸಿಕೊಟ್ಟರು.

Comments are closed.