ಕರಾವಳಿ

ಲಾಲ್‌ಭಾಗ್ ಬಳಿ ಡಿವೈಡರ್ ಮೇಲೆ ಹತ್ತಿದ ಬಸ್ಸ್ : ನಾಲ್ವರಿಗೆ ಗಾಯ

Pinterest LinkedIn Tumblr

ಮಂಗಳೂರು, ಆಗಸ್ಟ್.4: ಖಾಸಗಿ ಬಸ್‌ವೊಂದು ಡಿವೈಡರ್ ಮೇಲೆ ಹತ್ತಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಗರದ ಲಾಲ್‌ಭಾಗ್ ಸರ್ಕಲ್ ಸಮೀಪ ಇಂದು ಸಂಜೆ ನಡೆದಿದ್ದು,ಅಪಘಾತದಲ್ಲಿ ಮಗು ಸಹಿತ ನಾಲ್ವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ..

ಗಾಯಾಳುಗಳನ್ನು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಕರಿಯಪ್ಪ ಭಂಗಿ (23), ಕೊಡಿಯಾಲ್‌ಬೈಲ್ ನಿವಾಸಿ ಕಿರಣ್ (28), ಸ್ಥಳೀಯ ನಿವಾಸಿಗಳಾದ ಶಂಕರ್ (28) ಮತ್ತು ಎರಡು ವರ್ಷ ಶರತ್ ಎಂದು ಹೆಸರಿಸಲಾಗಿದೆ.

ತಣ್ಣೀರುಬಾವಿಯಿಂದ ಲೇಡಿಹಿಲ್, ಲಾಲ್‌ಭಾಗ್ ಪಿವಿಎಸ್ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್‌ಗೆ ತೆರಳಬೇಕಿದ್ದ ಖಾಸಗಿ ಬಸ್ ಲಾಲ್‌ಬಾಗ್ ಸಮೀಪದ ಪಬ್ಬಸ್ ಐಸ್‌ಕ್ರೀಸ್ ಮಳಿಗೆ ಮುಂಭಾಗದ ರಸ್ತೆಯ ಡಿವೈಡರ್ ಮೇಲೆ ಹತ್ತಿ, ಬೀದಿದೀಪದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ರಸ್ತೆಯ ಡಿವೈಡರ್‌ಗೆ ಹಾನಿಯಾಗಿದೆ. ಅಲ್ಲದೆ, ವಿದ್ಯುತ್ ಕಂಬವು ಮುರಿದು ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಬಸ್‌ನ ಅತಿಯಾದ ವೇಗವೇ ಅವಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅವಘಡದಲ್ಲಿ ನಾಲ್ವರು ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣವೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಈ ಕುರಿತು ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿನ್ನೆ ತಾನೆ ಲೇಡಿಹಿಲ್ ಸಮೀಪದ ಚಿಲಿಂಬಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್’ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿತ್ತು. ಮೂಲ್ಕಿ ಹೆಜಮಾಡಿಯಿಂದ ಮಂಗಳೂರಿಗೆ ಕಡೆಗೆ ಹೋಗುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

Comments are closed.