
ಕಮಿಷನರ್ ಸಂದೀಪ್ ಪಾಟೀಲ್ ನೂತನ ಪೊಲೀಸ್ ಕಮಿಷನರ್ ಎ.ಸುಬ್ರಹ್ಮಣ್ಯೇಶ್ವರ ರಾವ್
ಮಂಗಳೂರು, ಆಗಸ್ಟ್ 01 : ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯ ಜನರ ನೆಮ್ಮದಿಯ ಜೀವನಕ್ಕೆ ಕಾರಣವಾಗಿದ್ದ ಹಾಗೂ ತಮ್ಮ ಉತ್ತಮ ಕಾರ್ಯದಕ್ಷತೆ ಹಾಗೂ ಖಡಕ್ ಕಾರ್ಯವೈಕರಿಯಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಜನಮಾನಸದಲ್ಲಿ ಜನಾನುರಾಗಿಯಾಗಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಕೆಲವೇ ದಿನಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಕರ್ತವ್ಯ ನಿಷ್ಠೆಯಿಂದ ಮಂಗಳೂರಿನ ಜನತೆಯ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದ ಓರ್ವ ನಿಷ್ಟವಂತ ಅಧಿಕಾರಿ ಕಮಿಷನರ್ ಸಂದೀಪ್ ಪಾಟೀಲ್ ಅವರ ಅಚಾನಕ್ ವರ್ಗಾವಣೆಯಿಂದ ನೆಮ್ಮದಿಯಲ್ಲಿದ್ದ ಮಂಗಳೂರಿನ ಜನತೆ ತಲ್ಲಣಗೊಂಡಿದೆ.
ಆದರೆ…. ಒಂದೇ ಒಂದು ಸಮಾಧಾನಕರವಾದ ವಿಷಯವೆಂದರೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ನೂತನ ಪೊಲೀಸ್ ಕಮಿಷನರ್ ಆಗಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ (ಎಸ್ಪಿ) ವರಿಷ್ಠಾಧಿಕಾರಿಯಾಗಿದ್ದ ಖಡಕ್ ಅಧಿಕಾರಿ ಎಂದೇ ಹೆಸರಾಗಿದ್ದ ಎ. ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಮತ್ತೆ ಇಲ್ಲಿಗೆ ನೇಮಕ ಮಾಡಲಾಗಿರುವುದು..
ಸಂದೀಪ್ ಪಾಟೀಲ್ ಅವರನ್ನು ಡಿಐಜಿ ಮತ್ತು ಬೆಂಗಳೂರು ನಗರ ಅಪರಾಧ ಇಲಾಖೆಯ ಜಂಟಿ ಆಯುಕ್ತರಾಗಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ನಿಯೋಜಿಸಲಾಗಿದೆ. ಸುಬ್ರಹ್ಮಣ್ಯೇಶ್ವರ ರಾವ್ ಅವರು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿದ್ದರು. ಬಳಿಕ ಮೈಸೂರು ಕಮಿಷರನ್ ಆದರು. ಮತ್ತೆ ಬೆಂಗಳೂರು ಇಂಟೆಲಿಜನ್ಸ್ ಡಿಐಜಿಯಾಗಿ ಆಗಿ ಇದೀಗ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನಿಯುಕ್ತಿಗೊಂಡಿದ್ದಾರೆ.
ಸಂದೀಪ್ ಫಾಟೀಲ್ ಅವರು ಕೆಲವೇ ತಿಂಗಳ ಸೇವಾ ಅವಧಿಯಲ್ಲಿ ದಕ್ಷ ಅಧಿಕಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಅಕ್ರಮ ಗೋಸಾಗಾಣಿಕೆ, ಗಾಂಜಾ ಮಾರಾಟಗಾರರಿಗೆ ಕಡಿವಾಣ ಹಾಕಿದ್ದರು. ರೌಡಿಶೀಟರ್‌ಗಳ ಹೆಡೆಮುರಿ ಕಟ್ಟಲು ಶೂಟೌಟ್ ಆದೇಶವನ್ನೂ ನೀಡಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸುತ್ತಿದ್ದ ಸಂದೀಪ್ ಪಾಟೀಲ್ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಮೂಲಕವೂ ಜನಪ್ರಿಯರಾಗಿದ್ದರು.
ಮಾತ್ರವಲ್ಲದೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಜುಗಾರಿ, ಮಟ್ಕ, ಲೈವ್‌ಬ್ಯಾಂಡ್, ಸ್ಕಿಲ್ ಗೇಮ್, ರೌಡಿಯಿಸಂ, ಈ ರೀತಿಯ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ( ಯಾವೂದೇ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಸಿಲುಕದೆ) ನಿಯಂತ್ರಿಸುವಲ್ಲಿ ತುಂಬಾ ಯಶಸ್ವಿಯಾಗಿದ್ದರು.
ತಮ್ಮ ಫೋನ್ ಇನ್ ಕಾರ್ಯಕ್ರಮದಲ್ಲಿ ಬರುವ ದೂರು ದುಮ್ಮನಗಳಿಗೆ ಕ್ಷಣ ಮಾತ್ರದಲ್ಲಿ ಸ್ಪಂದಿಸುವ ಮೂಲಕ ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಓರ್ವ ಮಾನವೀಯ ಮೌಲ್ಯಗಳನ್ನು ಚಿಂತಿಸುವ ಅಧಿಕಾರಿಯಾಗಿದ್ದರು. ಅವರ ಅಗತ್ಯ, ಅನಿವಾರ್ಯತೆ ಇನ್ನೂ ಕೂಡ ನಗರದ ಜನತೆಗ ಬೇಕಾಗಿರುವ ಈ ಅನಿವಾರ್ಯ ಸಂದರ್ಭದಲ್ಲೇ ಓರ್ವ ಪ್ರಾಮಾಣಿಕ ಅಧಿಕಾರಿಯ ವರ್ಗಾವಣೆ ಜಿಲ್ಲೆಯ ಅದರಲ್ಲೂ ಮಂಗಳೂರಿನ ಸಚ್ಚ ನಾಗರೀಕರಲ್ಲಿ ದಿಗೃಮೆ ಮೂಡಿಸಿದೆ.
ಜೊತೆ ಜೊತೆಗೆ ಇವರ ವರ್ಗಾವಣೆ ನಗರದಲ್ಲಿ ಅವ್ಯಾಹುತವಾಗಿ ನಡೆಯುತ್ತಿದ್ದ ಗಾಂಜಾ ಪ್ರಕರಣ ಅಥವಾ ಗೋ ಮಾಫಿಯಾqa ಗಳಿಗೆ ಇವರು ಹಾಕಿದ ಕಡಿವಾಣ ಕಾರಣವಾಯಿತೆ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದಕ್ಕೆ ಉತ್ತರ …..
Comments are closed.