ಕರಾವಳಿ

ಮಣಿಪಾಲದಲ್ಲಿ ಗಾಂಜಾ ಮಾರಾಟ ಯತ್ನ: ಲಕ್ಷ ಮೌಲ್ಯದ 5 ಕೆ.ಜಿ. ಗಾಂಜಾ ಸಮೇತ ಆರೋಪಿ ಅಂದರ್

Pinterest LinkedIn Tumblr

ಉಡುಪಿ: ಇಲ್ಲಿನ ಮಣಿಪಾಲದಲ್ಲಿ‌ ಕಾನೂನು ಬಾಹಿರವಾಗಿ ಗಾಂಜಾ ಮಾರಟ ಮಾಡುತ್ತಿದ್ದ ಆರೋಪಿಯನ್ನು ಉಡುಪಿಯ ಸೈಬರ್ ಕ್ರೈಮ್ ಪೊಲೀಸರು (ಸೆನ್) ಬಂಧಿಸಿದ್ದಾರೆ.

ಮಣಿಪಾಲ ವಿದ್ಯಾರತ್ನ ನಗರದ ಎನ್‌ಕ್ಲೀವ್ ಅಪಾರ್ಟ್ಮೆಂಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ‌ ಪ್ರಕಾರ್ ಶ್ರೀವತ್ಸ ಎಂಬುವನನ್ನು ಬಂಧಿಸಿ ಆತನ ಬಳಿ ಇದ್ದ 5 ಕೆಜಿ 280 ಗ್ರಾಂ ಗಾಂಜಾ,ಮೊಬೈಲ್ ಫೋನ್ ಮತ್ತು ಗಾಂಜಾ ಮಾರಾಟ ಮಾಡುವ ತೂಕ ಮಾಡುವ ಮಷೀನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ‌‌ ಪ್ರಕಾರ್ ಶ್ರೀವತ್ಸ ವೆಸ್ಟ್ ಬೆಂಗಾಲಿ ಮೂಲದವನಾಗಿದ್ದು ಸದ್ಯ ಮಣಿಪಾಲದ ಈಶ್ವರ ನಗರದ ನಿವಾಸಿಯಾಗಿದ್ದಾನೆ. ಆರೋಪಿಯಿಂದ ಒಟ್ಟು 1,36,250/-ಮೌಲ್ಯದ ವಸ್ತು ವಶಕ್ಕೆ ಪಡೆದು ‌ವಿಚಾರಣೆ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಸೆನ್ ಅಪರಾಧದ ಪೊಲೀಸ್ ನೀರಿಕ್ಷಕ ಸೀತಾರಾಮ.ಪಿ ಮತ್ತು ಎ.ಎಸ್.ಐ ಕೇಶವ್ ಗೌಡ, ಸಿಬ್ಬಂದಿಗಳಾದ ಪ್ರವೀಣ್ ,ಸತೀಶ್ ಬೆಳ್ಳೆ,ರಾಘವೇಂದ್ರ ಉಪ್ಪೂರು,ಕೃಷ್ಣ ಪ್ರಸಾದ್,ಸಂಜಯ್,ನಾಗೇಶ್,ಶ್ರೀಧರ, ರಾಘವೇಂದ್ರ ಬ್ರಹ್ಮಾವರ,ಪ್ರಸನ್ನ ಸಾಲಿಯಾನ್,ಸಂತೋಷ್ ಖಾರ್ವಿ,ಮತ್ತು ಜೀವನ್ ಪಾಲ್ಗೊಂಡಿದ್ದರು.

Comments are closed.