ಕರಾವಳಿ

ಕೂಳೂರು ಬಳಿ ಅಕ್ರಮ ಕೃಷ್ಣಮೃಗದ ಚರ್ಮ ಸಾಗಾಟ ಮಾಡುತಿದ್ದ ಇಬ್ಬರ ಸೆರೆ

Pinterest LinkedIn Tumblr

ಮಂಗಳೂರು : ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕೃಷ್ಣಮೃಗದ ಚರ್ಮ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರ ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ನಿವಾಸಿಗಳಾದ ರಮೇಶ್ ಮಲ್ಲಪ್ಪ ಯಾದವಾಡ್ (51) ಹಾಗೂ ರಾಜು ಬಿರಾದಾರ್ (47) ಎಂದು ಹೆಸರಿಸಲಾಗಿದೆ.

ಮಂಗಳೂರು ನಗರ ಉತ್ತರ ಉಪವಿಭಾಗದ ಎ.ಸಿ.ಪಿ. ನಿವಾಸ್ ಆರ್. ಗೌಡ ಇವರ ನೇತ್ರತ್ವದ ರೌಡಿ ನಿಗ್ರಹ ದಳಕ್ಕೆ ದೊರೆತ ಖಚಿತ ಮಾಹಿತಿಯಂತೆ ಪಣಂಬೂರು ಪೊಲೀಸ್ ಠಾಣೆಯ ಠಾಣಾಧಿಕಾರಿಯಾದ ಸತ್ಯನಾರಾಯಣ, ರೌಡಿ ನಿಗ್ರಹ ದಳದ ಅಧಿಕಾರಿ ಸಿಬ್ಬಂಧಿಗಳು ಹಾಗೂ ಮಂಗಳೂರು ಅರಣ್ಯ ವಲಯ ಅಧಿಕಾರಿಗಳು ಪಣಂಬೂರು ತಣ್ಣೀರು ಬಾವಿಯ ಬಳಿಯಲ್ಲಿ ಕಸಬಾ ಬೆಂಗರೆ ಕಡೆಗೆ ಹೋಗುವ ಕುದುರೆ ಮುಖ ಜಂಕ್ಷನ್ ಬಳಿಯ ಮೋರಿಯ ಬಳಿಯಲ್ಲಿ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ಯಾವುದೋ ವಸ್ತುವನ್ನು ಹಿಡಿದುಕೊಂಡು ನಿಂತುಕೊಂಡಿದ್ದು ಪೊಲೀಸ್ ಜೀಪ್ ಕಂಡೊಡನೆ ಗೋಣಿ ಚೀಲವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದು, ಅವರನ್ನು ಬೆನ್ನತ್ತಿ ಹಿಡಿದ ಪೊಲೀಸರು, ಗೋಣಿಚೀಲ ಪರಿಶೀಲಿಸಿದಾಗ ಕೃಷ್ಣಮೃಗದ ಚರ್ಮ ಇರುವುದು ಕಂಡುಬಂದಿದೆ.

ಆರೋಪಿಗಳನ್ನ ಮತ್ತು ಸದ್ರಿ ಸೊತ್ತನ್ನ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ ನ್ಯಾಯಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ಐ.ಪಿ.ಎಸ್. ಮಂಗಳೂರು ನಗರ. ಹಾಗೂ ಪೊಲೀಸ್ ಉಪ ಆಯುಕ್ತರುಗಳಾದ ಹನುಮಂತರಾಯ ಐ.ಪಿ.ಎಸ್. ಮತ್ತು ಲಕ್ಷ್ಮೀ ಗಣೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಆರ್ ಗೌಡ. ಐ.ಪಿ.ಎಸ್. ಇವರ ಮಾರ್ಗದರ್ಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸತ್ಯ ನಾರಾಯಣ, ಮಂಗಳೂರು ಅರಣ್ಯ ವಲಯ ಅಧಿಕಾರಿ ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂಧಿಗಳಾದ ಎ.ಎಸ್. ಐ. ಮೊಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ. ವಿಜಯಕಾಂಚನ್, ಇಸಾಕ್ ಮತ್ತು ಶರಣ್ ಕಾಳಿ ಮುಂತಾದವರು ಭಾಗವಹಿಸಿದ್ದರು.

Comments are closed.