ಕರಾವಳಿ

ಮಂಗಳೂರಿನಿಂದ ಹರಿದ್ವಾರಕ್ಕೆ ವಿಶೇಷ ರೈಲು : ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿ

Pinterest LinkedIn Tumblr

ಮಂಗಳೂರು : ಶ್ರೀ ಕಾಶಿ ಮಠ ಸಂಸ್ಥಾನದ ಪರಮ ಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷಾ ಅಮೃತ ಮಹೋತ್ಸವವು ಹರಿದ್ವಾರದ ಶ್ರೀ ವ್ಯಾಸ ಮಂದಿರದಲ್ಲಿ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿದ್ದು ಈ ಪ್ರಯುಕ್ತ ದೇಶಾದ್ಯಂತ ಸುಮಾರು 5,000 ಕ್ಕೂ ಅಧಿಕ ಶ್ರೀ ಕಾಶಿ ಮಠದ ಅನುಯಾಯಿಗಳು ಪಾಲ್ಗೊಳ್ಳಲಿರುವರು.

ಮಂಗಳೂರು ಹಾಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 1,200 ಭಜಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಈ ಕಾರ್ಯಕ್ರಮ ಪ್ರಯುಕ್ತ ಮಂಗಳೂರಿನಿಂದ ವಿಶೇಷ ರೈಲು ವ್ಯವಸ್ಥೆಯನ್ನು ಶ್ರೀ ಸುಕೃತೀಂದ್ರ ತೀರ್ಥ ಸ್ವಾಮಿ ಪ್ರತಿಷ್ಠಾನ ಹಾಗೂ ಜಿ . ಯಸ್ . ಬಿ ದೇವಸ್ಥಾನಗಳ ಒಕ್ಕೂಟದ ವತಿಯಿಂದ ಆಯೋಜಿಸಲಾಗಿದೆ.

ಈ ವಿಶೇಷ ರೈಲು ದಿನಾಂಕ 31 ರ ರಾತ್ರಿ ಹೊರಟು ದಿನಾಂಕ 3 ರ ಬೆಳಿಗ್ಗೆ ಹರಿದ್ವಾರ ತಲುಪಲಿದೆ ಬಳಿಕ ದಿನಾಂಕ 6 ರಂದು ಹರಿದ್ವಾರದಿಂದ ಹೊರಟು 9 ರಂದು ಮಂಗಳೂರಿಗೆ ತಲುಪಲಿರುವುದು . ಈ ವಿಶೇಷ ರೈಲಿನಲ್ಲಿ ಕೇವಲ ಜಿ ಯಸ್ ಬಿ ಸಮಾಜ ಭಾಂದವರು ಪ್ರಯಾಣಿಸಲಿದ್ದು ದಾರಿಯುದ್ದಕ್ಕೂ ಎಲ್ಲ ಯಾತ್ರಿಗಳಿಗೆ ಊಟ ಉಪಚಾರ , ಹರಿದ್ವಾರದಲ್ಲಿ ಉಳಕೊಳ್ಳಲು ವ್ಯವಸ್ಥೆ ಮಾಡಲಾಗಿದೆ . ಸುಮಾರು 16 ಬೋಗಿಗಳಿದ್ದು 4 ಹವಾ ನಿಯಂತ್ರಿತ ಹಾಗೂ 12 ಸ್ಲೀಪ್ ರ್ ಬೋಗಿಗಳಿರುವುದು.

ಹರಿದ್ವಾರದ ಶ್ರೀ ವ್ಯಾಸ ಮಂದಿರದ ಆವರಣದಲ್ಲಿ ದಿನಾಂಕ 5 ರಂದು ವಿಶೇಷ ಹೋಮ- ಹವನಗಳು , ಸಂಸ್ಥಾನ ಹಾಗೂ ವೃನ್ದಾವನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಮುಖ್ಯಪ್ರಾಣ ದೇವರಿಗೆ ವಿಶೇಷ ಪವಮಾನ ಅಭಿಷೇಕ ಸಾಯಂಕಾಲ ಸಭಾ ಕಾರ್ಯಕ್ರಮ ಶ್ರೀಗಳವರಿಂದ ಆಶೀರ್ವಚನ ನಡೆಯಲಿರುವುದು.

ದಿನಾಂಕ 6 ರಂದು ಸನ್ಯಾಸ ದೀಕ್ಷಾ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ರಾಜಸ್ಥಾನದಲ್ಲಿ ಅಮೃತ ಶಿಲೆಯಲ್ಲಿ ನಿರ್ಮಿಸಲಾದ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವಿಗ್ರಹ ಪ್ರತಿಷ್ಠಾಪನೆ ಗಂಗಾ ತಟದಲ್ಲಿ ನೆರವೇರಲಿರುವುದು ಮತ್ತು ವಿಶೇಷವಾಗಿ ತಯಾರಿಸಲ್ಪಟ್ಟ ಶ್ರೀ ಗುರು ದರ್ಶನಂ -2 ( ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭಾವ ಚಿತ್ರಗಳ ಪುಸ್ತಕ ) ಕಾಶಿ ಮಠಾಧೀಶರ ದಿವ್ಯ ಹಸ್ತಗಳಿಂದ ಬಿಡುಗಡೆ ಯಾಗಲಿದೆ , ಈ ಪುಸ್ತಕವನ್ನು ಶ್ರೀಗಳವರಿಂದ ಪ್ರಾರಂಭಿಸಲ್ಪಟ್ಟ ಬಸ್ರುರು ಶ್ರೀ ಭುವನೇಂದ್ರ ಬಾಲಕಾಶ್ರಮದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮುದ್ರಿಸಲಾಗಿದೆ.

ವಿಶೇಷ ರೈಲಿನ ವ್ಯವಸ್ಥೆಯನ್ನು ನೋಡಿಕೊಳ್ಳಲು ಮಂಗಳೂರಿನ ಕೆನರಾ ಇಂಜಿನೀರಿಂಗ್ ಕಾಲೇಜಿನ ಪ್ರೊಫೆಸರ್ ನಾಗೇಶ್ ಶೆಣೈ , ಪ್ರತಿಷ್ಠಾನದ ಅಧ್ಯಕ್ಷರಾದ ಪುತ್ತೂರಿನ ರಾಧಾಕೃಷ್ಣ ಭಕ್ತ, ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ವಹಿಸಲಿರುವರು ಎಂದು ಸಿ ಎ ಜಗನ್ನಾಥ್ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .

ವಿಶೇಷ ರೈಲಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನವರಿಗೆ ಸಂಪರ್ಕಿಸಬಹುದು :

ಪ್ರೊಫೆಸರ್ ನಾಗೇಶ್ ಶೆಣೈ : 98867 74555

ರಾಧಾಕೃಷ್ಣ ಭಕ್ತ : 99016 36182

ಸಿ ಎ ಜಗನ್ನಾಥ್ ಕಾಮತ್ : 98450 82646

Comments are closed.