ಕರಾವಳಿ

ನವೀನ್ ಭಂಡಾರಿ ಕೊಲೆ ಆರೋಪಿಗಳ ಬಂಧನ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಜಪೆ ಪೊಲೀಸ್ ಠಾಣಾ ಸರಹದ್ದಿನ ಬಡಗ ಎಡಪದವು ಗ್ರಾಮದ, ಧೂಮಚಡವು ಬಸ್ ಸ್ಟ್ಯಾಂಡ್ ಬಳಿ ವಾರಗಳ ಹಿಂದೆ ನಡೆದ ನವೀನ್ ಭಂಡಾರಿ ಕೊಲೆ ಪ್ರಕರಣದ ಅರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಬಡಗಎಡಪದವು ಗ್ರಾಮದ ದೂಮಚಡುವಿನ ನಿವಾಸಿಗಳಾದ ರಮೇಶ @ ಪೊಂಗು ಹಾಗೂ ನಿತ್ಯಾನಂದ @ ಡುಬ್ಲಿ ಎಂದು ಗುರುತಿಸಲಾಗಿದೆ.

ದಿನಾಂಕ 17-05-19 ರಂದು ರಾತ್ರಿ 11-50 ಗಂಟೆ ಸುಮಾರಿಗೆ ದೂಮಚಡುವಿನ ರಮೇಶ @ ಪೊಂಗು ಹಾಗೂ ನಿತ್ಯಾನಂದ @ ಡುಬ್ಲಿ ಎಂಬವರು ಅದೇ ಗ್ರಾಮದ ನವೀನ (28) ಎಂಬಾತನನ್ನು ಹಣಕಾಸಿನ ವಿಚಾರದಲ್ಲಿ ವೈಶಮ್ಯವನ್ನಿಟ್ಟುಕೊಂಡು ಮರದ ದೊಣ್ಣೆಗಳಿಂದ ನವೀನನ ತಲೆಗೆ ಹಾಗೂ ಶರೀರಕ್ಕೆ ಹೊಡೆದು ಕೊಲೆ ಮಾಡಿ ನಂತರ ಆರೋಪಿಗಳಿಬ್ಬರು ಅಲ್ಲಿಂದ ಓಡಿ ತಪ್ಪಿಸಿಕೊಂಡಿರುತ್ತಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಆರೋಪಿಗಳ ಪತ್ತೆಗೆ ಎರಡು-ಮೂರು ತಂಡಗಳನ್ನು ರಚಿಸಲಾಗಿತ್ತು. ಈ ಪ್ರಕರಣದ ಪತ್ತೆ ಕಾರ್ಯದಲ್ಲಿರುವ ಸಮಯ ದೊರೆತ ಖಚಿತ ಮಾಹಿತಿಯಂತೆ ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ, ಐ.ಪಿ.ಎಸ್ ರವರ ನೇತೃತ್ವದ ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ/ಸಿಬ್ಬಂದಿಗಳು ದಿನಾಂಕ: 28-05-2019 ರಂದು ಉಡುಪಿ ಜಿಲ್ಲೆಯ, ಪಲಿಮಾರು ಗ್ರಾಮದಲ್ಲಿ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವೀಯಾಗಿರುತ್ತಾರೆ.

ಮೃತ ನವೀನ ಆರೋಪಿ ನಿತ್ಯಾನಂದನಿಂದ ಸಾಲವಾಗಿ ಪಡೆದುಕೊಂಡಿದ್ದ ರೂ 20,000 ಗಳನ್ನು ವಾಪಾಸು ಕೂಡದೇ ಸತಾಯಿಸುತ್ತಿದ್ದನೆಂಬ ಕಾರಣವನ್ನಿಟ್ಟುಕೊಂಡು ಕೊಲೆಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ. ಈ ಪ್ರಕರಣದ ಆರೋಪಿ ರಮೇಶ @ ಪೊಂಗು ಬಜಪೆ ಠಾಣೆಯ ರೌಡಿ ಲಿಸ್ಟ್‌ನಲ್ಲಿದ್ದು, ಈತನ ವಿರುದ್ದ ಈ ಹಿಂದೆ 2 ಪ್ರಕರಣಗಳು ದಾಖಲಾಗಿರುತ್ತವೆ.

ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರಾದ ಹನುಮಂತರಾಯ,ಐ.ಪಿ.ಎಸ್ (ಕಾ&ಸು) ಹಾಗೂ ಲಕ್ಷ್ಮಿ ಗಣೇಶ್ ಕೆ. ಕೆ.ಎಸ್.ಪಿ.ಎಸ್ (ಅ&ಸಂ) ರವರ ಮಾರ್ಗದರ್ಶನದಂತೆ ಪಣಂಬೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ, .ಐ.ಪಿ.ಎಸ್ ರವರ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳ ಮತ್ತು ಪರಶಿವ ಮೂರ್ತಿ, ಪೊಲೀಸ್ ನಿರೀಕ್ಷಕರು ಬಜಪೆ ಠಾಣೆ. ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಎ.ಎಸ್.ಐ ಮಹಮ್ಮದ್ , ಕುಶಲ ಮಣಿಯಾಣಿ, ವಿಜಯ್ ಕಾಂಚನ್, ಸತೀಶ್ ಎಮ್, ಇಸಾಕ್ ಮತ್ತು ಶರಣ್ ಕಾಳಿ ಹಾಗೂ ಬಜಪೆ ಪೊಲೀಸ್ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.

Comments are closed.