ಕರಾವಳಿ

ಶ್ರೀ ಕ್ಷೇತ್ರ ಕದ್ರಿಯಲ್ಲಿ ‌ಅಖಿಲ ಭಾರತ ಬ್ರಾಹ್ಮಣ‌ ಒಕ್ಕೂಟ ವತಿಯಿಂದ ಮಳೆಗಾಗಿ ಪರ್ಜನ್ಯಜಪ, ರುದ್ರ ಪಾರಾಯಣ

Pinterest LinkedIn Tumblr

ಮಂಗಳೂರು : ಕರ್ನಾಟಕದಲ್ಲಿ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ತೀವ್ರತರವಾದ ಜಲಕ್ಷಾಮ ತಲೆದೋರಿದ್ದು‌ ಇದರ ಪರಿಹಾರಾರ್ಥ‌ ಅಖಿಲ ಭಾರತ ಬ್ರಾಹ್ಮಣ‌ ಒಕ್ಕೂಟ‌ ಆಶ್ರಯದಲ್ಲಿ ಕದ್ರಿ ಮಂಜುನಾಥ ದೇವಳದ  ಕೆರೆಯ ಪ್ರಾಂಗಣದಲ್ಲಿ ಬೆಳಗ್ಗೆ 6 ಗಂಟೆಯಿಂದ 7 :30ರ ವರೆಗೆ ವರುಣ ದೇವರ ಪ್ರೀತ್ಯರ್ಥ, ಪರ್ಜನ್ಯಜಪ, ರುದ್ರ ಪಾರಾಯಣ ವಿಷ್ಣುಸಹಸ್ರನಾಮ ಪಠಣ ನಡೆಸಲಾಯಿತು.

ಕದ್ರಿ ದೇವಳದ ಅರ್ಚಕರಾದರಾಘವೇಂದ್ರ‌ಅಡಿಗ,ಡಾ. ಪ್ರಭಾಕರ‌ಅಡಿಗ ದೀಪ ಪ್ರಜ್ವಲನಗೊಳಿಸಿದರು ಮತ್ತು‌ಇತರ ವೈದಿಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮಜರಗಿತು.

ಕಲ್ಕೂರ ಪ್ರತಿಷ್ಠಾನದ‌ ಅಧ್ಯಕ್ಷ‌ಎಸ್. ಪ್ರದೀಪಕುಮಾರ ಕಲ್ಕೂರ ನೇತೃತ್ವ ವಹಿಸಿದ್ದು ವಿಪ್ರಸಮೂಹ ಕೊಂಚಾಡಿ, ರುದ್ರ ಸಮಿತಿ ನಂತೂರು, ಸುಬ್ರಹ್ಮಣ್ಯ ಸಭಾ, ವಿಪ್ರಸಭಾ ಕೊಡಿಯಾಲ್‌ಬೈಲ್, ಕರಾಡ ಬ್ರಾಹ್ಮಣ ಸಂಘ, ಸಮತಾ ಬಳಗ, ಶಿವಳ್ಳಿ ಬ್ರಾಹ್ಮಣ, ಸಹಿತ ಸುಮಾರು 200ಕ್ಕೂ ಮಿಕ್ಕಿ ವಿಪ್ರ ಬಂಧುಗಳು ಜಪ ಮತ್ತು ಪಾರಾಯಣ ನಡೆಸಿದರು.

ನಾರಾಯಣಕಂಜರ್ಪಣೆ, ಸುಧಾಕರರಾವ್ ಪೇಜಾವರ, ರಾಮಕೃಷ್ಣ, ನಂದಳಿಕೆ ಬಾಲಚಂದ್ರರಾವ್, ಶ್ರೀಕಾಂತ್ ಸುಬ್ರಹ್ಮಣ್ಯ ಸಭಾ, ಶ್ರೀಧರ ಐತಾಳ, ರಘುರಾಮ ಲ್ಯಾಂಡ್‌ಲಿಂಕ್ಸ್, ಎಲ್ಲೂರು ರಾಮಚಂದ್ರ ಭಟ್, ಕೃಷ್ಣ ಭಟ್ ಕೆ. , ಕೆ. ವಾಸುದೇವ ಭಟ್,ಗಣೇಶ್ ಹೆಬ್ಬಾರ್,  ರಾಮ ಹೊಳ್ಳ, ಅಲ್ಲದೆ ದಿನೇಶ್‌ ದೇವಾಡಿಗ ಕದ್ರಿ, ಅರುಣ್‌ ಕುಮಾರ್‌ ಕದ್ರಿ, ರೂಪಾ ಡಿ. ಬಂಗೇರ, ಅಶೋಕ ಡಿ.ಕೆ., ಸಹಿತ ಸಾರ್ವಜನಿಕರು ಪಾಲ್ಗೊಂಡರು.

Comments are closed.