ಮಂಗಳೂರು : ಬೆಂಗಳೂರಿನಲ್ಲಿ ಕಳೆದ ಆರು ವರ್ಷಗಳಿಂದ ನಟನೆ, ಬರವಣಿಗೆ ಮತ್ತು ನಿರ್ದೇಶನ ಕ್ಷೇತ್ರದಲ್ಲಿ ಆಸಕ್ತರಿಗೆ ತರಬೇತಿ ನೀಡುತ್ತಿದ್ದ ಆಪ್ ಆನ್ ಆಕ್ಟರ್ ಪ್ರಿಪೇರ್ಸ್ ಸಂಸ್ಥೆಯು ಮಂಗಳೂರಿನಲ್ಲಿ ನಟನೆ, ಬರವಣಿಗೆ ಮತ್ತು ನಿರ್ದೇಶನ ಕ್ಷೇತ್ರದಲ್ಲಿ ಆಸಕ್ತಿ ಇರು ವವರಿಗೆ ತರಬೇತಿ ನೀಡಲು ನಿರ್ಧರಿಸಿದ್ದು, ಮೇ 6ರಂದು ಸೋಮವಾರ ತರಬೇತಿಯು ಕೊಡಿಯಾಲ್ಬೈಲ್ ಶಾರದಾ ವಿದ್ಯಾಲಯ ಸಮೀಪದ ಶತಾಯುಷಿ ದಂಪತಿ ಮಂಟಪ ವಾತ್ಸಲ್ಯಧಾಮದಲ್ಲಿ ಆರಂಭವಾಗಲಿದೆ. 18 ವರ್ಷ ಮೇಲ್ಪಟ್ಟ ಯುವಕ,ಯುವತಿಯರು ಈ ಅಭಿನಯ ತರಬೇತಿ ಶಿಬಿರದಲ್ಲಿ ಭಾಗವಹಿಸ ಬಹುದು. ಎಂದು ನಿರ್ದೇಶಕಿ, ನಟಿ ಉಷಾ ಭಂಡಾರಿ ತಿಳಿಸಿದ್ದಾರೆ.
2014ರಲ್ಲಿ ಮಂಗಳೂರಿನಲ್ಲಿ ಒಂದು ತಿಂಗಳ ಕಾಲ ನಟನೆ ನಿರ್ದೇಶನದ ತರಬೇತಿ ಯಶಸ್ವಿಯಾಗಿ ಪೂರೈಸಿತ್ತು. ಪ್ರಸಕ್ತ ಮಂಗಳೂರಿನಲ್ಲಿ ತುಳು ಸಿನಿಮಾಕ್ಕೆ ಆದ್ಯತೆ ನೀಡುತ್ತಿದ್ದು, ನಟ, ಬರಹಗಾರ ಮತ್ತು ತಂತ್ರಜ್ಞರು ಬಹಳಷ್ಟಿದ್ದರೂ ಅವರಿಗೆ ಮಾರ್ಗದರ್ಶನದ ಕೊರತೆ ಇದೆ. ಈ ನಿಟ್ಟಿನಲ್ಲಿ ಆಯಾ ಕ್ಷೇತ್ರದ ನುರಿತ ತಜ್ಞರಿಂದ ಒಂದು ತಿಂಗಳ ತರಬೇತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಮೇ. 6ರಂದು ಸಂಜೆ 6.00 ಘಂಟೆಗೆ ತರಬೇತಿ ಉದ್ಘಾಟನೆಗೊಳ್ಳಲಿದೆ ಎಂದು ಉಷಾ ಭಂಡಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9845008282 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.