
ಮಂಗಳೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ-ಮಾತೃ ಶಕ್ತಿ-ದುರ್ಗಾವಾಹಿನಿ ಮತ್ತು ರಾಮೋತ್ಸವ ಸಮಿತಿ ಮಂಗಳೂರು ವತಿಯಿಂದ ಎಪ್ರಿಲ್ 26ರಿಂದ 28ರವರೆಗೆ ನಗರದ ಕೇಂದ್ರ ಮೈದಾನದಲ್ಲಿ ಬಾಲಂಭಟ್ ಮನೆತನದ ವೇದಮೂರ್ತಿ ಗಿರಿಧರ ಭಟ್ ಪೌರೋಹಿತ್ಯದಲ್ಲಿ ಶ್ರೀ ರಾಮೋತ್ಸವ ಜರಗಿತು.
ರಾಮೋತ್ಸವದ ಕೊನೆಯ ದಿನವಾದ ರವಿವಾರದಂದು ರಾವಣ ದಹನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ರಾವಣ ಮೂರ್ತಿ ಹೊತ್ತಿ ಉರಿಯುವ ದೃಶ್ಯವನ್ನು ಸಾವಿರಾರು ಜನ ನೋಡಿ ಸಂಭ್ರಮಿಸಿದರು. ಇದೇ ವೇಳೆ ರಾತ್ರಿ 9 ಗಂಟೆ ಬಳಿಕ ಆಕರ್ಷಕ ಸುಡುಮದ್ದುಗಳ ಪ್ರದರ್ಶನ ನಡೆಯಿತು.

ರವಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಪ್ರಾಂತ ಗೋರಕ್ಷ ಸಹ ಪ್ರಮುಖ್ ಜಗದೀಶ್ ಶೇಣವ ಪ್ರಸ್ತಾವನೆಗೈದರು.
ಶ್ರೀ ರಾಮೋತ್ಸವ ಸಮಿತಿಯ ಅಧ್ಯಕ್ಷ ರಾಮ್‌ಪ್ರಸಾದ್, ಕಾರ್ಯದರ್ಶಿ ಮನೋಹರ್ ಸುವರ್ಣ, ವಿಹಿಂಪ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್,ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ಗಣ್ಯರಾದ ವಿನೋದ್ ಶೆಟ್ಟಿ ಬೋಳ್ಯಗುತ್ತು, ಮುರಳಿಕೃಷ್ಣ ಹಂಸತ್ತಡ್ಕ, ರಾಘವೇಂದ್ರ ರಾವ್, ರವೀಂದ್ರ ಮುನ್ನಿಪ್ಪಾಡಿ, ವಿವೇಕ್ ತಂತ್ರಿ, ಮಮತಾ ಅಣ್ಣಯ್ಯ ಕುಲಾಲ್, ಜಗದೀಶ್ ಶೆಣೈ, ಗೋಪಾಲಕೃಷ್ಣ ಶೆಣೈ, ಸುನಿಲ್ ಕುಮಾರ್, ಗುರುದತ್ ಶೆಣೈ, ಶ್ರೀಧರ್ ಭಟ್, ಕೃಷ್ಣಮೂರ್ತಿ, ಮೊದಲಾದವರು ಉಪಸ್ಥಿತರಿದ್ದರು.
Comments are closed.