
ಮಂಗಳೂರು : ಭಾರತೀಯ ಕುಟುಂಬ ಪದ್ಧತಿಯನ್ನು ಸಾಕ್ಷಾತ್ಕಾರಗೊಳಿಸಿರುವ ಶತಾಯುಷಿ ಅಂಗಡಿ ಮಾರು ಚಂದ್ರಗಿರಿ ಕೃಷ್ಣ ಭಟ್ರವರನ್ನುಇತ್ತೀಚೆಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಧರ್ಮ ಪ್ರಚಾರಕ್ಕಾಗಿತನ್ನ ಪುತ್ರರೋರ್ವರನ್ನು ಪೇಜಾವರ ಮಠದಮೂಲಕ ಸಮಾಜಕ್ಕೆ ಅರ್ಪಿಸಿರುವ ಶ್ರೀಯುತರು ವೈದಿಕರಾಗಿ, ಕೃಷಿ ಕ್ಷೇತ್ರದಲ್ಲೂ ಅನುಭವಿಗಳಾಗಿ ಬಡ ಬಗ್ಗರು, ದೀನ ದಲಿತರಕಲ್ಯಾಣವನ್ನು ಬಯಸುವ ಮೂಲಕ ಸರ್ವರಿಗೂ ಪ್ರೀತಿ ಪಾತ್ರರಾಗಿರುವ. ಕೃಷ್ಣ ಭಟ್ಟರು ‘ವಿದ್ಯಾದಾನ ಮಾಡುವ ಮೂಲಕ ಅನೇಕರಜೀವನಕ್ಕೆ ಬೆಳಕಾಗಿದ್ದಾರೆ ಎಂದು ಪೇಜಾವರ ಮಠದಕಿರಿಯ ಸ್ವಾಮೀಜಿ ವಿಶ್ವಪ್ರಸನ್ನತೀರ್ಥರು ನುಡಿದರು.
ಫಲಾಪೇಕ್ಷೆರಹಿತಜೀವನಾದರ್ಶವನ್ನು ಹೊಂದಿರುವ ಶ್ರೀಯುತರ ಪರಿಪೂರ್ಣವಾದ ಬದುಕು ಹಾಗೂ ಭಾರತೀಯಕೌಟುಂಬಿಕಜೀವನದ ಸಾಕ್ಷಾತ್ಕಾರಇತರರಿಗೂಆದರ್ಶಪ್ರಾಯವಾಗಿದೆಎಂದುಎಸ್. ಪ್ರದೀಪಕುಮಾರಕಲ್ಕೂರ ಹೇಳಿದ್ದಾರೆ.
ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಜರಗಿದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೃಷ್ಣ ಭಟ್ಟರ ಜೀವನಾದರ್ಶಗಳ ಗುಣಗಾನ ಮಾಡಿದರು, ಭುವನಾಭಿರಾಮಉಡುಪ, ಕೊಳುವೈಲು ಗೋಪಾಲಕೃಷ್ಣ ರಾವ್, ದೇವಿ ಪ್ರಸಾದ್ ಪುನರೂರು ಮೊದಲಾದವರು ಉಪಸ್ಥಿತರಿದ್ದರು.
Comments are closed.