ಕರಾವಳಿ

ಕದ್ರಿ ಶ್ರೀ ಮಂಜುನಾಥ ದೇವಸ್ಥಾನ : ಬ್ರಹ್ಮಕಲಶೋತ್ಸವ‌ ಆಮಂತ್ರಣ ಪತ್ರಿಕೆ ಬಿಡುಗಡೆ

Pinterest LinkedIn Tumblr

ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮೇ 2ರಿಂದ 11ರವರೆಗೆ ಜರಗಲಿರುವ ಬ್ರಹ್ಮಕಲಶ, ಮಹಾರುದ್ರಯಾಗ ಹಾಗೂ ಮಹಾ ದಂಡರುದ್ರಾಭಿಷೇಕದ‌ ಆಮಂತ್ರಣ ಪತ್ರಿಕೆಯನ್ನು ಶ್ರೀ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿಯ ಹಾಗೂ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ‌ ಅಧ್ಯಕ್ಷರೂ ‌ಆಗಿರುವ ಎ. ಜಿ. ಶೆಟ್ಟಿಯವರು ‌ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ‌ಎಸ್. ಪ್ರದೀಪ್‌ಕುಮಾರ್‌ ಕಲ್ಕೂರ, ದೇವಳದ ಕಾರ್ಯ ನಿರ್ವಹಣಾಧಿಕಾರಿ ಡಾ. ನಿಂಗಯ್ಯ ವಿಠಲ ದಾಸತಂತ್ರಿ, ರಾಮಣ್ಣ‌ಅಡಿಗ, ರಾಘವೇಂದ್ರ‌ಅಡಿಗ, ಶಶಿಧರ ಹೆಗ್ಡೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ದಿನೇಶ್‌ದೇವಾಡಿಗ,ರಂಜನ್‌ಕುಮಾರ್, ಸುರೇಶ್‌ಕುಮಾರ್, ಹರಿನಾಥಜೋಗಿ, ರಾಘವೇಂದ್ರ ಭಟ್, ಶ್ರೀಮತಿ ಪುಷ್ಪಲತಾ ಶೆಟ್ಟಿ, ಶ್ರೀಮತಿ ಚಂದ್ರಕಲಾ ದೀಪಕ್, ಅಲ್ಲದೆಕಿಶೋರ್ ಡಿ. ಶೆಟ್ಟಿ, ಪ್ರವೀಣ್‌ಕುಮಾರ್, ಅನಂತಕುಮಾರ್, ಮೋಹನ್‌ಕೊಪ್ಪಲ, ಕಿರಣ್‌ಜೋಗಿ, ಪ್ರದೀಪ್ ಆಳ್ವ, ರವಿ ಕುಮಾರ್, ಸುಧಾಕರರಾವ್ ಪೇಜಾವರ, ಅಮಿತಾಜೋಗಿ, ವಿಜಯಲಕ್ಷ್ಮೀ ಶೆಟ್ಟಿ, ಜಯಲಕ್ಷ್ಮೀಟೀಚರ್, ವಿನಯಾನಂದ, ಭಾಗ್ಯಚಂದ್ರ, ಮಹೇಶ್ ಪಟೇಲ್ ಮತ್ತು‌ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

Comments are closed.