ಕರಾವಳಿ

ನಾಳೆ ಮಂಗಳೂರಿನಲ್ಲಿ ‘ನಡಿಗೆ ಮತದಾನದೆಡೆಗೆ’-‘ವಾಕ್ ವಿತ್‌ಟಾಕ್’ -ವಿಶೇಷ ಜಾಗೃತಿ ಕಾರ್‍ಯಕ್ರಮ‌

Pinterest LinkedIn Tumblr

ಮಂಗಳೂರು, ಎಪ್ರಿಲ್.10 :ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಆಕಾಶವಾಣಿ ಮಂಗಳೂರು, ರೋಟರ್‍ಯಾಕ್ಟ್ ಮಂಗಳೂರು ಸಿಟಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದಲ್ಲಿ ಏ.11ರಂದು ಗುರುವಾರ 4 ಗಂಟೆ 30 ನಿಮಿಷದಿಂದ 6 ಗಂಟೆಯವರೆಗೆ ನಡಿಗೆ ಮತದಾನದೆಡೆಗೆ -‘ವಾಕ್ ವಿತ್‌ ಟಾಕ್’ ಮತದಾರರ ವಿಶೇಷ ಜಾಗೃತಿಕಾರ್ಯಕ್ರಮವು ಕದ್ರಿ‌ ಉದ್ಯಾನವನದಲ್ಲಿ ಜರುಗಲಿದೆ.

ಕದ್ರಿ‌ಉದ್ಯಾನವನದಲ್ಲಿ ವಾಕಿಂಗ್ ನಿರತರು ಮತದಾನದ ಮಹತ್ವದ ಬಗ್ಗೆ ಮುಕ್ತವಾಗಿ ಮಾತನಾಡಲಿರುವರು. ಜೊತೆಗೆಗಣ್ಯರು, ಶಿಕ್ಷಣ, ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆ, ಸಿನಿಮಾ, ಸ್ವಾತಂತ್ರ್ಯಯೋಧರು, ಸಮಾಜದ ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಬ್ರಿಗೇಡಿಯರ್‌ಐ.ಎನ್.ರೈ‌ಉದ್ಘಾಟಿಸಲಿದ್ದು,.ಕಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ‌ ಎಸ್. ಪ್ರದೀಪ್‌ ಕುಮಾರ್‌  ಕಲ್ಕೂರ‌ ಅಧ್ಯಕ್ಷತೆ ವಹಿಸಲಿದ್ದಾರೆ,

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಸ್ವೀಪ್ ಸಮಿತಿಯ‌ ಅಧ್ಯಕ್ಷರಾದ ಡಾ.ಸೆಲ್ವಮಣಿ‌ಆರ್, ರೋಟರ್‍ಯಾಕ್ಟ್‌ನ‌ ಅಧ್ಯಕ್ಷ ಗಣೇಶ್, ಸಿನಿಮಾರಂಗದ ದೇವದಾಸ್‌ ಕಾಪಿಕಾಡ್, ಕಲಾವಿದೆ ಶಬರಿಗಾಣಿಗ, ಭಾರತೀಯ ರೆಡ್‌ ಕ್ರಾಸ್ ಸಂಸ್ಥೆಯ ಸಿ‌ಎ ಶಾಂತಾರಾಮ ಶೆಟ್ಟಿ, ರೇಡಿಯೋ  ಕೇಳುಗರ ಸಂಘದ ರಾಮರಾವ್, ಪತ್ರಿಕಾಭವನದಟ್ರಸ್ಟ್‌ ಅಧ್ಯಕ್ಷ‌ ಆನಂದ ಶೆಟ್ಟಿ, ಸಾಹಿತಿ ಮನೋರಮಾ  ಭಟ್, ಕ್ರೀಡಾಳು ಪ್ರದೀಪ್‌ಆಚಾರ್‍ಯ, ಡಾ.ಪ್ರತಿಭಾರೈ, ಬೀಚ್‌ಅಭಿವೃದ್ಧಿ ಸಮಿತಿಯ ಕಾರ್‍ಯನಿರ್ವಾಹಕರಾದ ಯತೀಶ್ ಬೈಕಂಪಾಡಿ, ಆಕಾಶವಾಣಿಯ‌ ಉಪ ನಿರ್ದೇಶಕರು(ತಾಂತ್ರಿಕ)ರಮೇಶ್ಚಂದ್ರನ್.ಜಿ,ಕಾರ್‍ಯಕ್ರಮ ಮುಖ್ಯಸ್ಥರಾದ‌ ಉಷಾಲತಾ ಸರಪಾಡಿ, ಮಂಗಳಾ ಮ್ಯಾಜಿಕ್ ಸರ್ಕ್‌ಲ್‌ನ ಸ್ವರ್ಣಸುಂದರ್, ದ.ಕ ಜಿಲ್ಲಾ‌ ಅಪರ ಜಿಲ್ಲಾಧಿಕಾರಿ‌ ಆರ್.ವೆಂಕಟಾಚಲಾಪತಿ, ವಾರ್ತಾಧಿಕಾರಿರೋಹಿಣಿ ಕೆ. ಸ್ವೀಪ್‌ನ ಸದಸ್ಯ ಕಾರ್‍ಯದರ್ಶಿ ಸುಧಾಕರ್ ಕೆ. ನಿವೃತ್ತ‌ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮದ. ಕ.ಜಿಲ್ಲಾ ಗೃಹ ರಕ್ಷಕ ದಳದ ಕಮಾಂಡೆಂಟ್ ಡಾ.ಮುರಳಿ ಮೋಹನ ಚೂಂತಾರು, ಮಂಗಳೂರು ತಾಲೂಕುಕನ್ನಡ ಸಾಹಿತ್ಯ ಪರಿಷತ್‌ಅಧ್ಯಕ್ಷರಾದ ವಿಜಯಲಕ್ಷ್ಮಿ ಶೆಟ್ಟಿ, ಮಹಿಳಾ ಒಕ್ಕೂಟದ‌ ಅಧ್ಯಕ್ಷರಾದ ಚಂಚಲಾ ತೇಜೋಮಯ ಮತ್ತಿತರು ಭಾಗವಹಿಸಲಿದ್ದಾರೆ.

ಈ ಕಾರ್‍ಯಕ್ರಮವನ್ನು ಮಂಗಳೂರು ಆಕಾಶವಾಣಿ ಕೇಂದ್ರವು ನೇರಪ್ರಸಾರ ಮಾಡಲಿದೆ‌ ಎಂದು ಕಾರ್ಯಕ್ರಮ ಸಂಯೋಜಕರಾದ ಡಾ.ಸದಾನಂದ  ಪೆರ್ಲ ತಿಳಿಸಿದ್ದಾರೆ.

Comments are closed.