ಕರಾವಳಿ

ಮಂಗಳೂರಿನ ಈಜುಕೊಳದಲ್ಲಿ ನೀರುಪಾಲಾದ ಯುವಕ

Pinterest LinkedIn Tumblr

ಮಂಗಳೂರು, ಮಾರ್ಚ್. 25 :ಮಂಗಳೂರಿನ (ಮನಪಾಕ್ಕೆ ಒಳಪಟ್ಟ) ಈಜುಕೊಳದಲ್ಲಿ ಯುವಕನೋರ್ವ ಆಕಸ್ಮಿಕ ಮುಳುಗಿ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ.

ಮೃತ ಯುವಕನನ್ನು.ಮರೋಳಿ ನಿವಾಸಿ ಯಜ್ಞೇಶ್ (19) ಎಂದು ಗುರುತಿಸಲಾಗಿದೆ.

ರವಿವಾರ ಮಧ್ಯಾಹ್ನ ಯಜ್ಞೇಶ್ ತನ್ನ ನಾಲ್ಕೈದು ಸ್ಮೇಹಿತರ ಜೊತೆ ಈಜು ಕಲಿಯಲೆಂದು ಮನೆಯಿಂದ ಹೊರಟಿದ್ದು, ಕೆಲಹೊತ್ತಿನಲ್ಲೇ ಮಂಗಳಾ ಕ್ರೀಡಾಂಗಣದ ಈಜುಕೊಳಕ್ಕೆ ಬಂದಿದ್ದಾರೆ. ಈಜುವ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದು, ಕೂಡಲೇ ಯಜ್ಞೇಶ್ ರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೃತ ಯುವಕನು ನೀರಿನಲ್ಲಿ ಈಜಾಡುವಾಗ ಡೈವ್ ಹೊಡೆದಿದ್ದಾನೆ. ಈ ವೇಳೆ ನೀರು ಮೂಗಿನಿಂದ ತಲೆಗೆ ಏರಿದ್ದರಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಐದು ಅಡಿ ಎತ್ತರದ ಜಾಗದಲ್ಲಿ ಈಜಬೇಕಾಗಿದ್ದ ಯುವಕನು ಆರು ಅಡಿ ಎತ್ತರ ಪೂಲ್‌ನಲ್ಲಿ ಈಜುವ ದುಸ್ಸಾಹಸಕ್ಕೆ ಕೈಹಾಕಿದ್ದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.