ಕರಾವಳಿ

ನಾಳೆಯಿಂದ ಐಪಿಎಲ್ ಮ್ಯಾಚ್ : ಬೆಟ್ಟಿಂಗ್ ಪ್ರಿಯರಿಗೆ ಎಚ್ಚರಿಕೆ ನೀಡಿದ ಪೊಲೀಸ್ ಕಮಿಷನರ್

Pinterest LinkedIn Tumblr

ಮಂಗಳೂರು, ಮಾರ್ಚ್. 22: ಬೆಟ್ಟಿಂಗ್‌ ವಿಷಯದಲ್ಲಿ (ಕು)ಖ್ಯಾತಿ ಪಡೆದಿರುವ ಐಪಿಎಲ್ (ಚುಟುಕು ಕ್ರಿಕೆಟ್ ) ಪಂದ್ಯಾಟ ನಾಳೆಯಿಂದ ಆರಂಭವಾಗಲಿದ್ದು, ಐಪಿಎಲ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಳ್ಳದಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಆರಂಭವಾಗಲಿರುವ ಐಪಿಎಲ್ 2019 ಪಂದ್ಯಕೂಟದ ಹಿನ್ನೆಲೆಯಲ್ಲಿ ಅವರು ಶುಕ್ರವಾರ ಟ್ವಿಟರ್ ಮೂಲಕ ಬೆಟ್ಟಿಂಗ್ ನಡೆಸುವ ಬುಕ್ಕಿಗಳಿಗೆ ಮುನ್ನೆಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಮಾತ್ರವಲ್ಲದೇ ಬೆಟ್ಟಿಂಗ್ ನಲ್ಲಿ ಪಾಲ್ಗೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ಇದೇ ಸಂದರ್ಭ ತಮ್ಮ ಟ್ವೀಟ್‌ನ್ನು ಶೇರ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದವರು ಟ್ವೀಟ್‌‌ಗರಲ್ಲಿ ಮನವಿ ಮಾಡಿದ್ದಾರೆ.

Comments are closed.