ಕರಾವಳಿ

ಮೂಡುಬಿದಿರೆ ಬಳಿ ರಸ್ತೆ ಅಪಘಾತ : ತುಳು ಚಲನಚಿತ್ರ ನಿರ್ದೇಶಕ ಮೃತ್ಯು

Pinterest LinkedIn Tumblr

ಮಂಗಳೂರು, ಮಾರ್ಚ್. 22: ಮೂಡುಬಿದಿರೆ ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಕೊಣಾಜೆಯಲ್ಲಿ ಗುರುವಾರ ನಡೆದ ರಸ್ತೆ ಅಪಘಾತದಲ್ಲಿ ತುಳು ಚಲನಚಿತ್ರ ನಿರ್ದೇಶಕರೊಬ್ಬರು ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕೊಣಾಜೆಕಲ್ಲು ನಿವಾಸಿ ಹಾರಿಸ್ (28) ಎಂದು ಗುರುತಿಸಲಾಗಿದೆ. ಹಾರಿಸ್ ತಾವೇ ಚಲಾಯಿಸುತ್ತಿದ್ದ ಮಾರುತಿ ಓಮ್ನಿ ಕಾರು ಮರಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಮೂಡುಬಿದಿರೆ ಪರಿಸರದಲ್ಲಿ ಕಳೆದ ಹದಿನೈದು ದಿನಗಳಿಂದ “ಆಟಿಡೊಂಜಿ ದಿನ” ತುಳು ಚಲನಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಗುರುವಾರ ಶೂಟಿಂಗ್ ಮುಗಿಸಿ ತನ್ನ ಕಾರಿನಲ್ಲಿ ನಿರ್ಮಾಪಕರನ್ನು ಶಿರ್ತಾಡಿಯಲ್ಲಿರುವ ರೂಮಿಗೆ ಬಿಟ್ಟು ಹಿಂತಿರುಗುವ ಸಂದರ್ಭ ಹಾರಿಸ್ ಅವರ ಕಾರು ಮರಕ್ಕೆ ಢಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.

ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.