ಕರಾವಳಿ

ಕಾರ್ಕಳದ ಬೆಳ್ಮಣ್ ಬಳಿ ಬಸ್- ಟಿಪ್ಪರ್ ಢಿಕ್ಕಿ: ಯುವತಿ ದಾರುಣ ಸಾವು,‌ ಹಲವರಿಗೆ ಗಾಯ

Pinterest LinkedIn Tumblr

ಉಡುಪಿ: ಕಾರ್ಕಳ ಬೆಳ್ಮಣ್- ಶಿರ್ವ ರಸ್ತೆಯ ಜಂತ್ರ ಎಂಬಲ್ಲಿ ಶನಿವಾರ ಸಂಜೆ ಸುಮಾರಿಗೆ ಬಸ್ ಹಾಗೂ ಟಿಪ್ಪರ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟು, 4 ಮಂದಿ ಗಂಭೀರವಾಗಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ಮಂಗಳೂರು ನೀರುಮಾರ್ಗದ ಮೋಕ್ಷಿಕಾ(21) ಎನ್ನಲಾಗಿದೆ.

ಬೆಳ್ಮಣ್ ಕಡೆಯಿಂದ ಶಿರ್ವ ಕಡೆ ಹೋಗುತ್ತಿದ್ದ ಬಸ್ ಎದುರಿನಲ್ಲಿ ಬರುತ್ತಿದ್ದ ಟಿಪ್ಪರ್ ಮುಖಾಮುಖಿ ಢಿಕ್ಕಿ ಹೊಡೆದಿದ್ದು ಇದರಿಂದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮೋಕ್ಷಿಕಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 12 ಮಂದಿಗೆ ಗಾಯಗಳಾಗಿದೆ.

ಗಾಯಾಳುಗಳನ್ನು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Comments are closed.