ಕರಾವಳಿ

ಬಾರ್ಕೂರು ಶ್ರೀ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವ

Pinterest LinkedIn Tumblr

ಉಡುಪಿ: ಬಾರ್ಕೂರಿನ ಶ್ರೀ ಏಕನಾಥೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರಥಮ ವಾರ್ಷಿಕ ವರ್ಧಂತ್ಯುತ್ಸವದ ಅಂಗವಾಗಿ ಫೆ.೧೯ ಮಂಗಳವಾರ ಸಂಭ್ರಮದಿಂದ ಪೂಜಾಕೈಂಕರ್ಯಗಳು ಶ್ರೀ ದೇವಿ ಸನ್ನಿಧಿಯಲ್ಲಿ ಜರುಗಿತು.

ಬೆಳಿಗ್ಗೆನಿಂದಲೇ ಸಾಮೂಹಿಕ ಚಂಡಿಕಾಯಾಗ ವಧು-ವರರ ನೋಂದಣಿ ಮತ್ತು ವಧು-ವರ ಅನ್ವೇಷಣೆ ನಡೆಯಿತು. ಮಧ್ಯಾಹ್ನದ ಸುಮಾರಿಗೆ ನಡೆದ ತುಲಾಭಾರ ಸೇವೆಯಲ್ಲಿ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಕ್ತಾಧಿಗಳು ಪಾಲ್ಘೊಂಡಿದ್ದರು. ವರ್ಧಂತ್ಯುತ್ಸವ ಅಂಗವಾಗಿ ದೇವಾಲಯ ಸಂಪೂರ್ಣ ಹೂವಿನ ಅಲಂಕಾರದಿಂದ ಸಿಂಗಾರಗೊಂಡಿದ್ದು ಮೂರು ದಿನಗಳ ಕಾಲ ದೇವಿಯ ಆಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

ಅಖಿಲ ಭಾರತ ತುಳುಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ, ಆಡಳಿತ ವಿಶ್ವಸ್ಥರು ಮತ್ತು ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಇದರ ಅಧ್ಯಕ್ಷರಾದ ಅಣ್ಣಯ್ಯ ಬಿ. ಶೇರಿಗಾರ್, ಉಪಾಧ್ಯಕ್ಷರಾದ ಜನಾರ್ಧನ ಬಿ. ದೇವಾಡಿಗ, ಪ್ರಧಾನ ಕಾರ್ಯದರ್ಶಿ ನರಸಿಂಹ ಬಿ. ದೇವಾಡಿಗ, ಗೌರವ ಕಾರ್ಯದರ್ಶಿ ಗಣೇಶ ದೇವಾಡಿಗ ಅಂಬಲಪಾಡಿ, ಶ್ರೀ ಏಕನಾಥೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಬಾರ್ಕುರು, ಜನಾರ್ದನ ಪಡುಪಣಂಬೂರು, ಆಕ್ಮೆ ಗ್ರೂಫ್ ಆಫ್ ಕಂಪೇನಿಸ್ ದುಬೈ, ಮಸ್ಕತ್ ಇಲ್ಲಿನ ಆಡಳಿತ ನಿರ್ದೇಶಕರಾದ ಹರೀಶ್ ಶೇರಿಗಾರ್ ದುಬೈ, ದಾನಿಗಳಾದ ಬೆಳಗಾಂ ಅಜಂತಾ ಹೋಟೇಲ್ ಆಡಳಿತ ನಿರ್ದೇಶಕ ಆರ್.ಪಿ. ಶೇರಿಗಾರ್, ಡಾ. ದೇವರಾಜ್, ನಾರಾಯಣ ಎಂ ದೇವಾಡಿಗ, ತುಂಗ ಕೆ. ದೇವಾಡಿಗ, ರಾಘವೇಂದ್ರ ದೇವಾಡಿಗ, ಶ್ರೀ ಏಕನಾಥೇಷ್ವರಿ ದೇವಸ್ಥಾನ ಟ್ರಸ್ಟ್ ರಿ. ಬಾರ್ಕೂರು ಇಲ್ಲಿನ ವಿಶ್ವಸ್ಥರು, ಹಿರಿಯಡಕ ಮೋಹನದಾಸ್, ಸಲಹಾ ಸಮಿತಿ ಸದಸ್ಯರು, ವ್ಯವಸ್ಥಾಪನ ಸಮಿತಿ ಸದಸ್ಯರು, ಮಹಿಳಾ ಘಟಕ ಸದಸ್ಯರು, ದೇವಾಡಿಗ ಸಮಾಜದ ಸರ್ವ ಸಂಘದವರು, ದೇವಾಡಿಗ ಬಾಂಧವವರು ಉಪಸ್ಥಿತರಿದ್ದರು.

ದೇವಾಡಿಗ ಸಮಾಜದ ಅಭಿವೃದ್ಧಿ, ಸಂಕಷ್ಟ ಗ್ರಹದೋಷ ನಿವಾರಣೆಗಾಗಿ ಆಯೋಜಿಸಿದ್ದ ನಮ್ಮ ನಡಿಗೆ ಅಮ್ಮನೆಡೆಗೆ ಯಶಸ್ವಿಯಾಗಿ ನಡೆಯಿತು. ಸಂಘದ ಹಿರಿಯರು, ಮಹಿಳೆಯರು ಮಕ್ಕಳು ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅಲ್ಲದೇ ಫೆ. ೧೮ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಘ ಸಂಸ್ಥೆಗಳಿಂದ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.

Comments are closed.