ಕರಾವಳಿ

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಅಕ್ರಮ ಜುಗಾರಿ ಅಡ್ಡೆಗಳು : ಪಣಂಬೂರ್ ಬಳಿ ಅಂದರ್ ಬಾಹರ್ ಆಡುತ್ತಿದ್ದ 44 ಮಂದಿ ಬಂಧನ

Pinterest LinkedIn Tumblr

ಮಂಗಳೂರು : ನಗರದಲ್ಲಿ ಅಕ್ರಮ ಜುಗಾರಿ ಕೇಂದ್ರಗಳು ಹೆಚ್ಚುತ್ತಿದ್ದು, ಪೊಲೀಸರು ದಿನನಿತ್ಯಾ ಅಕ್ರಮ ಜುಗಾರಿ ಅಡ್ಡೆಗಳಿಗೆ ದಾಳಿ ನಡೆಸಿ ಹಲವರನ್ನು ಬಂಧಿಸಿ ಲಕ್ಷಾಂತರ ನಗದು ಹಾಗೂ ವಸ್ತುಗಳನ್ನು ವಶಪಡಿಸಿಕೊಂಡು ಬರುತ್ತಿದ್ದಾರೆ.

ಇದೀಗ ಪಣಂಬೂರು ಠಾಣಾ ವ್ಯಾಪ್ತಿಯ ಮೀನಕಳಿಯಾ ರಸ್ತೆಯ ಎಡಭಾಗ ಕಾಡು ಪೊದರು ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ 44 ಮಂದಿಯನ್ನು ಬಂಧಿಸಿ, ಜುಗಾರಿ ಆಟಕ್ಕೆ ಬಳಸಿದ ನಗದು ಹಣ ರೂ. 75,870/ ,  ಇಸ್ಪೀಟ್ ಎಲೆಗಳು -52 ಮತ್ತು ಕ್ಯಾಂಡಲ್ ,ನ್ಯೂಸ್ ಪೇಪರ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳ ವಿವರ

1.ಮೊಹಮ್ಮದ್ಶರೀಫ್ 2.ರಾಮಪ್ಪ 3.ಪ್ರಕಾಶ್ಭಂಡಾರಿ 4.ದೇವೆಂದ್ರ 5.ಗಂಗಾಧರ್ 6..ಬರಮಗೌಡ  7.ವಜೀರ್ 8.ಲತೀಶ್ 9.ಮಂಜಣ್ಣ
10.ಅಬ್ದುಲ್ಲಾ 11.ನಾರಾಯಣ 12.ಪ್ರಶಾಂತ್ 13. ಉಮಾಮಂಜಿ 14. ರಮೇಶ್ 15. ಐವನ್ಡಿಸೋಜಾ 16. ಹೆಗ್ಗಪ್ಪ 17. ನಾಗೇಶ್
18. ಮೊಹಮದ್ಹನೀಪ್ 19.ಬಾಲಪ್ಪ 20. ಶಿವಾನಂದ 21. ಅಬ್ದುಲ್ರೆಹಮಾನ್ 22. ಅಬ್ದುಲ್ರೆಹಮಾನ್ 23. ರಾಜು 24. ಪ್ರಶಾಂತ್ 25.ಲೋಕನಾಥ 26.ಯೋಗಿಶ್ 27.ಸಚಿನ್ 28.ಪ್ರವೀಣ್ನಾಯಕ್ 29.ಪ್ರವೀಣ್ಚಿಮ್ಮಲ್ 30.ಶಿವಾನಂದಪ್ಪಬಂಗಾರಿ 31.ಹರೀಶ್ ಸುವರ್ಣ 32.ನಾರಾಯಣಕಾನ 33.ಕರೀಂ 34.ಅಶ್ರಫ್ 35.ಕಳಕಪ್ಪಬೇನಕಟ್ಟಿ 36.ಮೊಹಮ್ಮದ್ಶರೀಫ್ 37.ಹರಾಧನ್ಉರಾಂವ್ 38.ಮಂಜುನಾಥ 39.ವಿಷ್ಣುದಾಸ್ 40.ಮಳೆಯಪ್ಪಸಿದ್ದಪ್ಪಕಂಬಾರ್ 41.ಬಸಪ್ಪಪತ್ರ್ಯಪ್ಪಕೊಟಗಿ 42.ಮಂಜುನಾಥ 43.ಪ್ರಭಯ 44.ರಾಜು.

ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ ಗೌಡ, ರವರ ನೇತೃತ್ವದಲ್ಲಿ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಪಣಂಬೂರು ಠಾಣಾ ಪಿ.ಐ ರಫೀಕ್ ಕೆ.ಎಮ್, ಪಿ.ಎಸ್.ಐ ಉಮೇಶ್ ಕುಮಾರ್.ಎಂ.ಎನ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.