ಕರಾವಳಿ

ನಗರದ ಆಸ್ಪತ್ರೆಯ ಮಹಿಳಾ ವೈದ್ಯೆ ಮೇಲೆ ಹಲ್ಲೆ : ಆರೋಪಿ ಅಬ್ದುಲ್ ರಹಿಮಾನ್ ಬಂಧನ

Pinterest LinkedIn Tumblr

ಮಂಗಳೂರು, ಡಿಸೆಂಬರ್.29: ನಗರದ ಆಸ್ಪತ್ರೆಯೊಂದಕ್ಕೆ ತಂದೆಯ ಚಿಕಿತ್ಸೆಗೆಂದು ಆಗಮಿಸಿದ ಯುವಕನೊಬ್ಬ ವೈದ್ಯೆಯೊಬ್ಬರಿಗೆ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಜಪ್ಪು ನಿವಾಸಿ ಸಲ್ಮಾನ್ ಅಬ್ದುಲ್ ರಹಿಮಾನ್ (35) ಎಂದು ಹೆಸರಿಸಲಾಗಿದೆ. ನಗರದ ಫಳ್ನೀರ್‌ನಲ್ಲಿರುವ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ರಹಿಮಾನ್ ತಂದೆಯನ್ನು ವೈದ್ಯರೋರ್ವರು ನಗರದ ಕೆ.ಎಂ.ಸಿ ಆಸ್ಪತ್ರೆಗೆ ತಪಾಸಣೆಗೆ ಕರೆದಿದ್ದರೆನ್ನಲಾಗಿದೆ. ಆದರೆ ರಹಿಮಾನ್ ವೈದ್ಯರು ಹೈಲ್ಯಾಂಡ್ ನಲ್ಲಿರುವುದನ್ನು ಮನಗಂಡು ಆತನ ಅಕ್ಕ ಶಾಹಿದಳೊಟ್ಟಿಗೆ ತಮ್ಮ ತಂದೆಗೆ ಚಿಕಿತ್ಸೆ ನೀಡಲು ಡಿ. 26ರಂದು ನಗರದ ಫಳ್ನೀರ್‌ನಲ್ಲಿರುವ ಆಸ್ಪತ್ರೆಯೊಂದಕ್ಕೆ ಬಂದಿದ್ದರು.

ಈ ವೇಳೆ ಚಿಕಿತ್ಸೆ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ರಹಿಮಾನ್ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಹಿಳಾ ವೈದ್ಯೆ ಮಧ್ಯೆ ಬಂದು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವೈದ್ಯೆ ರಾಹಿಲ ಅವರು ನೀವು ಕೆ.ಎಂ.ಸಿಗೆ ಹೋಗಿ ಎಂದ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಹಿಮಾನ್ ತನ್ನ ಅಕ್ಕ ಶಾಹಿದಳೊಟ್ಟಿಗೆ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ವೈದ್ಯೆಯ ಕೆನ್ನೆಗೆ ಹೊಡೆದು, ದಾಂಧಲೆ ನಡೆಸಿದ್ದಾನೆ. ಹಲ್ಲೆ ನಡೆಸಿರುವುದು ಆಸ್ಪತ್ರೆಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಈ ವಿಡೀಯೋ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿತ್ತು.

ಹಲ್ಲೆಗೊಳಾಗದ ವೈದ್ಯೆ ರಾಹಿಲಾ ಅವರು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Comments are closed.