ಕರಾವಳಿ

ಭಾರಿ ಮಳೆಗೆ ಮನೆ ಕಳೆದುಕೊಂಡ ಕುಟುಂಬಗಳಿಗೆ ಶಾಸಕ ಕಾಮಾತ್‌ರಿಂದ ಪರಿಹಾರ ಚೆಕ್ ಹಸ್ತಾಂತರ

Pinterest LinkedIn Tumblr

ಮಂಗಳೂರು : ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಗೆ ನಗರದ ವಿವಿದೆಡೆಗಳಲ್ಲಿ ಮನೆ ಸಂಪೂರ್ಣ ಹಾನಿಗೊಂಡಿದ್ದು, ಈ ಕುಟುಂಬಗಳಿಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪರಿಹಾರ ಧನದ ಚೆಕ್ ಹಸ್ತಾಂತರ ಮಾಡಿದರು.

ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಗೆ ಬೋಳೂರು ಗ್ರಾಮದ ಚಿಲಿಂಬಿಗುಡ್ಡೆಯ ಆದರ್ಶನಗರದ ಮೋಹನದಾಸ್ ಪೂಜಾರಿಯವರ ಮನೆ ಸಂಪೂರ್ಣ ಹಾನಿಗೊಳಗಾಗಿತ್ತು. ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಬುಧವಾರ ಮೋಹನದಾಸ್ ಅವರಿಗೆ 95,100 ರೂಪಾಯಿಯ ಚೆಕ್ ಹಸ್ತಾಂತರಿಸಿದರು. ಶಾಸಕರೊಂದಿಗೆ ಸಂಜಯ ಪೈ, ಸುರೇಂದ್ರ ಪಾಂಗಳ, ಚರಿತ್ ಪೂಜಾರಿ, ಜೋಯ್, ಧರ್ಮ ಸಾಮ್ರಾಜ್ಯ ಉಪಸ್ಥಿತರಿದ್ದರು.

ಮಂಗಳೂರು ನಗರ ದಕ್ಷಿಣದ ಅಳಪೆ ಗ್ರಾಮದ ಚಂದ್ರಶೇಖರ ಹೆಗ್ಡೆಯವರ ಮನೆ ಕಳೆದ ಬಾರಿ ಸುರಿದ ಭಾರಿ ಮಳೆಗೆ ಸಂಪೂರ್ಣ ಹಾನಿಗೆ ಒಳಗಾಗಿತ್ತು. ಸೋಮವಾರ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪ್ರಕೃತಿ ವಿಕೋಪ ಪರಿಹಾರ ನಿಧಿಯ ಅಡಿಯಲ್ಲಿ ಸಂತ್ರಸ್ತ ಚಂದ್ರಶೇಖರ ಹೆಗ್ಡೆಯವರಿಗೆ 95,100 ರೂಪಾಯಿ ಮೊತ್ತದ ಚೆಕ್ ವಿತರಿಸಿದರು. ಈ ಸಂದರ್ಭ ಅಳಪೆ ವಾರ್ಡ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ನಿಡ್ಡೇಲ್ ಮತ್ತು ಬಿಜೆಪಿ ಕಾರ್ಯಕರ್ತ ಸುರೇಶ್ ಆಚಾರ್ ಉಪಸ್ಥಿತರಿದ್ದರು.

ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೈಯ ಆನೆಗುಂಡಿ ನಿವಾಸಿ ಅನಿಲ್ ಅವರ ಮನೆ ಸಂಪೂರ್ಣ ಹಾನಿಯಾಗಿತ್ತು. ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶನಿವಾರ ಪಾಲಿಕೆಯಲ್ಲಿರುವ ಶಾಸಕರ ಕಚೇರಿಯಲ್ಲಿ ರೂಪಾಯಿ 95,100 ಮೊತ್ತದ ಚೆಕ್ ಅನ್ನು ಅನಿಲ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ವಿಲೇಜ್ ಅಕೌಂಟೆಂಟ್ ಧರ್ಮ ಸಾಮ್ರಾಜ್ಯ, ಆರ್ ಐ ಜೋಯ್, ಬಿಜೆಪಿ ಯುವ ಮುಖಂಡ ಚರಿತ್ ಪೂಜಾರಿ, ಸುರೇಂದ್ರ ಪಾಂಗಾಳ, ಸಂಜಯ್ ಪೈ ಉಪಸ್ಥಿತರಿದ್ದರು.

Comments are closed.