ಕರಾವಳಿ

“ಕಾಡನ್ನು ಉಳಿಸಿ…ಹುಲಿಗಳನ್ನು ರಕ್ಷಿಸಿ” : ವನ ವಿನಾಶಕ ಯೋಜನೆ ಬಗ್ಗೆ ಜಾಗೃತಿ ಮೂಡಿಸಿದ ಪುಟಾಣಿ ಹುಲಿ

Pinterest LinkedIn Tumblr

ಮಂಗಳೂರು : ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆದ “ಮಂಗಳೂರು ದಸರಾ” ಶೋಭಾ ಯಾತ್ರೆ ಸಂದರ್ಭ ಠ್ಯಾಬ್ಲೊವೊಂದರಲ್ಲಿ ಪುಟಾಣಿ ಹುಲಿಯೊಂದು “ಕಾಡನ್ನು ಉಳಿಸಿ… ಹುಲಿಗಳನ್ನು. ರಕ್ಷಿಸಿ..ಎಂಬ ಫಲಕ ಹಿಡಿದು ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಎಲ್ಲರ ಗಮನ ಸೇಳೆಯಿತು.

ನಗರದ ಪತ್ರಕರ್ತೆ ಶ್ರೀಲತಾ ಪ್ರಭು ಇವರ ಪುತ್ರ ಕೆನರಾ ಶಾಲೆಯ 4ರ ಹರೆಯದ ಎಲ್‌ಕೆಜಿ ವಿದ್ಯಾರ್ಥಿ, ಬಹುಮುಖ ಪ್ರತಿಭೆ ಅರ್ನವ್
 ಪ್ರಭು ಈ ಪುಟ್ಟ ಹುಲಿಯೆ ವೇಷ ಹಾಕಿ ಪಿಲಿ ನಲಿಕೆ ಮಾಡಿದ್ದು ಇಡೀ ಶೋಭಾ ಯಾತ್ರೆಗೆ ಒಂದು ವಿಶೇಷ ಮೆರುಗು ನೀಡಿತ್ತು.

ಯಜ್ಞೇಶ್ವರ್ ಯಾನೆ ಯದ್ದು ಬರ್ಕೆ ಇವರ ನೇತ್ರತ್ವದ ಬರ್ಕೆ ಫ್ರೆಂಡ್ಸ್ ಠ್ಯಾಬ್ಲೊ ದಲ್ಲಿ ದೊಡ್ಡ ಹುಲಿಗಳೊಂದಿಗೆ ಚಿಕ್ಕದಾದ ಪುಟ್ಟ ಹುಲಿ ಕಾಡನ್ನು ಉಳಿಸಿ… ಹುಲಿಗಳನ್ನು. ರಕ್ಷಿಸಿ..ಎಂಬ ಫಲಕವನ್ನು ಹಿಡಿದಿದ್ದು ಇದು ಇಂದಿನ ವಾಸ್ತವ ಸನ್ನಿವೇಶಕ್ಕೆ ಹಿಡಿದ ಕನ್ನಡಿಯಾಗಿತ್ತು.

ಸರಕಾರ ಒಂದು ಕಡೆ save ಟೈಗರ್ ಅಂತ ಒಂದಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ…ಇನ್ನೊಂದು ಕಡೆ ಅದೇ ಸರಕಾರದ ಕೆಲವೊಂದು ರಾಜಕಾರಣಿಗಳು ಹುಲಿಗಳ ಆವಾಸ ತಾಣಗಳಲ್ಲೇ ವನ ವಿನಾಶಕ ಯೋಜನೆಗಳಿಗೆ ಅಡವಿ ಕಬಳಿಸುವ ಮಾಫಿಯಾಗಳಿಗೆ ಅಗೋಚರ ಅನುಮತಿಯನ್ನು ನೀಡಿ ತಮ್ಮ ಮತ್ತು ಮಾಫಿಯಾಗಳ ಸೂಟು ಕೇಸ್ ಸಂಬಂಧವನ್ನು ಗಾಢಗೊಳಿಸುತ್ತಾರೆ.

ವನ ವಿನಾಶಕ ಯೋಜನೆಗಳಿಂದ ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಈ ಪುಟ್ಟ ಬಾಲಕ ಹುಲಿಗಳ ವೇದನೆಗೆ ಮತ್ತು ಕಾನನ ರೋದನಕ್ಕೆ ಕಿವಿಯಾಗುವ ಸಂದೇಶವನ್ನೂ ಸಾರುವ ಮೂಲಕ ಜನತೆಯಲ್ಲಿ ಜಾಗೃತಿ ಮೂಡಿಸಿದ್ದಾರೆ.

ಅಲ್ ದಿ ಬೆಸ್ಟ್ ಅರ್ನವ್….

Comments are closed.