ಕರಾವಳಿ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರಿಂದ ದರಣಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 05: ಪ್ರಯಾಣ ಭತ್ತೆ, ದಿನಭತ್ತೆ ಮುಂತಾದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದರು.

ಚುನಾವಣೆ ಸಂದರ್ಭ ಬೂತ್ ಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರ ಪ್ರಯಾಣ ಭತ್ತೆ, ದಿನಭತ್ತೆ ಇತ್ಯಾದಿಗಳನ್ನು ಇನ್ನೂ ನೀಡದಿರುವ ಬಗ್ಗೆ ಆಕ್ರೋಷ ವ್ಯಕ್ತಪಡಿಸಿರುವ ಅಂಗನವಾಡಿ ಕಾರ್ಯಕರ್ತೆಯರು ಚುನಾವಣಾ ಆಯೋಗದ ನಿಲುವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಬೇಡಿಕೆಗಳು :

ಬೂತ್ ಮಟ್ಟದ ಅಧಿಕಾರಿಗಳಾದ ಅಂಗನವಾಡಿ ಕಾರ್ಯಕರ್ತೆಯರ ಈಗಿನ ದರ ಸೂಚ್ಯಾಂಕದ ಪ್ರಕಾರ ಪ್ರೋತ್ಸಾಹ ಧನ ಹೆಚ್ಚಿಸಬೇಕು. ಕಾರ್ಯಕರ್ತರಿಗೆ ಬಂದಿರುವ ಅರ್ಜಿಗಳನ್ನು ಚುನಾವಣೆ ಶಾಖೆಗೆ ಮುಟ್ಟಿಸುವ ವ್ಯವಸ್ಥೆ ಮಾಡುವುದು. ಕಛೇರಿಗೆ ಕರ್ತವ್ಯ ನಿಮಿತ್ತ ಬರುವ ಸಭೆಗಳಿಗೆ ಹಾಜರಾಗುವಾಗ, ಚುನಾವಣಾ ಸಂದರ್ಭದಲ್ಲಿ ತುರ್ತು ಕರ್ತವ್ಯಗಳಾದ ಭಾವಚಿತ್ರ ಹಂಚುವುದು, ಮತದಾರರಿಗೆ ಮಾಹಿತಿ ನೀಡುವುದು, ಮತದಾರರಿಗೆ ಮನೆಮನೆಗೆ ಚೀಟಿ ಹಂಚುವ ಕೆಲಸಗಳಿಗೆ ಪ್ರಯಾಣ ಭತ್ಯೆ ( ಟಿ.ಎ) ದಿನಭತ್ಯೆ ( ಡಿ.ಎ) ನೀಡುವುದು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಸಂಘದ ನಾಯಕಿಯರಾದ ಲತಾ ಸುಳ್ಯ, ಜಯಲಕ್ಷ್ಮಿ ಬಿ.ಆರ್., ಆಶಾಲತಾ, ಚಂದ್ರಾವತಿ, ವಿಜಯಲಕ್ಷ್ಮಿ ಮುಂತಾದವರು ಮಾತನಾಡಿದರು.

Comments are closed.