ಕರಾವಳಿ

ದಕ್ಷಿಣ ಕನ್ನಡ, ಕೊಡಗು ಹಾಗೂ ಕೇರಳದಲ್ಲಿ ನೆರೆ ಹಾವಳಿ : ಸಂತ್ರಸ್ತರಿಗೆ ಅವಶ್ಯಕ ಸಾಮಾಗ್ರಿ ಸ್ವೀಕರಿಸಲು ತಂಡ ರಚನೆ

Pinterest LinkedIn Tumblr

ಮಂಗಳೂರು ಆಗಸ್ಟ್ 19 : ದಕ್ಷಿಣ ಕನ್ನಡ, ಕೊಡಗು ಜಿಲ್ಲೆ ಹಾಗೂ ನೆರೆ ರಾಜ್ಯ ಕೇರಳದಲ್ಲಿ ಭಾರೀ ಮಳೆಯಿಂದಾಗಿ ನೆರೆ ಹಾವಳಿಗೆ ಒಳಗಾದ ಸಂತ್ರಸ್ತರಿಗೆ ನೀಡಲು ತುರ್ತು ಅವಶ್ಯಕ ಸಾಮಾಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲು ತಂಡವನ್ನು ರಚಿಸಿ ನೇಮಿಸಲಾಗಿದೆ.

ಸ್ವೀಕರಿಸಲಾಗುವ ಕೇಂದ್ರ, ಹೆಸರು ಮತ್ತು ಪದನಾಮ – ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು ಸಭಾಭವನ ಕದ್ರಿ, ಜಂಟಿ ಆಯುಕ್ತರು, ಮ.ನಾ.ಪ – ಗೋಕುಲ್ ದಾಸ್ ನಾಯಕ್, 9448951722, ಕಾರ್ಖಾನೆಗಳ ಉಪ ನಿರ್ದೇಶಕರು-ಹೆಚ್. ಎಸ್. ನರೇಂದ್ರಬಾಬು, 9663374033, ಪೋಬೆಷನರಿ ಎ.ಸಿ. ಜಿಲ್ಲಾಧಿಕಾರಿ ಕಚೇರಿ, ಮಂಗಳೂರು-ಸಂತೋಷ್ ಕುಮಾರ್ .ಜಿ., 9483570317.

ಬೆಳಿಗ್ಗೆ 9 ರಿಂದ 1.30 ಗಂಟೆವರೆಗೆ ತುರ್ತು ಅವಶ್ಯಕ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸುವ ತಂಡ:- ಮನೋಹರ ಲೆಕ್ಕಾಧಿಕಾರಿ ಮ.ನಾ.ಪ(9880916038), ಅರುಣ್ ಕುಮಾರ್, ಆರೋಗ್ಯ ನಿರೀಕ್ಷಕರು ಮ.ನಾ.ಪ(9986239632), ಕಿರಣ್, ಆರೋಗ್ಯ ನಿರೀಕ್ಷಕರು, ಮ.ನಾ.ಪ. (9611849367), ದೇವರಾಜ್, ಉಪನ್ಯಾಸಕರು ಕೆ.ಪಿ.ಟಿ. (9741127644), ವೀರಣ್ಣ, ಗ್ರಾಮ ಲೆಕ್ಕಾಧಿಕಾರಿ ಮಂಗಳೂರು(9945812430).

ಮಧ್ಯಾಹ್ನ 1.30 ರಿಂದ ಸಂಜೆ 6.30 ಗಂಟೆವರೆಗೆ ತುರ್ತು ಅವಶ್ಯಕ ಸಾಮಗ್ರಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸುವ ತಂಡ:- ಗುರುರಾಜ್ ಪಟಾಡಿ, ಲೆಕ್ಕಾಧಿಕಾರಿ ಮ.ನಾ.ಪ(8970787887), ಸಂಜಯ್, ಆರೋಗ್ಯ ನಿರೀಕ್ಷಕರು ಮ.ನಾ.ಪ(8722119111), ರಕ್ಷಿತ್, ಆರೋಗ್ಯ ನಿರೀಕ್ಷಕರು, ಮ.ನಾ.ಪ(9180772242), ನರಸಿಂಹ ಭಟ್, ಹೆಚ್.ಓ.ಡಿ. ಎಲೆಕ್ಟ್ರಿಕಲ್ ವಿಭಾಗ ಕೆ.ಪಿ.ಟಿ. (9448835521), ಧರ್ಮಸಾಮ್ರಾಜ್ಯ, ಗ್ರಾಮ ಲೆಕ್ಕಾಧಿಕಾರಿ, ಮಂಗಳೂರು(7619345563).

ಸಾರ್ವಜನಿಕರಿಂದ ಸ್ವೀಕರಿಸಬಹುದಾದ ವಸ್ತುಗಳು: ಹಾಸಿಗೆ ಹೊದಿಕೆಗಳು, ಜಮಖಾನ/ಕಾರ್ಪೆಟ್ಸ್‍ಗಳು, ಅಡುಗೆ ಸಾಮಾಗ್ರಿಗಳು, ಬಿಸ್ಕತ್/ಬ್ರೆಡ್, ಮೆಡಿಸನ್ಸ್, ವಾಟರ್ ಬಾಟಲ್, ಉಡುಪುಗಳು, ಟವೆಲ್ಸ್, ಸೋಪ್, ಬ್ರಷ್, ಟೂತ್ ಪೇಸ್ಟ್, ಟಾರ್ಚ್, ವಿದ್ಯಾರ್ಥಿಗಳಿಗಾಗಿ ನೋಟ್ ಪುಸ್ತಕಗಳು, ಸ್ಯಾನಿಟರಿಸ್.

ಮೇಲೆ ಕಾಣಿಸಿದ ಅಧಿಕಾರಿಗಳು ಸಾರ್ವಜನಿಕರು/ ಸಂಘಸಂಸ್ಥೆ ನೀಡುವ ತುರ್ತು ಅವಶ್ಯಕ ಸಾಮಾಗ್ರಿಗಳನ್ನು ಸದರಿ ಕೇಂದ್ರದಲ್ಲಿ ಸ್ವೀಕರಿಸಲು ಆದೇಶಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿ ಕಚೇರಿ 24×7 ಕಂಟ್ರೋಲ್ ರೂಂ 1077 ನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Comments are closed.