ಕರಾವಳಿ

ಶೀರೂರು ಶ್ರೀ ಸಾವು ಪ್ರಕರಣ: ಮುಂದುವರಿದ ತನಿಖೆ, ಪತ್ತೆಯಾಗದ ಡಿ.ವಿ.ಆರ್?

Pinterest LinkedIn Tumblr

ಉಡುಪಿ: ಶಿರೂರು ನಿಗೂಡ ಸಾವಿನ ಪ್ರಕರಣ ಮತ್ತೋಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು ಸಿ.ಸಿ. ಟಿವಿ ಡಿ.ವಿ.ಆರ್ ಪತ್ತೆಗೆ ಶೋಧ ಕಾರ್ಯ ಮುಂದುವರಿದೆ. 4 ಮಂದಿ ಮುಳುಗು ತಜ್ಞರಿಂದ ಡಿ ವಿ ಆರ್ ಪತ್ತೆ ನಡೇಯುತ್ತಿದೆ.

ಡಿ ವಿ ಆರ್ ಪತ್ತೆಯಾಗಿದೆ ಎಂಬ ಮಾದ್ಯಮಗಳ ವರದಿ ಸುಳ್ಳಾಗಿದ್ದು ನಾಲ್ಕು ದಿನಗಳ ಒಳಗಾಗಿ ಡಿ.ವಿ.ಆರ್ ಪತ್ತೆ ಮಾಡುವಂತೆ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ತನಿಖಾ ತಂಡಕ್ಕೆ ಆದೇಶ ಮಾಡಿದ್ದಾರೆನ್ನಲಾಗಿದೆ. ಒಂದು ವೇಳೆ ಡಿ. ವಿ. ಆರ್ ಸಿಕ್ಕದೇ ಇದ್ದಲ್ಲಿ ಮತ್ತೋಂದು ಆಯಾಮದಲ್ಲಿ ಪ್ರಕರಣದ ತನಿಖೆ ನಡೆಸುವಂತೆ ತನಿಖಾ ತಂಡಗಳಿಗೆ ಐ ಜಿ ಪಿ ಸೂಚನೆಯನ್ನು ನೀಡಿದ್ದಾರೆನ್ನಲಾಗಿದೆ.

ರಮ್ಯಾ ಶೆಟ್ಟಿ ಹಾಗೂ ಶಿರೂರು ಶ್ರೀಗಳ ಅಂಗರಕ್ಷಕ ಜಗ್ಗ ಯಾನೇ ಜಗದೀಶ್ ಪೂಜಾರಿಯನ್ನು ನಿಗೂಡ ಸ್ಥಳದಲ್ಲಿ ಇರಿಸಿ ತನಿಖಾ ತಂಡದಿಂದ ವಿಚಾರಣೆ ನಡೆಸುತ್ತಿದ್ದು ರಮ್ಯಾ ಶೆಟ್ಟಿಯನ್ನು ತಪಿಸಿಕೊಳ್ಳಲು ಸಹಕರಿಸಿದ ಇಕ್ಬಾಲ್ ಎಂಬಾತನನ್ನು ಕೂಡಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಐದು ಪ್ರತ್ಯೇಕ ತಂಡ ರಚಿಸಿಕೊಂಡಿರುವ ಪೊಲೀಸರು ತನಿಖೆಯನ್ನು ವಿವ್ಧ ಆಯಾಮಗಳಲ್ಲಿ ನಡೆಸುತ್ತಿದ್ದು ಒಂದು ತನಿಖಾ ತಂಡ ಬೆಂಗಳೂರಿಗೆ ತೆರಳಿದ ಎಂದು ಮಾಹಿತಿಯಿದೆ.

Comments are closed.