ಕರಾವಳಿ

ನನಗೆ ಸ್ತ್ರೀ ಸಂಗವಿದೆ, ಮಕ್ಕಳಿದ್ದಾರೆಂಬ ಆರೋಪ ಸಾಭೀತಾದರೆ ಆ ಕ್ಷಣವೇ ಪೀಠ ತ್ಯಾಗ: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ನನಗೆ ಮಕ್ಕಳಿಲ್ಲ…ನನ್ನ ಬಗ್ಗೆ ಶೀರೂರು ಶ್ರೀಗಳು ಮಾಡಿದ್ದ ಆರೋಪ ಸತ್ಯಕ್ಕೆ ದೂರವಾಗಿದೆ. ಮಕ್ಕಳಿದೆ ಎಂಬ ಆರೋಪದ ಬಗ್ಗೆ ನಾನು ಯಾವುದೇ ರೀತಿಯ ಪರೀಕ್ಷೆಗೂ ಸಿದ್ದ…ಒಂದೊಮ್ಮೆ ಸುಳ್ಳು ಆರೋಪ ಸಾಭೀತು ಆದರೆ ನಾನು ಪೀಠ ತ್ಯಾಗ ಮಾಡುವೆ…. ಇದು ಪೆಜಾವರ ವಿಶ್ವೇಶ್ವ ತೀರ್ಥ ಸ್ವಾಮಿಜಿ ಪತ್ರಿಕಾ ಹೇಳಿಕೆ ಮೂಲಕ ಸಿಡಿಸಿದ ಹೊಸ ಬಾಂಬ್.

ಕೆಳ ದಿನಗಳ ಹಿಂದೆ ವೈರಲ್ ಆದ ಆಡಿಯೊದಲ್ಲಿ ಅಜ್ಜರಿಗೆ ಮೂರು ಮಕ್ಕಳಿದ್ದಾರೆ ಎಂದು ಶಿರೂರು ಶ್ರೀಗಳು ಹೇಳಿದ್ದರೆನ್ನಲಾದ ಧ್ವನಿ ತುಣುಕು ಶ್ರೀಗಳು ವಿಧಿವಶಾರದ ಬಳಿಕ ಎಲ್ಲೆಡೆ ವೈರಲ್ ಆಗಿದ್ದು ಸಾಕಷ್ಟು ಸಂಚಲನ ಮೂಡಿಸಿತ್ತು. ಇದರಿಂದ ತೀವ್ರ ಮುಜುಗರಕ್ಕೀಡಾದ ಪೇಜಾವರ ಶ್ರೀಗಳು 2 ದಿನಗಳ ಬಳಿಕ ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.

ತಮಗೆ ಮಕ್ಕಳಿದ್ದಾರೆ ಎಂಬ ಹೇಳಿಕೆ ಕಪೋಲ ಕಲ್ಪಿತ ಹಾಗೂ ರಘು ವಲ್ಲಭ ತೀರ್ಥರಿಗೆ ಸನ್ಯಾಸ ತೊರೆಯದಿರಲು 5 ಲಕ್ಷ ಕೊಟ್ಟಿದ್ದೇನೆ ಎಂಬ ಆರೋಪ ಕೂಡಾ ಸುಳ್ಳು ಎಂದು ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ನನಗೆ ಮಕ್ಕಳಿದ್ದಾರೆ ಎಂಬುವುದನ್ನು ಸಾಬೀತು ಪಡಿಸಿದ್ರೆ ನಾನು ಪೀಠ ತ್ಯಾಗ ಮಾಡ್ತೀನಿ.ಶಿರೂರು ಸ್ವಾಮೀಜಿಯಿಂದ ನಾನು ಯಾವುದೇ ಹಣ ಆಪೇಕ್ಷಿಸಿಲ್ಲ.ಎಲ್ಲದಕ್ಕೂ ನನನ್ನು ದೂಷಿಸುವುದು ಸರಿಯಲ್ಲ‌.

ತಾರುಣ್ಯದಲ್ಲಿ ಸ್ತ್ರೀ ಸಂಘವಿತ್ತು ಅನ್ನುವುದು ಸುಳ್ಳು ಆರೋಪ.ತಮಿಳುನಾಡುವಿನಲ್ಲಿ ನನಗೆ ಮಕ್ಕಳಿದ್ದಾರೆ ಎಂಬುವುದು ಅದಕ್ಕಿಂತ ದೊಡ್ಡ ಸುಳ್ಳು.ಈ ಹಿಂದೆಯೂ ಕೂಡಾ ಇದೇ ರೀತಿ ಆರೋಪ ನನ್ನ ಮೇಲೆ ಹೊರಿಸಲಾಗಿತ್ತು. ಶಿರೂರು ಶ್ರೀಗಳ ವಿರುದ್ದದ ನಾನು ನೀಡಿರುವ ಹೇಳಿಕೆಯ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ನಾನು ಮಾದ್ಯಮದ ಪ್ರತಿನಿಧಿಗಳು ಕೇಳಿದ ಪ್ರೆಶ್ನೆಗೆ ಉತ್ತರಿಸಿದ್ದೇನೆ ಅಷ್ಟೇ.

ರಘುವಲ್ಲಭ ತೀರ್ಥ ಹಾಗೂ ಇತರ ಶ್ರೀಗಳ ಪೀಠ ತಾಗ್ಯದಲ್ಲಿ ನನ್ನ ಕೈವಾಡ ಇದೆ ಎಂಬ ಆರೋಪ ಶಿರೂರು ಶ್ರೀಗಳು ಹೊರಿಸಿದ್ದಾರೆ. ಇದು ಶುಧ್ದ ಸುಳ್ಳು. ಇದರಲ್ಲಿ ನನ್ನ ಪಾತ್ರ ಯಾವುದು ಇಲ್ಲ. ವಿಶ್ವ ವಿಜಯರು ಅವರಾಗಿಯೇ ಪೀಠ ತ್ಯಾಗ ಮಾಡಿದ್ದರು. ಙಗೆ ತಿಳಿಸದೇ ಪೀಠ ತ್ಯಾಗ ಮಾಡಿದ್ದಾರೆ. ಎಲ್ಲಾ ವಿಚಾರದಲ್ಲಿ ನನನ್ನು ಏಳೆದು ತರುವುದು ಸರಿಯಲ್ಲ. ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲು ನಾನು ಸಿದ್ದ ಎಂದು ಪೇಜಾವರ ಹಿರಿಯ ಶ್ರೀಗಳು ಸವಾಲು ಮಾಡಿದ್ದಾರೆ. ಶಿರೂರು ಶ್ರೀಗಳ ಅಂತ್ಯ ಸಂಸ್ಕಾರಕ್ಕೆ ಬಾರದಿದ್ದಕ್ಕೆ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿರೂರು ಶ್ರಿಗಳ ಸನ್ಯಾಸತ್ವದ ಬಗ್ಗೆ ಪ್ರತಿಕ್ರಿಯಿಸಬೇಕಾಯಿತು ಎಂದರು.

Comments are closed.