ಕರಾವಳಿ

ವಿಷ ಪ್ರಾಶನದ ಆಹಾರ ಕೊಟ್ಟಿದ್ದು ಯಾರು..? ಶಿರೂರು ಸ್ವಾಮೀಜಿಯವರ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಕೇಮಾರು ಶ್ರೀ ಆಗ್ರಹ

Pinterest LinkedIn Tumblr

ಮಂಗಳೂರು: ಜುಲೈ.19: ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾಯುವಂತಹ ಯಾವುದೇ ಸಮಸ್ಯೆಯನ್ನು ಹೊಂದಿರಲಿಲ್ಲ. ಮಡಿವಂತಿಕೆ ಬಿಟ್ಟು ಹೊರಬಂದಿದ್ದು ಶಿರೂರು ಸ್ವಾಮೀಜಿ ಸಾವಿಗೆ ಕಾರಣವಾಯಿತೇ ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲ ಸ್ವಾಮೀಜಿ ಶಂಕೆ ವ್ಯಕ್ತಪಡಿಸಿದ್ದಾರೆ.

ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಸಾವಿನ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಶಿರೂರು ಸ್ವಾಮೀಜಿ ಆಪ್ತರಾಗಿದ್ದ ಕೇಮಾರು ಸ್ವಾಮೀಜಿ, ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಡಿವಂತಿಕೆಯನ್ನು ಬಿಟ್ಟು ಹೊರಬಂದವರು. ಎಲ್ಲ ವರ್ಗದ ಬಡವರ್ಗದ ಜನರನ್ನು ಜಾತಿ-ಮತ ಮುಕ್ತವಾಗಿ ಪ್ರೀತಿ ಮಾಡುತ್ತಿದ್ದರು. ಇದು ಕೂಡಾ ಅವರ ಸಾವಿಗೆ ಕಾರಣ ಆಗಿರಬಹುದು. ಆದ್ದರಿಂದ ಅವರ ಸಾವಿನ ಬಗ್ಗೆ ಸರಕಾರ ಮಧ್ಯಪ್ರವೇಶಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಶಿರೂರು ಸ್ವಾಮೀಜಿ ಘನ ಆಹಾರವನ್ನು ಅಷ್ಟೇನು ಸೇವಿಸುತ್ತಿರಲಲ್ಲಿ. ಜ್ಯೂಸ್ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಮಠದ ವತಿಯಿಂದಲೇ ಆಹಾರ ಮಾಡಿಕೊಡಲಾಗುತ್ತಿತ್ತು. ಇದೀಗ ಅವರಿಗೆ ವಿಷ ಪ್ರಾಶನದ ಆಹಾರ ಕೊಟ್ಟಿದ್ದು ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ

Comments are closed.