ಕರಾವಳಿ

ಪಣಂಬೂರು ಬೀಚ್‌ನಲ್ಲಿ ಅನಿರೀಕ್ಷಿತವಾಗಿ ಬೀಸಿದ ಸುಂಟರಗಾಳಿ : ಸ್ಥಳದಲ್ಲಿದ್ದವರು ಚೆಲ್ಲಾಪಿಲ್ಲಿ

Pinterest LinkedIn Tumblr

ಮಂಗಳೂರು,ಜೂನ್ 19: ಮಂಗಳೂರಿನ ಪಣಂಬೂರು ಬೀಚ್‌ನಲ್ಲಿ ಅನಿರೀಕ್ಷಿತವಾಗಿ ಬೀಸಿದ ಸುಂಟರಗಾಳಿಯಿಂದ ಪ್ರವಾಸಿಗರು ಹಾಗೂ ಸ್ಥಳದಲ್ಲಿದ್ದ ಜನತೆ ಆತಂಕಕ್ಕೀಡಾದ ಘಟನೆ ಸೋಮವಾರ ಸಂಜೆ ನಡೆದಿದ್ದು, ಸುಂಟರಗಾಳಿಯ ದೃಶ್ಯಗಳ ವೀಡಿಯೋ ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿವೆ.

ಪಣಂಬೂರು ಬೀಚ್‌ನ ಕಡಲಕಿನಾರೆಯಲ್ಲಿ ಕಾಣಿಸಿಕೊಂಡ ಈ ಸುಂಟರಗಾಳಿಯಿಂದ ಯಾವೂದೇ ಅನಾಹುತ ಸಂಭವಿಸದಂತೆ ಮುನ್ನೆಚರಿಕೆ ಕ್ರಮವಾಗಿ ಸ್ಥಳದಲ್ಲಿದ್ದವರನ್ನು ಬೀಚ್ ರಕ್ಷಣಾದಳದ ಸಿಬ್ಬಂದಿಗಳು ಸೈರನ್ ಮೊಳಗಿಸಿ ಬೀಚ್‌ನಿಂದ ದೂರ ಸರಿಯುವಂತೆ ಸೂಚನೆ ನೀಡಿದರು.

ಸಂಜೆ 6:30 ರಿಂದ 6:45ರ ಸುಮಾರಿಗೆ ಸಮುದ್ರದಲ್ಲಿ ಕಾಣಿಸಿಕೊಂಡ ಸುಂಟರಗಾಳಿ ಬಳಿಕ ಎನ್‌ಎಮ್‌ಪಿಟಿ ಯಾರ್ಡ್‌ನೊಳಗೆ ಸಾಗಿ ಬಳಿಕ ರಾಷ್ಟ್ರೀಯ ಹೆದ್ದಾರಿ ಕಡೆ ಚಲಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮಂಗಳೂರು ಪಣಂಬೂರು ಬಳಿ ಸಮುದ್ರದಲ್ಲಿ ಕಾಣಿಸಿಕೊಂಡ ಸುಂಟರಗಾಳಿ ಸ್ವಲ್ಪ ಹೊತ್ತಿನಲ್ಲೆ ವೇಗ ಕ್ಷೀಣಿಸಿ ಮರೆಯಾಗಿದೆ. ಘಟನೆಯಿಂದ ಸಮುದ್ರ ತೀರದಲ್ಲಿ ಯಾವೂದೇ ವಸ್ತು,ಅಂಗಡಿಗಳಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಅತಿ ವಿರಳವಾಗಿ ಕಂಡುಬರುವ ಸುಂಟರಗಾಳಿಯ ಆಕರ್ಷಕ ದೃಶ್ಯ ವಿಡಿಯೋ ದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗಿವೆ.

Comments are closed.