ಕರಾವಳಿ

ಮಂಗಳೂರು ಪೊಲೀಸ್ ಕಮೀಷನರ್ ಆಗಿ ಟಿ.ಆರ್ ಸುರೇಶ್ ಕುಮಾರ್ ಮರು ನಿಯೋಜನೆ : ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು, ಜೂನ್ 18: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಕುಮಾರ್ ಅವರನ್ನು ಮತ್ತೆ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಮರು ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದ್ದು, ಸೋಮವಾರ ಟಿ.ಆ ಸುರೇಶ್ ಕುಮಾರ್ ಅವರು ಮತ್ತೆ ಮಂಗಳೂರಿಗೆ ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ಟಿ.ಆರ್ ಸುರೇಶ್ ಕುಮಾರ್

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮನ ಪೊಲೀಸ್ ಆಯುಕ್ತರಾದ ವಿಪುಲ್ ಕುಮಾರ್ ಅವರು ಸುರೇಶ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದು, ವಿಪುಲ್ ಕುಮಾರ್ ಅವರಿಂದ ಸುರೇಶ್ ಕುಮಾರ್ ಅವರು ಅಧಿಕಾರ ಸ್ವೀಕರಿಸಿದರು.

ಅಧಿಕಾರ ಹಸ್ತಾಂತರಕ್ಕೂ ಮುನ್ನ ಮಾಧ್ಯಮದೊಂದಿಗೆ ಮಾತನಾಡಿದ ನಿರ್ಗಮನ ಪೊಲೀಸ್ ಕಮಿಷನರ್ ವಿಪುಲ್ ಕುಮಾರ್ ಅವರು, ಮಂಗಳೂರಿನಲ್ಲಿ ಕೋಮುದ್ವೇಷ ಸಾಮಾನ್ಯ ಎಂಬ ಕೆಟ್ಟ ಹೆಸರಿದೆ. ನನ್ನ ಅನುಭವದ ಪ್ರಕಾರ ಕೆಲವೊಂದು ಅಂತಹ ಘಟನೆಗಳು ನಡೆಯುತ್ತದೆ. ಆದರೆ ಬಹುಪಾಲು ಮಂಗಳೂರಿನ ಜನತೆ ಶಾಂತಿ ಪ್ರಿಯರು. ಅವರಿಗೆ ಶಾಂತಿ, ನೆಮ್ಮದಿ ಬೇಕಾಗಿದೆ. ಕೆಲವೇ ಕೆಲವು ಸಮಾಜದ್ರೋಹಿಗಳಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಅಂತಹ ಸಮಾಜ ದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಸಮರ್ಥರಿದ್ದಾರೆ ಎಂದು ಹೇಳಿದರು. ಇದೇ ವೇಳೆ ಮಂಗಳೂರಿನ ಜನರು ಶಾಂತಿಪ್ರಿಯರು ಎಂದು ತಿಳಿಸಿದ ಅವರು, ಮಂಗಳೂರಿನ ಜನತೆಯ ಶಾಂತಿಪ್ರಿಯತೆ ಬಗ್ಗೆ ಶ್ಲಾಘನೆವ್ಯಕ್ತಪಡಿಸಿದರು.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಟಿ.ಆರ್.ಸುರೇಶ್ ಅವರು ಬೆಂಗಳೂರು ಅಗ್ನಿಶಾಮಕ ದಳದ ಡಿಐಜಿಯಾಗಿ ವರ್ಗಾವಣೆಗೊಂಡಿದ್ದರು. ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿಯ ಐಜಿಪಿ ಮತ್ತು ನಿರ್ದೇಶಕರಾಗಿದ್ದ ವಿಪುಲ್ ಕುಮಾರ್ ಅವರನ್ನು ಚುನಾವಣಾ ಆಯೋಗವು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿತ್ತು.

ವಿಪುಲ್ ಕುಮಾರ್

ಇದೀಗ ಚುನಾವಣಾ ಪ್ರಕ್ರಿಯೆಗಳು ಮುಗಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಾರ್ಯವಿರ್ವಾಹಿಸುತ್ತಿದ್ದ ಟಿ.ಆರ್.ಸುರೇಶ್ ಅವರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಮರು ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ .ಮಂಗಳೂರು ನಗರ ಪೊಲೀಸ್ ಕಮೀಷನರ್ ಅಗಿದ್ದ ವಿಪುಲ್ ಕುಮಾರ್ ಅವರನ್ನು ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡಮಿಯ ಐಜಿಪಿ ಮತ್ತು ನಿರ್ದೇಶಕರಾಗಿ ಮರು ನಿಯೋಜನೆ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ.

ಈ ಮೂಲಕ ಟ.ಆರ್.ಸುರೇಶ್ ಮತ್ತು ವಿಫುಲ್ ಕುಮಾರ್ ಅವರು ತಮ್ಮ ತಮ್ಮ ಸ್ವಾಸ್ಥಾನಕ್ಕೆ ಮರಳಿದ್ದಾರೆ.

Comments are closed.