ಕರಾವಳಿ

ಸಿದ್ದಾಪುರ ಜಿಲ್ಲಾಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ!

Pinterest LinkedIn Tumblr

ಕುಂದಾಪುರ: ಸಿದ್ದಾಪುರ ಜಿಲ್ಲಾ ಪಂಚಾಯಿತಿ ಸದಸ್ಯ ತಾರಾನಾಥ ಶೆಟ್ಟಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಬಿಜೆಪಿ ಅಭ್ಯರ್ಥಿ ರೋಹಿತ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಅಭ್ಯರ್ಥಿ ಪ್ರಸನ್ನ ಕುಮಾರ್ ಶೆಟ್ಟಿ ಅವರ 3360 ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದು, ಜೆಡಿ‌ಎಸ್ ಅಭ್ಯರ್ಥಿ ಅರುಣ್ ಶೆಟ್ಟಿ ಡಿಪಾಜಿಟ್ ಕಳೆದುಕೊಂಡಿದ್ದಾರೆ.

ಕುಂದಾಪುರ ಮಿನಿ ವಿಧಾನ ಸೌಧ ಎಸಿ ಹಾಲ್‌ನಲ್ಲಿ ಭಾನುವಾರ ಮತ ಎಣಿಕೆ ನಡೆದಿದ್ದು, ವಿಜೇಯಿತ ಅಭ್ಯರ್ಥಿ ರೋಹಿತ್ ಕುಮಾರ್ ಶೆಟ್ಟಿ ಅವರಿಗೆ ಚುನಾವಣೆ ಅಧಿಕಾರಿ ಟ.ಭೂಬಾಲನ್ ಪ್ರಮಾಣಪತ್ರ ವಿತರಿಸಿದರು.
ಈ ಹಿಂದೆ ಬಿಜೆಪಿಯಿಂದ ಆಯ್ಕೆಯಾದ ತಾರಾನಾಥ ಶೆಟ್ಟಿ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜೂ.14 ರಂದು ಮಧ್ಯಂತರ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ರೋಹಿತ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ಪಕ್ಷದಿಂದ ವಕೀಲ ಪ್ರಸನ್ನ ಕುಮಾರ್ ಶೆಟ್ಟಿ, ಜೆಡಿ‌ಎಸ್‌ನಿಂದ ಅರುಣ್ ಶೆಟ್ಟಿ ಚುನಾವಣೆ ಖಣದಲ್ಲಿ ಉಳಿದಿದ್ದು, ತಾರಾನಾಥ ಶೆಟ್ಟಿ ಸಹೋದರ ಸಲ್ಲಿಸಿದ ಪಕ್ಷೇತರ ನಾಮಪತ್ರ ಹಿಂದಕ್ಕೆ ಪಡೆಯಲಾಗಿತ್ತು. ಜಿಪಂ ಕ್ಷೇತ್ರಕ್ಕೆ ತ್ರಿಕೋನ ಸ್ಪರ್ಧೆ ಏರ್ಪಟಿದ್ದು, ತೀವ್ರ ಕುತೂಹಲ ಮೂಡಿಸಿತ್ತು. ಕೊನೆಗೂ ಬಿಜೆಪಿ ತನ್ನ ಸ್ಥಾನ ಉಳಿಸಿಕೊಳ್ಳಲು ಸಫಲವಾಗಿದೆ.

ವಿಜೇತ ಅಭ್ಯರ್ಥಿಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅಭಿನಂದಿಸಿ, ಈ ಗೆಲವು ಕಾರ್‍ಯಕರ್ತರ ಪರಿಶ್ರಮಕ್ಕೆ ಸಿಕ್ಕ ಗೆಲವಾಗಿದೆ ಎಂದು ಹೇಳಿದರು.

ಅಭ್ಯರ್ಥಿಗಳು ಪಡೆದ ಮತ
ರೋಹಿತ್ ಕುಮಾರ್ ಶೆಟ್ಟಿ ಬಿಜೆಪಿ-11,926
ಪ್ರಸನ್ನ ಕುಮಾರ್ ಶೆಟ್ಟಿ ಕಾಂಗ್ರೆಸ್-8566
ಅರುಣ್ ಶೆಟ್ಟಿ ಜೆಡಿ‌ಎಸ್_280
ಒಟ್ಟು ಚಲಾವಣೆಯಾದ ಮತ-21,048
ನೋಟ-280
ಒಟ್ಟು ಮತದಾರರು_33188
ಗೆಲುವಿನ ಅಂತರ-3360

Comments are closed.