ಕರಾವಳಿ

ಮೂವರು ಪೊಲೀಸರ ಸಹಿತಾ ಹತ್ತು ಆರೋಪಿಗಳ ಬಂಧನ : ದನದ ವ್ಯಾಪಾರಿ ಸಾವು ಪ್ರಕರಣ ಭೇದಿಸಿದ ಉಡುಪಿ ಎಸ್ಪಿ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

Pinterest LinkedIn Tumblr

ಹಿರಿಯಡ್ಕ ಎಸ್ ಐ ಡಿ ಎನ್ ಕುಮಾರ್

ಮಂಗಳೂರು, ಜೂನ್. 4: ದನದ ವ್ಯಾಪಾರಿ ಹುಸೈನಬ್ಬ ನಿಗೂಡ ಸಾವು ‌ಪ್ರಕರಣವನ್ನು ಭೇದಿಸಿ ಇದೊಂದು ಕೊಲೆ ಎಂದು ತನಿಖೆಯಿಂದ ಪತ್ತೆಹಚ್ಚಿ ಪ್ರಕರಣಕ್ಕೆ ಸಂಬಂಧಿಸಿ ಎಸ್ ಐ ಹಾಗೂ ಮೂವರು ಪೊಲೀಸರ ಸಮೇತಾ ಹತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿಯವರ ಕಾರ್ಯಕ್ಕೆ ಜಿಲೆಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಎಸ್ಪಿಯವರ ಕಾರ್ಯ ಶ್ಲಾಘನೀಯ ಎಂದು ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಪ್ರ. ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ

ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಸಂಶಯಾಸ್ಪದ ಸಾವಿನ ಪ್ರಕರಣವು ಸಂಶಯಾಸ್ಪದ ಸಾವಲ್ಲ ಕೊಲೆ ಎಂಬುದರ ಬಗ್ಗೆ ಹಲವು ಸಂಶಯಗಳ ಮೇರೆಗೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸಿದಾಗ ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿ ಸಾವಾಗಿದ್ದಾರೆ ಎಂಬುದು ಬೆಳಕಿಗೆ ಬಂದು ಮೂರು ಮಂದಿ ಸಂಘಪರಿವಾರದ ಗೂಂಡಾಗಳನ್ನು ಬಂಧಿಸಿ ನಂತರ ತೀವ್ರ ತನಿಖೆಗೆ ಒಳಪಡಿಸಿದಾಗ ಪ್ರಕರಣವು ಮಹತ್ವದ ತಿರುವು ಪಡೆದುಕೊಂಡಿದ್ದು ಹುಸೈನಬ್ಬ ಪೊಲೀಸ್ ಜೀಪಿನಲ್ಲಿ ಮೃತಪಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಅಸಹಜ ಸಾವು ಎಂಬ ನಾಟಕವನ್ನು ಮಾಡಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ಈ ಸಂಬಂಧ ಹಿರಿಯಡ್ಕ ಎಸ್ಸೈ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿ ಹಲವು ಸಂಶಯಗಳಿದ್ದ ಪ್ರಕರಣದ ನೈಜತೆಯನ್ನು ಜನರ ಮುಂದೆ ನಿಷ್ಪಕ್ಷಪಾತ ತನಿಖೆ ನಡೆಸಿ ಬಹಿರಂಗಪಡಿಸಿದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರ ಕಾರ್ಯ ಶ್ಲಾಘನೀಯ ಎಂದು ಇಕ್ಬಾಲ್ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದನದ ವ್ಯಾಪಾರಿ ನಿಗೂಡ ಸಾವು ‌ಪ್ರಕರಣ : ಎಸ್ ಐ ಸಮೇತ ಮೂವರು ಪೊಲೀಸರ ಬಂಧನ – ಬಂಧಿತರ ಸಂಖ್ಯೆ ಹತ್ತಕೇರಿಕೆ

ದನದ ವ್ಯಾಪಾರಿಯನ್ನು‌ ಪೊಲೀಸರೊಂದಿಗೆ ಅಡ್ಡಗಟ್ಟಿದ್ದ ಬಜರಂಗದಳ ಕಾರ್ಯಕರ್ತರು ನಡೆಸಿದ ಹಲ್ಲೆಯಿಂದ ಹುಸೇನಬ್ಬ ಪೊಲೀಸ್ ಜೀಪಿನಲ್ಲಿ‌ ಮೃತಪಟ್ಟಿದ್ದರು. ಆದರೆ ಸಾವನ್ನಪ್ಪಿದ ಹುಸೇನಬ್ಬ ಶವವನ್ನು ಘಟನ ಸ್ಥಳದಿಂದ ಒಂದು ‌ಕಿ ಮೀ ದೂರ ಇರಿಸಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹಿರಿಯಡ್ಕ ಎಸ್ ಐ ಡಿ ಎನ್ ಕುಮಾರ್, ಪೊಲೀಸ್ ಜೀಪು ಚಾಲಕ ಗೋಪಾಲ್,ಹಾಗೂ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಮೋಹನ್ ಕೊತ್ವಾಲ್ ರನ್ನು ಬಂಧಿಸಿದ್ದಾರೆ.

ಈಗಾಗಲೇ ‌ಈ ಪ್ರಕರಣ ಸಂಬಂಧಿಸಿದಂತೆ ಸೂರಿ, ಪ್ರಸಾದ್, ಉಮೇಶ್, ಚೇತನ್, ಶೈಲೇಶ್, ಗಣೇಶ್ ನಾಯ್ಕ್, ರತನ್ ಎಂಬವರನ್ನು ಬಂಧಿಸಲಾಗಿತ್ತು. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಹತ್ತಕೇರಿಕೆದೆ.

Comments are closed.