ಕರಾವಳಿ

ಶಾಸಕ ವೇದವ್ಯಾಸ್ ಕಾಮತ್‌ರಿಂದ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರ ಚುನಾವಣೆಗೆ ಅಭ್ಯರ್ಥಿ ಪರ ಮತ ಯಾಚನೆ

Pinterest LinkedIn Tumblr

ಮಂಗಳೂರು : ರಾಜ್ಯದಲ್ಲಿ ನಡೆಯಲಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಪೂರ್ವಭಾವಿಯಾಗಿ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ರವರು ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ನಗರದ ವಿವಿಧ ಶಾಲಾ / ಕಾಲೇಜುಗಳಾದ ಗೋಕರ್ಣಾಥೇಶ್ವರ ಕಾಲೇಜು , ನಾರಾಯಣಗುರು ಕಾಲೇಜು , ರಥಬೀದಿಯಲ್ಲಿರುವ ಸರಕಾರಿ ಮಹಿಳಾ ಕಾಲೇಜು, ಬಾಲಕಿಯರ ಪದವಿ ಪೂರ್ವ ಕಾಲೇಜು ಲೇಡಿಹಿಲ್, ಸಂತ ಎಲೋಶಿಯಸ್ ಶಾಲೆ,ಉರ್ವ, ಶಿಕ್ಷಕರ ಭೇಟಿ ಮಾಡಿ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ರವಿಶಂಕರ್ ಮಿಜಾರ್ , ಸಂಜಯ್ ಪ್ರಭು , ರಮೇಶ್ ಕಂಡೇಟು , ವಸಂತ್ ಜೆ ಪೂಜಾರಿ , ಭಾಸ್ಕರಚಂದ್ರ ಶೆಟ್ಟಿ , ನಾರಾಯಣ ಗಟ್ಟಿ , ಡಾ . ಮಂಜುಳಾ ರಾವ್ , ಜನಾರ್ಧನ ಕುಡ್ವ , ಮೋಹನ್ ಆಚಾರ್, ಮಹೇಶ್ ಕುಂದರ್ ,ಬ್ರಿಜೇಶ್ ಚೌಟ,ನಿತಿನ್ ಕುಮಾರ್,ಪ್ರಭಾ ಮಾಲಿನಿ,ಸಂಧ್ಯಾ ವೆಂಕಟೇಶ್, ರವಿಚಂದ್ರ, ರವಿ ಚಂದ್ರನ್ ವಕೀಲರು, ಕಾರ್ಪೊರೇಟರ್ ಪೂರ್ಣಿಮಾ, ವಿನಯ್ ಶೆಟ್ಟಿ, ಪೂರ್ಣಿಮಾ ರಾವ್, ದೇವೋಜೀ ರಾವ್ ಮುಂತಾದವರು ಉಪಸ್ಥಿತರಿದ್ದರು.

Comments are closed.