ಕರಾವಳಿ

ಪ್ರಧಾನಿ ಮೋದಿಜಿಯವರ ಜನ್ಮ ನಕ್ಷತ್ರ ಪ್ರಯುಕ್ತ ನಾಳೆ ಮಂಗಳೂರಿನಲ್ಲಿ ವಿಶೇಷ ಪೂಜೆ

Pinterest LinkedIn Tumblr

ಮಂಗಳೂರು, ಮೇ.28 : ಭವ್ಯ ಭಾರತದ ಜನ ಮೆಚ್ಚಿದ ನಾಯಕ, ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಗಲು-ರಾತ್ರಿ ದುಡಿಯುತ್ತಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಜನ್ಮ ನಕ್ಷತ್ರ “ಅನುರಾಧ ನಕ್ಷತ್ರ” ಪ್ರಯುಕ್ತ ಸನ್ಮಾನ್ಯರ ಆಯುಷ್ಯ, ಶ್ರೇಯೋಭಿವೃದ್ದಿಗೋಸ್ಕರ ಹತ್ತು ಸಮಸ್ತರ ಪರವಾಗಿ ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದಲ್ಲಿ ನಾಳೆ (29-05-2018) ಮಂಗಳವಾರ ರಾತ್ರಿ 8.30 ಕ್ಕೆ ವಿಶೇಷ ಪ್ರಾರ್ಥನೆ ಹಾಗೂ ಪೂಜೆಯನ್ನು ಆಯೋಜಿಸಲಾಗಿದೆ.

ಬಳಿಕ ವಿಶೇಷ ಫಲಾಹಾರ ಪ್ರಸಾದ ವಿತರಣೆ ನಡೆಯಲಿರುವುದು. ಮೋದಿ ಭಕ್ತರು ಹಾಗೂ ದೇಶಾಭಿಮಾನಿಗಳು ಈ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮಂಗಳೂರಿನ ಮೋದಿ ಅಭಿಮಾನಿ ಬಳಗದ ಪ್ರಮುಖರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Comments are closed.