ಕರ್ನಾಟಕ

ಸಂಕಷ್ಟಗಳ ನಡುವೆಯೇ ಮುಖ್ಯಮಂತ್ರಿಯಾದ ಬಿ.ಎಸ್.ವೈ ಮಾಡಿದ ಮೊದಲ ಟ್ವೀಟ್ ಏನು ಗೊತ್ತಾ?

Pinterest LinkedIn Tumblr

ಬೆಂಗಳೂರು: ಕರ್ನಾಟಕ ರಾಜ್ಯದ 24 ನೇ ಮುಖ್ಯಮಂತ್ರಿಯಾಗಿ ಬಿ. ಎಸ್ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದಲ್ಲಿ ಹಸಿರು ಶಾಲು ಹೊದ್ದು ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರನ್ನು ಬಿಟ್ಟರೆ ಮೂರನೇ ಭಾರಿ ರಾಜ್ಯದ ಮುಖ್ಯಮಂತ್ರಿಯಾಗುವ ಮೂಲಕ ದಾಖಲೆ ಬರೆದಿದ್ದಾರೆ.

ಮೆಟ್ಟಿಲಿಗೆ ಮನಸ್ಕರಿಸಿ ಒಳಕ್ಕೆ..
ರಾಜಭವನದಿಂದ ವಿಧಾನಸೌಧಕ್ಕೆ ಆಗಮಿಸಿದ ಬಿ.ಎಸ್.ವೈ. ವಿಧಾನಸೌಧದ ಮೆಟ್ಟಿಲಿಗೆ ತಲೆಭಾಗಿ ನಮಸ್ಕರಿಸಿ ಒಳಗಡೆ ತೆರಳಿದ್ದಾರೆ. ಅಸ್ಫ಼್ಯ ವಿಧಾನಸೌಧದದ ಮೂರನೇ ಮಹಡಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹಾಗೂ ಇತರೇ ಶಾಸಕರಿದ್ದಾರೆ.

ಬಿ.ಎಸ್.ವೈ ಟ್ವೀಟ್…
“ಅಭಿವೃದ್ಧಿ ಪರವಾದ ಬಿಜೆಪಿಯ ಆಡಳಿತವು ಕರ್ನಾಟಕದಲ್ಲಿ ಆರಂಭವಾಗಿದೆ. ನಾಡಿನ ಸರ್ವಾಂಗೀಣ ಏಳಿಗೆಯನ್ನು ಗುರಿಯಾಗಿಟ್ಟಕೊಂಡು ಕಾರ್ಯೋನ್ಮುಖವಾಗಿದ್ದೇವೆ” ಎಂದು ಬಿ.ಎಸ್.ವೈ. ಮುಖ್ಯಮಂತ್ರಿಯಾದ ನಂತರ ಮೊದಲ ಟ್ವೀಟ್ ಮಾಡಿದ್ದಾರೆ.

ಬಿ.ಎಸ್.ವೈ. ಮುಖ್ಯಮಂತ್ರಿಯಾದ ಕೂಡಲೇ ಯಾವೆಲ್ಲಾ ಘೋಷಣೆ ಮಾಡಬಹುದು ಎಂಬುದು ಸದ್ಯದ ಕುತೂಹಲವಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ, ಕಾಂಗ್ರೆಸ್ 78 ಸ್ಥಾನ, ಜೆಡಿಎಸ್ 38 ಸ್ಥಾನ ಮತ್ತು ಇತರರು 2 ಸ್ಥಾನ ಗೆದ್ದಿದ್ದರು.

Comments are closed.