ಕರಾವಳಿ

ಚಿದಂಬರಂ ಬಗ್ಗೆ ಬಿಜೆಪಿಗರು ಬಾಯ್ಬಿಟ್ಟರೆ ಕಾಂಗ್ರೆಸ್ ಸರ್ವನಾಶ : ಮತ್ತೆ ಸ್ವಪಕ್ಷೀಯರ ವಿರುದ್ಧ ಪೂಜಾರಿ ವಾಗ್ದಳಿ (ವಿಡೀಯೋ ವರದಿ)

Pinterest LinkedIn Tumblr

ಮಂಗಳೂರು, ಮೇ 9: ಕಾಂಗ್ರೆಸ್ ಮುಖಂಡರಿಂದ ಮೂಲೆಗುಂಪಾಗಿದ್ದ ಹಾಗೂ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯ ನಡೆಸಲು ನಿಶೇಧ ಹೇರಿದ್ದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿಯವರಿಗೆ ಮುಂಬರುವ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬುಧವಾರ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲು ಅವಕಾಶ ನೀಡಿದ ಬೆನ್ನಲ್ಲೇ ಪೂಜಾರಿಯವರ ನಿಷ್ಠುರ ಮಾತಿನಿಂದ ಜಿಲ್ಲಾ ಮುಖಂಡರು ಮುಜುಗರಗೊಳ್ಳಗಾದ ಘಟನೆ ನಡೆದಿದೆ.

ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ಧನ ಪೂಜಾರಿಯವರಿಂದ ತಮ್ಮ ಪಕ್ಷದ ಮುಖಂಡರ ವಿರುದ್ಧವೇ ವಾಗ್ದಾಳಿ

ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಪಕ್ಷದ ಜಿಲ್ಲಾ ಉಸ್ತುವಾರಿಯೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಯು.ಬಿ.ವೆಂಕಟೇಶ್ ಎದ್ದು ಹೋದುದನ್ನು ಕಂಡು ಸಿಡಿಮಿಡಿಗೊಂಡ ಪೂಜಾರಿ, ಚಿದಂಬರಂ ಏನೂಂತ ನನಗೆ ಚೆನ್ನಾಗಿ ಗೊತ್ತು. ಅವರ ಬಗ್ಗೆ ಬಿಜೆಪಿಗರು ಬಾಯ್ಬಿಟ್ಟರೆ ಕಾಂಗ್ರೆಸ್ ಸರ್ವನಾಶ ಆಗಲಿದೆ. ನಿಮಗೆಲ್ಲಾ ಈ ನಾಯಕರನ್ನು ಮೆಚ್ಚಿಸಲು ಅವರ ಹಿಂದೆ ತಿರುಗಾಡುವುದೇ ಆಯಿತು. ನಾನೇನು ಕೆಲಸ ಇಲ್ಲದ್ದಕ್ಕೆ ಇಲ್ಲಿಗೆ ಬಂದದ್ದಾ ಎಂದು ಪತ್ರಕರ್ತರ ಮುಂದೆಯೇ ಆಕ್ರೋಶಿತರಾಗಿ ಪ್ರಶ್ನಿಸಿದರು.

ಮಾತ್ರವಲ್ಲದೇ ತಮ್ಮ ಮಾತನ್ನು ಮುಂದುವರಿಸಿದ ಅವರು, ಇದೇ ಚಿದಂಬರಂ ನನ್ನನ್ನು ಹುಡುಕಿಕೊಂಡು ಸರ್ಕ್ಯೂಟ್ ಹೌಸ್‌ವರೆಗೂ ಬಂದಿದ್ದರು. ಅದೆಲ್ಲಾ ನಿಮಗೆ ಗೊತ್ತಾ? ಎಂದು ಪ್ರಶ್ನಿಸಿದರು. ಇವರ ಈ ಹೇಳಿಕೆಯ ವಿಡೀಯೋ ಈಗ ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗಿದೆ.

ಗೋಷ್ಠಿಯಲ್ಲಿ ಶಾಸಕ ಜೆ.ಆರ್.ಲೋಬೊ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ಜಿಲ್ಲಾ ಉಸ್ತುವಾರಿ ಯು.ಬಿ.ವೆಂಕಟೇಶ್, ಮೇಯರ್ ಭಾಸ್ಕರ ಮೊಯ್ಲಿ, ಮುಡಾ ಅಧ್ಯಕ್ಷ ಸುರೇಶ್ ಬಲ್ಲಾಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ಪಕ್ಷದ ಮುಖಂಡರಾದ ಮುಹಮ್ಮದ್ ಮಸೂದ್, ಕಳ್ಳಿಗೆ ತಾರನಾಥ ಶೆಟ್ಟಿ, ಮುಹಮ್ಮದ್ ಸಲೀಂ, ವಿಜಯ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments are closed.