ಕರಾವಳಿ

ಬಾಹುಬಲಿ ಹಾಡಿನೊಂದಿಗೆ ಮೋದಿ ಎಂಟ್ರಿ – ಮಲ್ಲಿಗೆ ಹಾರ, ಸುಪಾರಿ ಮಾಲೆ ಪೇಟದೊಂದಿಗೆ ಸ್ವಾಗತ

Pinterest LinkedIn Tumblr

ಮಂಗಳೂರು : ಮಂಗಳೂರಿನಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಬಿಜೆಪಿಯ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಬಾಹುಬಲಿ ಹಾಡಿನೊಂದಿಗೆ ವೇದಿಕೆ ಏರಿದರು. ಮಲ್ಲಿಗೆ ಹಾರ, ಸುಪಾರಿ ಮಾಲೆ ಪೇಟದೊಂದಿಗೆ ಮೋದಿಯವರನ್ನು ಈ ವೇಳೆ ಸ್ವಾಗತಿಸಲಾಯಿತು.

ಸಾರ್ವಜನಿಕ ಸಭೆಯಲ್ಲಿ ಸಂಜೆ 4 ಗಂಟೆಯ ವೇಳೆಗೆ ದೇಶ ಭಕ್ತಿ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಬಳಿಕ ಸುಮಾರು 5.30ರ ವೇಳೆಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತು. 6.10ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, 6.50ರ ವೇಳೆಗೆ ನೆಹರೂ ಮೈದಾನ ಪ್ರವೇಶಿಸಿದ್ದರು.

ಬಾಹುಬಲಿ ಹಾಡಿನೊಂದಿಗೆ ವೇದಿಕೆ ಏರಿದ ನರೇಂದ್ರ ಮೋದಿಗೆ ಮಲ್ಲಿಗೆ ಹಾರ, ಸುಪಾರಿ ಮಾಲೆ ಪೇಟದೊಂದಿಗೆ ಸ್ವಾಗತಿಸಲಾಯಿತು. ಮಹಾಲಸಾ ಆರ್ಟ್ಸ್‌ನ ಕಲಾವಿದೆ ಸೌಮ್ಯ ಅವರ ತೆಂಕುತಿಟ್ಟಿನ ಯಕ್ಷಗಾನದ ಬಣ್ಣದ ವೇಷದ ಚಿತ್ರಕಲೆಯನ್ನು ಪ್ರಧಾನಿಗೆ ಈ ಸಂದರ್ಭ ನೀಡಲಾಯಿತು. ಬಳಿಕ 7 ಗಂಟೆ ಸುಮಾರಿಗೆ ನೇರವಾಗಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಸುಮಾರು 47 ನಿಮಿಷಗಳ ಕಾಲ ನೆರೆದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು.

ಕೇಂದ್ರದ ಸಹಾಯಕ ಸಚಿವ ಉತ್ತರ ಪ್ರದೇಶದ ಡಾ. ಮಹೇಂದ್ರ ಸಿಂಗ್ ಚೌಹಾಣ್, ಮಡಿಕೇರಿ ಶಾಸಕ ಅಪ್ಪಚ್ಚುರಂಜನ್, ಕೋಟಾ ಶ್ರೀನಿವಾಸ ಪೂಜಾರಿ, ರುಕ್ಮಯ ಪೂಜಾರಿ, ಅಂಗಾರ, ಬೋಪಯ್ಯ, ರಾಜೇಶ್ ನಾಯ್ಕಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜಾ, ವೇದವ್ಯಾಸ ಕಾಮತ್, ಸಂತೋಷ್ ಕುಮಾರ್ ರೈ, ಡಾ. ಭರತ್ ಶೆಟ್ಟಿ, ಸಂಜೀವ ಮಠಂದೂರು, ಮೀನಾಕ್ಷಿ ಶಾಂತಿಗೋಡು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ವೇದಿಕೆಯಲ್ಲಿದ್ದು ಮಾತನಾಡಿದರು.

Comments are closed.