ಕರಾವಳಿ

ಪ್ರಕಾಶ ರೈ ಧರ್ಮದ ಬಗ್ಗೆ ಮಾತನಾಡಬೇಕಿಲ್ಲ : ಬಿಜೆಪಿ ಮಹಿಳಾ ಮೋರ್ಚಾ

Pinterest LinkedIn Tumblr

ಮಂಗಳೂರು , ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮ್ ಪರ ಅವರ ಧರ್ಮಪತ್ನಿ ಮತ ಯಾಚನೆ ಮಾಡುತ್ತಿದ್ದು , ಅದನ್ನು ನಟ ಪ್ರಕಾಶ್ ರೈ ಟ್ವಿಟರ್‌ನಲ್ಲಿ ಧರ್ಮದ ಅಧಾರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ . ಇದು ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ಪರಿಯೇ ಎಂದು ಪ್ರಶ್ನಿಸಿದ್ದಾರೆ.

ನಾವು ಬಿಜೆಪಿ ಮಹಿಳೆ ಮೋರ್ಚಾದ ಸದಸ್ಯರು ಪ್ರಕಾಶ್ ರೈ ಅವರಲ್ಲಿ ಮನವಿ ಮಾಡುವುದು ಇಷ್ಟೇ : ನೀವು ಒಬ್ಬ ನಟ. ಸದ್ಯ ನೀವು ಮತ, ಧರ್ಮ , ಜಾತಿ ಎಲ್ಲವನ್ನು ಮೀರಿ ಸಂತ ಪದವಿಗೇರಿದ್ದಿರಿ. ನಿಮ್ಮ ಜ್ಞಾನೋದಯ ನಮಗೆ ಸಂತಸ ತಂದಿದೆ. ಆದರೆ ಈ ಧರ್ಮ , ಜಾತಿ ವಿಚಾರಗಳನ್ನು ನಮ್ಮಂತಹ ಸಾಮಾನ್ಯ ಜನರಿಗೆ ಬಿಟ್ಟು ಬಿಡಿ. ನಾವು ಯಾವ ರೀತಿಯ ರಾಜಕೀಯ ಬೇಕಾದರೂ ಮಾಡುತ್ತೇವೆ. ಧರ್ಮದ , ಜಾತಿಯ ವಿಚಾರದಲ್ಲಿ ನಿಮ್ಮಿಂದ ನಾವು ಏನ್ನನ್ನು ತಿಳಿಯಬೇಕಾದುದು ಇಲ್ಲ. ಡಾ . ಮಂಜುಳಾ ರಾವ್ ಬಿ . ಜೆ . ಪಿ ಮಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಅಧ್ಯಕ್ಷೆ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು .

ಕಾಶ್ಮೀರಿದಲ್ಲಿ ಅಥವಾ ಬೇರಲ್ಲೊ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗ ಬೊಬ್ಬೆ ಹೊಡೆಯುವ , ಗೌರಿ ಲಂಕೇಶ್ ಕೊಲೆಯಾದಾಗ ಕಣ್ಣೀರು ಹಾಕುವ ನೀವು ನಮ್ಮ ಕರಾವಳಿ ಜಿಲ್ಲೆಯಲ್ಲಿ ಹಾಡಹಗಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಆದಾಗ ಯಾಕೆ ಒಂದು ಶಬ್ದ ಮಾತನಾಡುವುದಿಲ್ಲ. ಶರತ್ ಮಡಿವಾಳ , ದೀಪಕ್ ರಾವ್ ಹತ್ಯೆಯಾದಾಗ ನಿಮ್ಮ ನಾಲಗೆಯಿಂದ ಒಂದೇ ಒಂದು ಶಬ್ದ ಬರಲಿಲ್ಲವಲ್ಲ. ಆಗಾಗ ಯಾರ ಮನೆಯಲ್ಲಿ ಅವಿತುಕೊಳ್ಳುವಿರಿ ? ಯಾಕೆ ಮಾತನಾಡದಂತೆ ಸಿದ್ದರಾಮಯ್ಯ ಸುಪಾರಿ ಕೊಟ್ಟರೇನು ?

ಬೆಳಗ್ಗೆ ಎದ್ದರೆ ಬರೇ ಬೊಬ್ಬೆ ಇಡುವ ನೀವು ಹುಟ್ಟಿದ್ದು ಯಾವ ಧರ್ಮದಲ್ಲಿ ಸ್ವಾಮಿ? ಯಾವ ನೆಲದಲ್ಲಿ. ನಿಮಗೆ ಈ ಮಣ್ಣಿನ , ನಾಡಿನ ಬಗ್ಗೆ ಗೌರವ ಇದ್ದರೆ ಕಾವೇರಿ ವಿಚಾರದಲ್ಲಿ ಯಾಕೆ ಬಾಯಿ ಮುಚ್ಚಿಕೊಂಡು ಇರುತ್ತಿರಿ. ಹೆಣ್ಣು ಮಕ್ಕಳ ಬಗ್ಗೆ , ಭಾರತೀಯ ಸಂಸ್ಕೃತಿ ಬಗ್ಗೆ , ಹಿಂದೂ ಧರ್ಮದ ಬಗ್ಗೆ ನಿಮ್ಮಂತಹ ನಾಚಿಕೆಗೆಟ್ಟವರಿಂದ ನಾವು ಪಾಠ ಕಲಿಯಬೇಕೆ?

ನಾವು ನಿಮ್ಮ ವೈಯಕ್ತಿಕ ಬದುಕನ್ನು ಇಲ್ಲಿ ಮಾತನಾಡಲು ಹೋಗುವುದಿಲ್ಲ. ಅದನ್ನು ಹೇಳಿದರೆ ನೀವು ಎಷ್ಟು ಹಿಂದೂ ಧರ್ಮ , ಹೆಣ್ಣು ಮಕ್ಕಳಿಗೆ ಗೌರವ ಕೊಡುತ್ತಿರಿ ಎನ್ನುವುದು ಜನರಿಗೆ ಸ್ಪಷ್ಟವಾಗುತ್ತದೆ. ಇನ್ನೊಬ್ಬರ ಬಗ್ಗೆ ಮಾತನಾಡುವ ಮೊದಲು ನಿಮ್ಮ ಆಚಾರ -ವಿಚಾರ ನಡೆ – ನುಡಿಗಳು ಸ್ಪಷ್ಟ, ಸ್ವಚ್ಚವಾಗಿರಲಿ.

ವೇದವ್ಯಾಸ ಕಾಮತ್‌ಅವರ ಪತ್ನಿ ಮತಯಾಚನೆ ಮಾಡುವುದು ನಿಜ.ಇನ್ನೂ ಅದನ್ನು ಮುಂದುವರಿಸುತ್ತಾರೆ. ಯಾಕೆಂದರೆ ಅವರು ಏನು ಮಾಡುತ್ತಾರೆ ಎನ್ನುವುದು ಅವರಿಗೆ ಸ್ಪಷ್ಟತೆ ಇದೆ. ಯಾಕಾಗಿ ಬಿಜೆಪಿಗೆ ಮತ ನೀಡಬೇಕು ಎನ್ನುವುದನ್ನು ಸ್ಪಷ್ಟವಾಗಿ ಮತದಾದರರಿಗೆ ಮನವರಿಕೆ ಮಾಡುತ್ತಿದ್ದಾರೆ. ಈ ನಾಡಿನಲ್ಲಿ ಹೆಣ್ಣು ಮಕ್ಕಳ ಮಾನಮರ್ಯಾದೆ ಉಳಿಯಬೇಕಾದರೆ , ಹೆಣ್ಣು ಮಕ್ಕಳು ಯಾವುದೇ ಭಯವಿಲ್ಲದೇ ಓಡಾಡಬೇಕಾದರೆ ಹಿಂದೂ ಧರ್ಮದ ಉಳಿಯುವುದು ಅಗತ್ಯ. ಅದಕ್ಕೆ ಬಿಜೆಪಿಗೆ ಮತ ನೀಡಿ ಎಂದು ಅವರು ಹೇಳಿದ್ದಾರೆ. ನಿಮ್ಮಂತಹ ಭಯೋತ್ಪಾದಕರಿಂದ ಈ ನಾಡು ಸುರಕ್ಷಿತವಾಗಿರಬೇಕಾದರೆ ಖಂಡಿತವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆಗ ಮಾತ್ರ ಹಿಂದೂ ಧರ್ಮ ಉಳಿಯಲಿದೆ.

ಯಾರೋ ಕೊಡುವ ಹಣ , ಸೈಟು, ಪ್ರಶಸ್ತಿಗಳಿಗೆ ಹಂಬಲಿಸುವ ನಿಮ್ಮಂತಹವರು ಯಾಕೆ ಚುನಾವಣೆಗೆ ಬರುವುದಿಲ್ಲ. ಚುನಾವಣೆಯಲ್ಲಿ ನಿಂತು ಗೆದ್ದು , ದೇಶವನ್ನು ಸ್ವ ಚ್ಚಗೊಳಿಸಬಹುದಲ್ಲವೇ ?

ಅಲ್ಲಿ ತಮಿಳುನಾಡಿನಲ್ಲಿ ಸಿನಿಮಾ ರಂಗದಲ್ಲಿ ಕೆಲಸ ಇಲ್ಲದಾಗ , ಇಲ್ಲಿ ಬಂದು ಬಾಯಿ ಬಾಯಿ ಬಡಿಯುವ ನೀವು ಕನಿಷ್ಠ ಸಿನಿಮಾ ರಂಗದ ಉದ್ದಾರಕ್ಕಾಗಿಯಾದರೂ ಏನಾದರೂ ಮಾಡಬಹುದಿಲ್ಲ ಸ್ವಾಮಿ ? ಅಲ್ಲಿನ ಬಡವರು , ಕೂಲಿ ಕಾರ್ಮಿಕರಿಗೆ ಒಂದಿಷ್ಟು ಸಹಾಯ ಮಾಡಿ ಪುಣ್ಯ ಕಟ್ಟಿಕೊಳ್ಳಬಹುದಿಲ್ಲ.

ಮೊದಲು ಹಿಂದೂ ಧರ್ಮ ಎಂದರೆ ಏನು ? ತಿಳಿದುಕೊಳ್ಳಿ. ಅದು ಎಲ್ಲಿಯೂ ಇತರ ಧರ್ಮಗಳ ವಿರೋಧಿಯಲ್ಲವೇ ಅಲ್ಲ. ಅದನ್ನು ಮೊದಲು ತಿಳಿದುಕೊಳ್ಳಲು ಪ್ರಯತ್ನಿಸಿ. ಹಿಂದೂ ಧರ್ಮ ಎನ್ನುವುದು ಒಂದು ಸಂಸ್ಕೃತಿ. ನಾವೆಲ್ಲರೂ ಅದರಲ್ಲಿ ಒಂದೋಣ ಎನ್ನುವುದು ತಪ್ಪು ಅನ್ನೋದಾದರೆ , ನಿಮ್ಮಂತಹ ಮೂರ್ಖರಿಂದ ಬೇರೆ ಏನು ನಿರೀಕ್ಷೆ ಮಾಡೋಣ.

ಕಾಂಗ್ರೆಸ್ ಸರ್ಕಾರ ಲಿಂಗಾಯಿತ ಹಾಗೂ ವೀರಶೈವರನ್ನು ವಿಭಜಿಸಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆಯಲ್ಲ , ಇದಕ್ಕೆ ನಿಮ್ಮ ಪ್ರತಿಕ್ರಿಯೆ ಇಲ್ಲವೇ ? ಪ್ರಕಾಶ್ ರೈ ಅವರೇ. ಅದು ಧರ್ಮದ ವಿಚಾರ ಅಲ್ಲವೇ ? ಅದರ ಬಗ್ಗೆ ನೀವು ಯಾಕೆ ಮಾತನಾಡುವುದಿಲ್ಲ. ಅವರು ನಿಮಗೆ ಅನ್ನ ನೀಡುವವರೇ ? ಧೈರ್ಯ ಇದ್ದರೆ ಅದರ ಬಗ್ಗೆ ಮಾತನಾಡಿಸಿ.

ಉಳ್ಳಾಲದಲ್ಲಿ ನಡೆಯುವ ಸಮಾವೇಶ ಕೂಡಾ ಚುನಾವಣಾ ದೃಷ್ಟಿಯಿಂದ ಆಯೋಜಿಸಿದ್ದು, ಅದರಲ್ಲಿ ನೀವು ಭಾಗವಹಿಸುತ್ತಿರಿ. ಅದಕ್ಕೆ ಕಾಂಗ್ರೆಸ್ ಪ್ರಾಯೋಜಕತ್ವ ನೀಡುತ್ತದೆ. ನಿಜಕ್ಕೂ ನೀವು ಧರ್ಮ , ಜಾತಿ , ಸಮಾಜದಿಂದ ದೂರ ನಿಂತ ಸಂತ ಆದರೆ ನೀವೇಕೆ ಅದರಲ್ಲಿ ಭಾಗವಹಿಸುವಿರಿ. ನೀವು ಜನರಿಗೆ ಏನ್ನನ್ನು ಹೇಳಲು ಹೊರಟಿದ್ದಿರಿ. ನೇರವಾಗಿ ಹೇಳಿಯಲ್ಲ , ನಾನು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಈ ಎಲ್ಲ ನಾಟಕಗಳು ಯಾಕೆ ? ಧೈರ್ಯವಾಗಿ ಕಣಕ್ಕೆ ಬನ್ನಿ . ಹೇಡಿತನ ಯಾಕೆ ? ಇಲ್ಲಿನ ಜನರು ಮೂರ್ಖರು ಅಂತ ತಿಳಿದುಕೊಂಡಿದ್ದಿರಿ ಏನು ? ಎಂದು ಡಾ . ಮಂಜುಳಾ ರಾವ್ ಬಿ . ಜೆ . ಪಿ ಮಂಗಳೂರು ದಕ್ಷಿಣ ಮಹಿಳಾ ಮೋರ್ಚಾ ಅಧ್ಯಕ್ಷೆ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು . ಈ ಸಂಧರ್ಭದಲ್ಲಿ ಶ್ರೀಮತಿ ಕಾತ್ಯಾಯನಿ , ಪೂರ್ಣಿಮಾ ರಾವ್ ಹಾಗೂ ಮನಪಾ ಸದಸ್ಯೆ ಪೂರ್ಣಿಮಾ ಉಪಸ್ಥಿತರಿದ್ದರು

Comments are closed.