ಕರಾವಳಿ

ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಕಾಪುವಿನಿಂದ ಸ್ಪರ್ಧಿಸಲಿದ್ದು ಅವರ ಪಕ್ಷದ ಚಿಹ್ನೆಯೇನು ಗೊತ್ತಾ?

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಮ್ಮ ಪಕ್ಷದ ಚಿಹ್ನೆಯನ್ನು ಘೋಷಣೆ ಮಾಡಿದ್ದಾರೆ. ಅನುಪಮಾ ಶೆಣೈ ಉಡುಪಿಯ ಕಾಪು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಭಾರತೀಯ ಜನಶಕ್ತಿ ಕಾಂಗ್ರೆಸ್ ಚಿಹ್ನೆ ಬೆಂಡೆಕಾಯಿ. ಡಿವೈಎಸ್ಪಿ ಹುದ್ದೆಗೆ ರಾಜಿನಾಮೆ ಕೊಟ್ಟಾಗ ನಾನು ಬಿಜೆಪಿ ಎಂದು ಬಿಂಬಿಸಲಾಗಿತ್ತು. ಆದರೇ ನಿಜವಾಗಲೂ ನಾನು ಬಿಜೆಪಿ ಅಲ್ಲ. ನನಗೆ ಕಾಂಗ್ರೆಸ್ ಬಿಜೆಪಿ ಸಮಾನ ವೈರಿಗಳು ಎಂದಿದ್ದಾರೆ.

ಮೋದಿನ ಟೀಕೆ ಮಾಡಿದರೆ ಅವರ ಬೆಂಬಲಿಗರು ಕೆರಳುತ್ತಾರೆ. ಅದರಿಂದ ನನ್ನ ಜನಪ್ರಿಯತೆ ಹೆಚ್ಚಾಗಿ ವೋಟ್ ಬ್ಯಾಂಕ್ ಮಾಡಬಹುದು ಎಂಬ ಉದ್ದೇಶ ನನಗಿಲ್ಲ. ಲೋಕಸಭಾ ಚುನಾವಣೆ ಬರಲಿ. ಮತ್ತೆ ಮೋದಿ ವಿರುದ್ದ ಟೀಕೆ ಆರಂಭಿಸುತ್ತೇನೆ.

Comments are closed.