ಕರಾವಳಿ

ಕುಂದಾಪುರ(ಕೋಡಿ): ಟಾಯ್ಲೆಟ್ ಪಿಟ್ ಕ್ಲೀನ್‌ಗೆ ಹೋದ ಯುವಕ ಪಿಟ್‌ಗೆ ಬಿದ್ದು ಸಾವು

Pinterest LinkedIn Tumblr

ಕುಂದಾಪುರ: ಟಾಯ್ಲೆಟ್ ಪಿಟ್ ಕ್ಲೀನ್ ಮಾಡಲು ಹೋದ ಯುವಕನೋರ್ವ ಪಿಟ್‌ಗೆ (ಟಾಯ್ಲೆಟ್ ಹೊಂಡ)ಕ್ಕೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕೋಡಿಯ ಎಂ ಕೋಡಿ ಎಂಬಲ್ಲಿ ಶನಿವಾರ ನಡೆದಿದೆ.

ಮೂಲತಃ ತೆಕ್ಕಟ್ಟೆ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಸಂದೀಪ್(32) ಮೃತ ವ್ಯಕ್ತಿಯಾಗಿದ್ದು ಸದ್ಯ ಅವರ ಮೃತದೇಹವನ್ನು ಕುಂದಾಪುರ ಶವಾಗಾರದಲ್ಲಿರಿಸಲಾಗಿದೆ.

ಘಟನೆ ವಿವರ:
ಕೋಡಿಯ ಉಸ್ಮಾನ್ ಎಂಬುವರ ಮನೆಯಲ್ಲಿ ಭಾನುವಾರದಂದು ಶುಭ ಕಾರ್ಯವಿದ್ದು ಈ ಹಿನ್ನೆಲೆ ಟಾಯ್ಲೆಟ್ ಪಿಟ್ ಶುಚಿಗೊಳಿಸಲು ಸ್ಥಳೀಯ ವ್ಯಕ್ತಿಯೋರ್ವನ ಸಹಾಯದಿಂದ ತೆಕ್ಕಟ್ಟೆಯ ಸಂದೀಪ್ ಎನ್ನುವರನ್ನು ಕರೆಸಲಾಗಿತ್ತು. ಆತ ಟಾಯ್ಲೆಟ್ ಪಿಟ್ ಶುಚಿ ಕೆಲಸಕ್ಕೆ ಅಣಿಯಾಗಿ ಹೊಂಡಕ್ಕೆ ಇಳಿದಿದ್ದು ಅಲ್ಲಿಯೇ ಉಸಿರುಗಟ್ಟಿ ಮೇಲಕ್ಕೆ ಬರಲಾಗದೇ ಅಸ್ವಸ್ಥನಾದ ಸಂದೀಪನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಕೂಡ ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಕೆಲಸಕ್ಕೆ ಕರೆತಂದ ಉಸ್ಮಾನ್ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಸ್ಥಳಕ್ಕೆ ಡಿವೈಎಸ್ಪಿ ದಿನೇಶ್ ಕುಮಾರ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ನಡೆಯುತ್ತಿದೆ.

ಮಲಹೊರುವ ಪದ್ದತಿ ನಿಶೇಧ ಹಾಗೂ ಮಾನವ ಶಕ್ತಿಯಿಂದ ಮಲ ತೆಗೆಯುವ ಪದ್ದತಿ ಕಾನೂನು ಬಾಹಿರವಾದರೂ ಕೂಡ ಅದನ್ನು ಮಾಡಲು ಹೊರಟ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಿದೆ. ಈ ಪದ್ದತಿ ಮಾಡಿದ ತಪ್ಪಿತಸ್ಥರ ವಿರುದ್ಧ ಸಂಬಂದಪಟ್ಟ ಎಲ್ಲಾ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಮೃತ ವ್ಯಕ್ತಿಯ ಸಾವಿಗೆ ನ್ಯಾಯ ಒದಗಿಸುವ ಕಾರ್ಯವಾಗಬೇಕು. ಸೂಕ್ತ ಪರಿಹಾರ ನೀಡಬೇಕು.
– ಸತೀಶ್ ತೆಕ್ಕಟ್ಟೆ (ದಲಿತ ಮುಖಂಡ)

Comments are closed.